ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಕಲಾಮಂದಿರದಲ್ಲಿ ಜಮಾತೆ ಇಸ್ಲಾಮಿ ಹಿಂದ್ ಮೈಸೂರು ಶಾಖೆ ವತಿಯಿಂದ ವಲಯ ಸಂಚಾಲಕ ಅಬ್ದುಲ್ ಸಲಾಂ ನೇತೃತ್ವದಲ್ಲಿ ಪ್ರವಾದಿ ಮಹಮ್ಮದ್ ಬದುಕಿನ ಚಿತ್ರಣವನ್ನು ಪ್ರಸ್ತುತ ಪಡಿಸುವ ಸಾರ್ವಜನಿಕ ಸೀರತ್ ಸಮಾವೇಶದಲ್ಲಿ ಅವರು ಪ್ರವಾದಿ ಮಹಮ್ಮದ್ ಲೇಖನ ಸಂಕಲನ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರವಾದಿ ಮಹಮ್ಮದ್ ರ ಜೀವನ ಸಂದೇಶ ತಿಳಿಸುವ ಈ ಪುಸ್ತಕದಲ್ಲಿ ಅವರ ಕಾಲಘಟ್ಟದಲ್ಲಿ ಎದಿರುಸಿದ ಘಟನೆಗಳು ಒಟ್ಟಾರೆಯಾಗಿ ಬಹುಮುಖ ಪ್ರತಿಭೆ ಆಗಿರುವ ಮಹಮ್ಮದ್ ಪೈಗಂಬರ್ ಅವರು ಧಾರ್ಮಿಕ ಮುಖಂಡರಾಗಿ ಬೆಳೆದು ಬಂದ ಚಿತ್ರಣ ಕಟ್ಟಿಕೊಟ್ಟಿರುವುದಾಗಿ ಅವರು ಹೇಳಿದರು.ಇಸ್ಲಾಂ ಧರ್ಮದ ಬಗ್ಗೆ ತಿಳಿಸಿಕೊಡುವ ಹಲವು ಲೇಖನಗಳು ಬಂದಿದೆ. ಕುರಾನ್ ಕೂಡ ಕನ್ನಡದಲ್ಲಿ ಬಂದಿದೆ. ಭಾರತದಲ್ಲಿ ಸುಮಾರು 25 ಕೋಟಿ ಜನ ಸಂಖ್ಯೆ ಇರುವ ಇಸ್ಲಾಂ ಧರ್ಮದ ಜನರಿದ್ದಾರೆ. ಭಾರತದಂತ ಬಹು ಸಂಸ್ಕೃತಿಯ ನಾಡಿನಲ್ಲಿ ಇಸ್ಲಾಂ ಧರ್ಮದ ಬಗ್ಗೆ ಹೆಚ್ಚು ಪ್ರಚಾರ ಮಾಡಿದ್ದರೆ, ಮಹಮ್ಮದ್ ಅವರ ಬಗ್ಗೆ ವಿರೋಧಿ ಧೋರಣೆ ಹೊಂದಿದ್ದವರು ಕೂಡ ಮಾತನಾಡುತ್ತಿರಲಿಲ್ಲ ಎಂದರು.
ಸೆಂಟ್ಫಿಲೋಮಿನಾ ಚರ್ಚ್ ನ ಧರ್ಮಗುರು ಸ್ಟೇನಿ ಡಿ. ಅಲ್ಮೆಡಾ ಮಾತನಾಡಿ, ಶಾಂತಿಯನ್ನು ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿ ಪ್ರವಾದಿಗಳು ಸಾರಿದ್ದಾರೆ ಎಂದರು.
ಜಗತ್ತಿನ ಎಲ್ಲಾ ಸಮಸ್ಯೆಗಳ ಮೂಲಕ ಕಾರಣ ಜನಾಂಗೀಯತೆ, ಅಂದರೆ ನಾನು ನಿನಗಿಂತ ಶ್ರೇಷ್ಠ ಎನ್ನುವುದು. ಇಸ್ರೇಲ್ ನವರು ನಮ್ಮಜೀವಕ್ಕೆ ಇರುವ ಬೆಲೆ ಪ್ಯಾಲೇಸ್ಟೇನ್ ನವರ ಜೀವಕ್ಕೂ ಅಷ್ಟೇ ಬೆಲೆ ಇದೆ ಎನ್ನುವುದನ್ನು ಇವತ್ತಿಗೂ ಒಪ್ಪಿಕೊಳ್ಳಲ್ಲ. ಅಸಮಾನತೆ ಇಲ್ಲದ ಸಮಾನ ಗೌರವ ಆಗಿತ್ತು ಪ್ರವಾದಿ ಮುಹಮ್ಮದ್ ಅವರ ಸಮಾಜ. ದೇವರ ಹೆಸರಲ್ಲಿ ಯಾರೂ ಯಾರನ್ನೂ ಕೂಡ ಮೋಸ ಮಾಡುವುದು ಸಾಧ್ಯವಿಲ್ಲ. ದೇವರ ಹೆಸರಲ್ಲಿ ಶೋಷಣೆ ಮಾಡುವುದು ಸುಲಭದ ಕೆಲಸ ಎಂದರು.
ಶಾಸಕ ಕೆ. ಹರೀಶ ಗೌಡ, ಜಮಾತೆ ಇಸ್ಲಾಂ ಹಿಂದ್ ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜನಾಬ್ ಮಹಮ್ಮದ್ ಕುಂಇ್ಹಿ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ, ಸುಯೋಗ್ ಆಸ್ಪತ್ರೆಯ ಡಾ.ಎಸ್.ಪಿ. ಯೋಗಣ್ಣ, ಸವಿತಾ ಪ. ಮಲ್ಲೇಶ್, ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ, ಸಿದ್ದಿಖ್, ಡಾ. ಸಯೈದ್ ಶಕಿಬುರ್ ರೆಹಮಾನ್ ಮತ್ತಿತರರು ಇದ್ದರು.