ಕಪ್‌ತುಳಿತ: ಇಬ್ಬರು ಆರೋಪಿಗಳವಿದೇಶ ಪ್ರವಾಸಕ್ಕೆ ಕೋರ್ಟ್‌ ಅಸ್ತು

KannadaprabhaNewsNetwork |  
Published : May 13, 2026, 03:15 AM IST
ಆರೋಪಿಗಳಿಂದ ಪೊಲೀಸರು ವಶಕ್ಕೆ ಪಡೆದ ಗಾಂಜಾವನ್ನು ಪೊಲೀಸ್‌ ಆಯುಕ್ತ ಸೀಮಾಂತ್‌ ಕುಮಾರ್‌ ಸಿಂಗ್‌ ಪರಿಶೀಲಿಸಿದರು.  | Kannada Prabha

ಸಾರಾಂಶ

ಆರ್‌ಸಿಬಿ‌ ವಿಜಯೋತ್ಸವದ ವೇಳೆ 2025ರ ಜೂನ್ ನಲ್ಲಿ‌ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಡಿಎನ್ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್ ಲಿಮಿಟೆಡ್ ನ ಇಬ್ಬರು ಅಧಿಕಾರಿಗಳಿಗೆ ಬ್ರೆಜಿಲ್ ಪ್ರವಾಸ ಕೈಗೊಳ್ಳಲು ಹೈಕೋರ್ಟ್ ಅನುಮತಿಸಿದೆ.‌

ಕನ್ನಡಪ್ರಭ ವಾರ್ತೆ ಬೆಂಗಳೂರು ಆರ್‌ಸಿಬಿ‌ ವಿಜಯೋತ್ಸವದ ವೇಳೆ 2025ರ ಜೂನ್ ನಲ್ಲಿ‌ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಮುಂಭಾಗ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಡಿಎನ್ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್ ಲಿಮಿಟೆಡ್ ನ ಇಬ್ಬರು ಅಧಿಕಾರಿಗಳಿಗೆ ಬ್ರೆಜಿಲ್ ಪ್ರವಾಸ ಕೈಗೊಳ್ಳಲು ಹೈಕೋರ್ಟ್ ಅನುಮತಿಸಿದೆ.‌

ಬ್ರೆಜಿಲ್‌ಗೆ ಪ್ರಯಾಣಿಸಲು ಅನುಮತಿ ನೀಡುವಂತೆ ಕೋರಿ ಐಪಿಎಲ್ ಈವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಾದ ಡಿಎನ್ಎ ಸಂಸ್ಥೆ ನಿರ್ದೇಶಕ ಸುನಿಲ್ ಮ್ಯಾಥ್ಯೂ ಮತ್ತು ಸೀನಿಯರ್ ಇವೆಂಟ್ ಮ್ಯಾನೇಜರ್ ಎಸ್. ಕಿರಣ್ ಕುಮಾರ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ‌ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ಅವರ ನ್ಯಾಯಪೀಠ,‌ ಜೂ.1 ರಿಂದ ಜೂ.10 ರವರೆಗೆ ಬ್ರೆಜಿಲ್ ಪ್ರವಾಸ ಕೈಗೊಳ್ಳುವುದಕ್ಕೆ ಅನುಮತಿ ನೀಡಿ ಮಧ್ಯಂತರ ಆದೇಶ ನೀಡಿದೆ. ವ್ಯವಹಾರದ ಉದ್ದೇಶಕ್ಕಾಗಿ ವಿದೇಶಕ್ಕೆ ತೆರಳಬೇಕಿರುವ ಕಾರಣ ಅರ್ಜಿದಾರರ ಪಾಸ್ ಪೋರ್ಟ್ ಬಿಡುಗಡೆ ಮಾಡಬೇಕು ಎಂದು ವಿಚಾರಣಾ ನ್ಯಾಯಾಲಯಕ್ಕೆ ಸೂಚನೆ ನೀಡಿರುವ ನ್ಯಾಯಪೀಠ, ಜೂ.12 ರೊಳಗೆ ಬೆಂಗಳೂರಿಗೆ ಹಿಂದಿರುಗಬೇಕು ಎಂದು ನಿರ್ದೇಶನ ನೀಡಿದೆ.

ಪ್ರಕರಣವೇನು?: 2025ರ ಜೂನ್ 4 ರಂದು ಐಪಿಎಲ್ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್ಸಿಬಿ) ತಂಡ ಜಯಗಳಿಸಿತ್ತು. ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯೋತ್ಸವ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಸಾವಿರಾರು ಜನ ಆಗಮಿಸಿದ್ದರು. ಇದರಿಂದ ಉಂಟಾದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಂಕ್‌ನಲ್ಲಿ ಪೆಟ್ರೋಲ್‌, ಡೀಸೆಲ್‌ಬಾಟಲ್‌ಗೆ ಹಾಕಿದ್ರೆ ಕ್ರಮ: ಎಚ್ಚರಿಕೆ
ಮೋದಿ ಆಗಮನಕ್ಕೆ ಆತಂಕಸೃಷ್ಟಿಸಲು ಶಂಕಿತರಿಂದ ಕೃತ್ಯ