ಉಳ್ಳಾಲ: ಭಾಷೆ ಸದ್ಗುಣಗಳ ಸಿಂಚನವಾಗಿದೆ. ಭಾಷೆ ಬೆಳೆದರೆ ಸಂಸ್ಕೃತಿಯೂ ಉಳಿಯುತ್ತದೆ. ಸಂಸ್ಕೃತಿ ಉಳಿದರೆ ದೇಶವೇ ಉಳಿಯುತ್ತದೆ. ಭಾಷೆಯು ಹೃದಯಗಳ ಮಿಲನವಾಗಿದೆ ಎಂದು ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ನಿರ್ದೇಶಕ ಡಾ.ಸುಧೀರ್ ರಾಜ್.ಕೆ ಅಭಿಪ್ರಾಯಪಟ್ಟಿದ್ದಾರೆ.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಾ. ಎಂ.ಎಸ್.ಮೂಡಿತ್ತಾಯ ಮಾತನಾಡಿ, ಭಾವನೆಗಳನ್ನು ವ್ಯಕ್ತಪಡಿಸಲು ಭಾಷೆಯ ಅಗತ್ಯವಿದೆ. ಭಾಷಾ ದಿವಸದ ಮುಖ್ಯ ಉದ್ದೇಶ ನಮ್ಮ ಭಾಷೆಗಳನ್ನು ಪ್ರೀತಿಸಿ ಸಂಭ್ರಮಿಸುವುದು ಮತ್ತು ಇತರ ಬಾಷೆಗಳನ್ನು ಗೌರವಿಸುವುದಾಗಿದೆ. ಭಾಷೆಯ ಮೇಲೆ ಅಭಿಮಾನ ಇರಬೇಕೇ ಹೊರತು ದುರಭಿಮಾನ ಇರಬಾರದೆಂದರು.ಭಾರತೀಯ ಭಾಷಾ ದಿವಸದ ಪ್ರಯುಕ್ತ ಜರಗಿದ ವಿವಿಧ ಸ್ಪರ್ದೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಡೀನ್ ಬಿ.ಸಂದೀಪ್ ರೈ, ಎನ್ಎಸ್ಎಸ್ ಸಂಯೋಜಕರಾದ ಶಶಿಕುಮಾರ್ ಮತ್ತಿತರರಿದ್ದರು.ಕಾರ್ಯಕ್ರಮದ ಸಂಯೋಜಕಿ ಡಾ. ಸಾಯಿಗೀತ ಸ್ವಾಗತಿಸಿ, ವಂದಿಸಿದರು. ಶ್ರೇಯಾ ಮತ್ತು ಶರತ್ ನಿರೂಪಿಸಿದರು.
ಬಳಿಕ ಮಲಯಾಳಮ್ ಭಾಷೆಯ ಅರ್ಥ ವಿವರಣೆ, ತುಳು ಭಾಷೆಯ ಭಾಗವತಿಕೆಯುಳ್ಳ ‘ಮಹಿಷವಧೆ’ ಯಕ್ಷಗಾನ ಪ್ರದರ್ಶನ ನಡೆಯಿತು.