ಸಾಂಸ್ಕೃತಿಕ, ಸಾಹಿತ್ಯದ ನಾಯಕ ಬಸವಣ್ಣ: ಕೆ.ನಟರಾಜ್

KannadaprabhaNewsNetwork |  
Published : Apr 21, 2026, 01:45 AM IST
20ಕೆಎಂಎನ್ ಡಿ30 | Kannada Prabha

ಸಾರಾಂಶ

ಬಸವಣ್ಣನವರು ಹಾಕಿ ಕೊಟ್ಟಂತಹ ಅನುಭವ ಮಂಟಪ ವನ್ನು ಇಂದು ಪಾರ್ಲಿಮೆಂಟ್ ಮಾಡಲಾಗಿದೆ. ಇಡೀ ಜಗತ್ತೇ ಅವರನ್ನು ಮೆಚ್ಚಿದೆ. ನಾವು ಅವರ ಹಾದಿಯಲ್ಲಿ ನಡೆದರೆ ಬಸವ ಜಯಂತಿಯನ್ನು ಆಚರಿಸುವುದು ಅರ್ಥಪೂರ್ಣವಾಗಿದೆ.

ಹಲಗೂರು:

ಕಾಯಕವೇ ಕೈಲಾಸ ಎಂದು ಸಾರಿದ ಬಸವೇಶ್ವರರು ನಮ್ಮ ನಾಡಿನ ಸಂಸ್ಕೃತಿ ಹಾಗೂ ಸಾಹಿತ್ಯದ ಬಗ್ಗೆ ಹೆಚ್ಚು ಹೋರಾಟ ಮಾಡಿದ ಮಹಾನ್ ಪುರುಷ ಎಂದು ನಾಡ ಕಚೇರಿ ಉಪ ತಹಸೀಲ್ದಾರ್ ಕೆ.ನಟರಾಜ್ ತಿಳಿಸಿದರು.

ನಾಡಕತೇರಿ ಆವರಣದಲ್ಲಿ ಬಸವ ಜಯಂತಿ ಅಂಗವಾಗಿ ಶ್ರೀಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಪೂಜಿ ಸಲ್ಲಿಸಿ ಮಾತನಾಡಿ, ಬಸವಣ್ಣರ ಆದರ್ಶ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎಂದರು.

ನಂದಿಪುರದ ಎನ್.ಕೆ.ಕುಮಾರ್ ಮಾತನಾಡಿ, 12ನೇ ಶತಮಾನದಲ್ಲಿ ಬಸವಣ್ಣನವರು ಹಾಕಿಕೊಟ್ಟಂತ ಹೆಜ್ಜೆ, ಅಂತರ್ಜಾತಿ ವಿವಾಹ, ಜಾತಿ ಪದ್ಧತಿಯನ್ನು ತೊಲಗಿಸುವುದು ಮತ್ತು ಅವರ ಹಾಕಿಕೊಟ್ಟ ಸಾಮಾಜಿಕ ಸಮಾನತೆ ಇವು ನಮಗೆ ಮಾದರಿಯಾಗಲಿದೆ ಎಂದರು.

ಬಸವಣ್ಣನವರು ಹಾಕಿ ಕೊಟ್ಟಂತಹ ಅನುಭವ ಮಂಟಪ ವನ್ನು ಇಂದು ಪಾರ್ಲಿಮೆಂಟ್ ಮಾಡಲಾಗಿದೆ. ಇಡೀ ಜಗತ್ತೇ ಅವರನ್ನು ಮೆಚ್ಚಿದೆ. ನಾವು ಅವರ ಹಾದಿಯಲ್ಲಿ ನಡೆದರೆ ಬಸವ ಜಯಂತಿಯನ್ನು ಆಚರಿಸುವುದು ಅರ್ಥಪೂರ್ಣವಾಗಿದೆ ಎಂದರು.

ಈ ವೇಳೆ ನಾಡಕಚೇರಿ ಸಿಬ್ಬಂದಿ ರಾಜಸ್ವ ನಿರೀಕ್ಷಕ ಮಧುಸೂದನ್, ಗ್ರಾಮ ಆಡಳಿತಾಧಿಕಾರಿ ಸೋಮಣ್ಣ, ಸಿದ್ದರಾಯಿಮೌಳಿ, ಗ್ರಾಮಸೇವಕರಾದ ಶಿವಪ್ರಕಾಶ್, ಮಹಾದೇವಸ್ವಾಮಿ ,ಕನಕ, ಪುಟ್ಟಸ್ವಾಮಿ, ಅನಿಲ್, ಬಿ.ಎಸ್. ನವೀನ, ನಂಜುಂಡ, ನಂದನ್ ಸೇರಿದಂತೆ ಇತರರು ಇದ್ದರು.ಬಸವ ಜಯಂತಿ ಆಚರಣೆ

ಹಲಗೂರು: ಗಿರೀಶ್ ಪಾಸ್ಟ್ ಫುಡ್ ಇವರ ವತಿಯಿಂದ ಬಸವೇಶ್ವರ ಜಯಂತಿ ನಡೆಯಿತು.ಬಸವಣ್ಣನವರ ಮತ್ತು ಶಿವಕುಮಾರ್ ಸ್ವಾಮೀಜಿ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿದ ನಂತರ ಗಿರೀಶ್ ಮಾತನಾಡಿ, ಐದು ವರ್ಷಗಳಿಂದ ನಾವು ಬಸವೇಶ್ವರ ಜಯಂತಿಯನ್ನು ನಡೆಸಿಕೊಂಡು ಬರುತ್ತಿದ್ದು, ಮುಂದಿನ ವರ್ಷ ದೇವರ ಆಶೀರ್ವಾದವಿದ್ದರೆ ನಮ್ಮ ಹಲಗೂರಿನಲ್ಲಿ ರಥೋತ್ಸವವನ್ನು ಎಲ್ಲರೂ ಸೇರಿ ಮಾಡುವ ಯೋಜನೆ ರೂಪಿಸಿದ್ದೇವೆ ಎಂದರು.

ಶಿವಪ್ರಸಾದ್ ಮಾತನಾಡಿ, ನಾಡಿನಲ್ಲಿ ವಾಸಿಸುವ ಪ್ರತಿಯೊಬ್ಬರೂ ಸಮಾನರು, ಕಾಯಕವೇ ಕೈಲಾಸ ಎಂದು ತಿಳಿಸಿಕೊಟ್ಟ ಬಸವಣ್ಣನವರು ಅವರ ಆದರ್ಶ ಮಾರ್ಗದರ್ಶನ ನಮಗೆಲ್ಲ ಮಾದರಿಯಾಗಿದೆ ಎಂದರು.ಈ ವೇಳೆ ಮಾಲಿನಿಗಿರೀಶ್, ಶಿವಮ್ಮ, ಗಿರೀಶ್, ಕಿರಣ, ಕುಮಾರ್, ಮಹದೇವ ಸ್ವಾಮಿ, ಸ್ವಾಮಿ, ನಂಜುಂಡಸ್ವಾಮಿ, ಪ್ರಭು, ಬಸವರಾಜು, ಮಹೇಶ, ಪ್ರಮೋದ್ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆ ವೈಷಮ್ಯದಿಂದಾಗಿ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ವ್ಯಕ್ತಿ ಕೊಲೆ
ಜನರಿಗೆ ವಚನಾಮೃತ ಉಣಬಡಿಸಿದ ಬಸವಣ್ಣನವರು: ಶಾಸಕ ಪುಟ್ಟರಂಗಶೆಟ್ಟಿ