ದೊಡ್ಡಬಳ್ಳಾಪುರ: ಗ್ರಾಮೀಣ ಪ್ರದೇಶದಲ್ಲಿ ಕಲಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುವುದು ಇಲಾಖೆಯ ಆದ್ಯತೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್ ತಿಳಿಸಿದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್.ರವಿಕಿರಣ್ ಮಾತನಾಡಿ, ಹಾಡಿಗೆ ತಕ್ಕ ಆಂಗಿಕ ಚಲನೆ ಮಾತ್ರವೇ ನೃತ್ಯವಲ್ಲ. ನೃತ್ಯ ಎಂಬುದು ಸೃಜನಶೀಲ ಅಭಿವ್ಯಕ್ತಿಯಾಗಿದ್ದು, ಭಾವ, ರಾಗ, ತಾಳದ ಜೊತೆಗೆ ನೃತ್ಯಾಭಿವ್ಯಕ್ತಿ ನಡೆದಾಗ ಅದು ಸಹೃದಯಿ ಪ್ರೇಕ್ಷಕರ ಮನಸ್ಸನ್ನು ಮುಟ್ಟುತ್ತದೆ. ಭಾವವಿಲ್ಲದ ಆಂಗಿಕ ಚಲನೆ ಅರ್ಥಹೀನ. ಕಲಾ ಪ್ರಕಾರಗಳಲ್ಲಿ ಹೆಚ್ಚು ಹೆಚ್ಚು ಮಕ್ಕಳು ಆಸಕ್ತಿ ಬೆಳೆಸಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ನಗರಸಭೆ ಮಾಜಿ ಅಧ್ಯಕ್ಷ ತ.ನ.ಪ್ರಭುದೇವ್ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ಇತ್ತೀಚಿನ ದಿನಗಳಲ್ಲಿ ನೃತ್ಯ, ಯೋಗ ಸೇರಿದಂತೆ ವಿವಿಧ ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ದೊರೆಯುತ್ತಿದೆ. ಇಲ್ಲಿನ ಮಕ್ಕಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಈ ನಿಟ್ಟಿನಲ್ಲಿ ನಾಟ್ಯ ಮಯೂರಿ ಕಲಾ ಕೇಂದ್ರದ ಕೊಡುಗೆಯೂ ಗಣನೀಯ ಎಂದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸಲಾಯಿತು. ಕೇಂದ್ರದ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಸಾಮೂಹಿಕ ನೃತ್ಯ, ಜಾನಪದ ನೃತ್ಯ, ಭರತನಾಟ್ಯ, ಗಾಯನ ನೆರವೇರಿತು.ಕನ್ನಡ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನಾಗರಾಜ್, ನಾಟ್ಯ ಮಯೂರಿ ಕಲಾ ಕೇಂದ್ರ ಟ್ರಸ್ಟ್‌ನ ಸಂಸ್ಥಾಪಕ ಅರುಣಾಮೂರ್ತಿ, ಕಾರ್ಯದರ್ಶಿ ಹಂಸವೇಣಿ ವಿನಯ್‌ಕುಮಾರ್, ಅಧ್ಯಕ್ಷೆ ಮೈತ್ರಾಅರುಣಾಮೂರ್ತಿ, ಕನ್ನಡ ಜಾಗೃತ ಪರಷತ್ತಿನ ಅಧ್ಯಕ್ಷ ಕೆ.ವೆಂಕಟೇಶ್, ಮಹಿಳಾ ಸಮಾಜದ ಅಧ್ಯಕ್ಷೆ ಎಂ.ಕೆ.ವತ್ಸಲ, ಲಯನ್ಸ್ ಕ್ಲಬ್ ಅಧ್ಯಕ್ಷ ನಂಜುಂಡೇಶ್ವರಸ್ವಾಮಿ, ಉಪಾಧ್ಯಕ್ಷೆ ವಸುಂಧರಾದೇವಿ, ಮಹಿಳಾ ಸಮಾಜ ಸದಸ್ಯೆ ಕೆ.ಜೆ.ಕವಿತಾ, ಲಾಸ್ಯ ತಾಂಡವ ನೃತ್ಯ ಕಲೆಯ ಅನುಷಾ, ಅಧ್ಯಾಪಕಿ ಕೆ.ಎಚ್.ಸುಮಲತಾ, ಕಲಾವಿದೆ ನಾಗರತ್ನಮ್ಮ, ಕೆಂಪೇಗೌಡ ಒಕ್ಕಲಿಗರ ಸಂಘದ ಲಕ್ಷ್ಮಿ, ಎಂಎಬಿಎಲ್ ವಿದ್ಯಾ ಸಂಸ್ಥೆಯ ಬಿ.ಪಿ.ಪ್ರಿಯಾಂಕ, ಆರ್ಯವೈಶ್ಯ ಸಂಘದ ಕವಿತಾ ರಾಜಶೇಖರ್ ಮತ್ತಿತರರಿದ್ದರು.
21ಕೆಡಿಬಿಪಿ2-ದೊಡ್ಡಬಳ್ಳಾಪುರದ ನಾಟ್ಯ ಮಯೂರಿ ಕಲಾ ಕೇಂದ್ರ ಟ್ರಸ್ಟ್‌ನಿಂದ ನಡೆದ ಕರುನಾಡ ಸಾಂಸ್ಕೃತಿ ಉತ್ಸವಕ್ಕೆ ಗಣ್ಯರು ಚಾಲನೆ ನೀಡಿದರು.
(ಈ ಫೋಟೊವನ್ನು ಪ್ಯಾನಲ್‌ನಲ್ಲಿ ಬಳಸಿ)21ಕೆಡಿಬಿಪಿ3-
ದೊಡ್ಡಬಳ್ಳಾಪುರದಲ್ಲಿ ನಾಟ್ಯ ಮಯೂರಿ ಕಲಾ ಕೇಂದ್ರ ಟ್ರಸ್ಟ್ ನೇತೃತ್ವದಲ್ಲಿ ಕನ್ನಡ ಜಾಗೃತ ಭವನದಲ್ಲಿ 14ನೇ ವಾರ್ಷಿಕೋತ್ಸವ ಮತ್ತು ಕರುನಾಡ ಸಾಂಸ್ಕೃತಿಕ ಉತ್ಸವ-2026 ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ನಾಟ್ಯ ಪ್ರತಿಭೆಗಳನ್ನು ಅಭಿನಂದಿಸಲಾಯಿತು.