ಯುವಪೀಳಿಗೆಯ ರೀಲ್ಸ್‌ ಗೀಳಿಗೆ ಕಡಿವಾಣ ಹಾಕಿ: ಡಾ.ಬಸವ ಮರುಳಸಿದ್ಧ ಶ್ರೀ

KannadaprabhaNewsNetwork |  
Published : Jun 28, 2026, 02:15 AM IST
ದದದದ | Kannada Prabha

ಸಾರಾಂಶ

ಚಿಕ್ಕಮಗಳೂರುಯುವಪೀಳಿಗೆಯನ್ನು ಸಾಮಾಜಿಕ ಜಾಲತಾಣದ ಗೀಳಿಗೆ ತಳ್ಳಿ ಭಾರತವನ್ನು ನಿರ್ವಿರ್ಯರನ್ನಾಗಿಸುವ ಹುನ್ನಾರ ಅಡಗಿದೆಯೇ ಎಂಬ ಆತಂಕ ವ್ಯಕ್ತಪಡಿಸಿದ ಚಿಕ್ಕಮಗಳೂರು ಬಸವತತ್ವಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದು ಹೇಳಿದರು.

ಶ್ರೀ ಬಸವತತ್ವಪೀಠಕ್ಕೆ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ, ಬಿಜೆಪಿ ಮುಖಂಡರು ಭೇಟಿ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಯುವಪೀಳಿಗೆಯನ್ನು ಸಾಮಾಜಿಕ ಜಾಲತಾಣದ ಗೀಳಿಗೆ ತಳ್ಳಿ ಭಾರತವನ್ನು ನಿರ್ವಿರ್ಯರನ್ನಾಗಿಸುವ ಹುನ್ನಾರ ಅಡಗಿದೆಯೇ ಎಂಬ ಆತಂಕ ವ್ಯಕ್ತಪಡಿಸಿದ ಚಿಕ್ಕಮಗಳೂರು ಬಸವತತ್ವಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಈ ಬಗ್ಗೆ ಕೇಂದ್ರ ಸರ್ಕಾರ ಗಂಭೀರವಾಗಿ ಆಲೋಚಿಸಬೇಕು ಎಂದು ಹೇಳಿದರು.

ಚಿಕ್ಕಮಗಳೂರಿನ ಶ್ರೀ ಬಸವತತ್ವಪೀಠಕ್ಕೆ ಶನಿವಾರ ಭೇಟಿ ನೀಡಿದ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಹಾಗೂ ಬಿಜೆಪಿ ಮುಖಂಡರು ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಅವರಿಗೆ ಕೇಂದ್ರ ಸರ್ಕಾರದ ಸಾಧನೆಗಳ ''''''''ಸಾರ್ವಜನಿಕ ಸೇವೆಯೇ ಸಂಕಲ್ಪ'''''''' ಹಾಗೂ ''''''''ರಾಷ್ಟ್ರ ನಿರ್ಮಾಣವೇ ಗುರಿ'''''''' ಪುಸ್ತಕ ನೀಡಿ, ಕೇಂದ್ರ ಸರ್ಕಾರದ ಕಳೆದ 12 ವರ್ಷದ ಸಾಧನೆ ಬಗ್ಗೆ ವಿವರಿಸಿದರು.

ಈ ವೇಳೆ ಮಾತನಾಡಿದ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಸುಸ್ಥಿರ ನಾಯಕತ್ವ ಹಾಗೂ ನಿರ್ದಿಷ್ಟ ಗುರಿಯಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿರುವುದಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ ಅವರು ವಿಶ್ವದಲ್ಲಿ ಭಾರತ ಅತಿ ಹೆಚ್ಚು ಯುವ ಸಮೂಹ ಹೊಂದಿ ರುವ ದೇಶ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಸಾಮಾಜಿಕ ಜಾಲತಾಣದ ಚಟಕ್ಕೆ ಬಿದ್ದು, ಹಗಲು-ರಾತ್ರಿ ಎನ್ನದೇ ರೀಲ್ಸ್‌ ವೀಕ್ಷಣೆಯಲ್ಲಿ ಕಾಲಹರಣ ಮಾಡುತ್ತಿದೆ. ಇದರಿಂದ ಯುವ ಜನರ ದೃಹಿಕ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತಿದೆ. ಕೌಶಲ್ಯ ಬೆಳೆಸಿಕೊಂಡು ಬದುಕು ರೂಪಿಸಿಕೊಳ್ಳಬೇಕಾದ ಯುವಕರು, ನಿರ್ವಿರ್ಯರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಇದು ರಾಷ್ಟ್ರದ ಶಕ್ತಿ ಕುಗ್ಗಿಸುವ ಕೆಲಸ. ಕೇಂದ್ರ ಸರ್ಕಾರ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ. ಸಾಮಾಜಿಕ ಜಾಲ ತಾಣಗಳ ಮೇಲೆ ನಿಯಂತ್ರಣ ಹೇರಬೇಕು. ಇಲ್ಲವಾದರೇ, ರಾಷ್ಟ್ರ ಮುಂದೊಂದು ದಿನ ದೊಡ್ಡ ಅಪಾಯ ಎದುರಿಸ ಬೇಕಾಗಲಿದೆ ಎಂದು ಎಚ್ಚರಿಸಿದರು.

ಇದು ತಕ್ಷಣ ನೇರ ಪರಿಣಾಮ ಬೀರದಿದ್ದರೂ 10-15 ವರ್ಷದ ನಂತರ ಇದರ ದುಷ್ಪರಿಣಾಮ ಪರಿಣಾಮ ಬೀರಲಿದೆ. ಈಗಾಗಲೇ ಹಾದಿ-ಬೀದಿಯಲ್ಲಿ ಐವಿಎಫ್‌ ಸೆಂಟರ್‌ ಶುರುವಾಗಿದೆ ಎಂದರು.

ಅದಕ್ಕೆ ಪ್ರಕ್ರಿಯೆ ನೀಡಿದ ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರುವ ಭರವಸೆ ನೀಡಿದರು.

ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್‌.ಸಿ. ಕಲ್ಮರುಡಪ್ಪ, ಬಸವತತ್ವ ಪೀಠದ ಖಜಾಂಚಿ ಸದಾಶಿವಪ್ಪ, ಟ್ರಸ್ಟಿ ಜಗದೀಶ್‌ ಬಾಬು, ಬಿಜೆಪಿ ಮುಖಂಡ ಕೋಟೆ ರಂಗನಾಥ್‌, ರಾಜೇಶ್‌, ಬಿ.ಟಿ.ಶಶಿಧರ್‌, ಸಿ.ಪಿ.ಉಮೇಶ್‌,ಡಿ.ಸಿ.ರಾಜು ಸೇರಿದಂತೆ ಮೊದಲಾದವರಿದ್ದರು.-----ಬಾಕ್ಸ್‌-----

ನಾಲ್ಕೈ ವರ್ಷದಲ್ಲಿ ಭಾರತ ಬಡತನ ಮುಕ್ತ: ಕೋಟಾ ಶ್ರೀನಿವಾಸ್‌ ಪೂಜಾರಿ

ಬಡತನ ರೇಖೆಗಿಂತ ಕೆಳಗಿರುವವ ಪ್ರಮಾಣ ಶೇ.24.5 ರಿಂದ ಶೇ.5.5ಕ್ಕೆ ಇಳಿಕೆಯಾಗಿದೆ. ಮುಂದಿನ 4-5 ವರ್ಷದಲ್ಲಿ ಬಡತನ ಮುಕ್ತ ರಾಷ್ಟ್ರ ನಿರ್ಮಾಣ ಮಾಡಲಾಗುವುದು ಎಂದು ಸಂಸದ ಕೋಟಾ ಶ್ರೀನಿವಾಸ್‌ ಪೂಜಾರಿ ಹೇಳಿದರು.

ಕೇಂದ್ರ ಸರ್ಕಾರ ಕಳೆದ 12 ವರ್ಷದಲ್ಲಿ ರಾಷ್ಟ್ರ ಭದ್ರತೆ, ಬಡತನ ರೇಖೆಗಿಂತ ಕೆಳಗಿರುವವರ ಮೇಲೆತ್ತುವುದು, ಮೂಲ ಸೌಕರ್ಯ ಅಭಿವೃದ್ಧಿ, ಸ್ವಚ್ಛ ಭಾರತ ಅಭಿಯಾನ, ಸಮರ್ಥ ಭಾರತ ನಿರ್ಮಾಣದ ಸಂಕಲ್ಪದ ಕಾರ್ಯನಿರ್ವಹಿಸುತ್ತಿದೆ. 2014ರಲ್ಲಿ 18 ಸಾವಿರ ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ಇರದೆ ಬಡತನ ರೇಖೆಗಿಂತ ಕೆಳಗಿರುವವ ಪ್ರಮಾಣ ಶೇ.24.5 ರಷ್ಟು ಇತ್ತು, ಇದೀಗ ದೇಶದಲ್ಲಿ ಶೇ.99 ರಷ್ಟು ಹಳ್ಳಿಗಳಿಗೆ ವಿದ್ಯುತ್‌ ಸಂಪರ್ಕ ನೀಡಿ. ಬಡತರೇಖೆಗಿಂತ ಕೆಳಗಿರುವವ ಸಂಖ್ಯೆ ಶೇ.5.5ಕ್ಕೆ ಇಳಿಕೆಯಾಗಿದೆ. ಇದೀಗ ದೇಶದ ಶೌಚಾಲಯ ಇಲ್ಲದ ಮನೆ ಇಲ್ಲ ಎಂದು ವಿವರಿಸಿದರು.

2014ರಲ್ಲಿ ಭಾರತದ ಆರ್ಥಿಕತೆ 16ನೇ ಸ್ಥಾನದಲ್ಲಿತ್ತು. ಅದು 4ನೇ ಸ್ಥಾನಕ್ಕೆ ಬಂದಿದೆ. ಮುಂದಿನ ಒಂದು ವರ್ಷದಲ್ಲಿ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆ ಶಕ್ತಿಯಾಗಿ ಹೊರಹೊಮ್ಮಲಿದೆ. 2047ರ ವೇಳೆಗೆ ಭಾರತ ವಿಶ್ವದ 1ನೇ ಬಲಿಷ್ಠ ಆರ್ಥಿಕತೆ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಫೋಟೋ

ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಶನಿವಾರ ಚಿಕ್ಕಮಗಳೂರಿನ ಬಸವತತ್ವಪೀಠದ ಡಾ.ಬಸವ ಮರುಳಸಿದ್ಧ ಸ್ವಾಮೀಜಿಗೆ ಕೇಂದ್ರ ಸರ್ಕಾರದ ಸಾಧನೆಗಳ ''''''''ಸಾರ್ವಜನಿಕ ಸೇವೆಯೇ ಸಂಕಲ್ಪ'''''''' ಹಾಗೂ ''''''''ರಾಷ್ಟ್ರ ನಿರ್ಮಾಣವೇ ಗುರಿ'''''''' ಪುಸ್ತಕ ನೀಡಿದರು. ಶ್ರೀಮಠದ ಖಜಾಂಚಿ ಸದಾಶಿವಪ್ಪ, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ‌. ಕಲ್ಮುರ ಡಪ್ಪ, ಬಿಜೆಪಿ ಮುಖಂಡ ಕೋಟೆ ರಂಗನಾಥ್, ಟ್ರಸ್ಟಿಗಳಾದ ಜಗದೀಶ್ ಬಾಬು, ರಾಜೇಶ್, ಬಿ.ಟಿ.ಶಶಿಧರ್, ಸಿ.ಪಿ.ಉಮೇಶ್, ಡಿ.ಸಿ.ರಾಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿವಲಿಂಗೇಗೌಡರಿಗೆ ಸಚಿವ ಸ್ಥಾನ ನೀಡುವಂತೆ ಉಪ್ಪಾರ ಸಮಾಜದ ಆಗ್ರಹ
ನಾಡಪ್ರಭುಗಳಿಂದ ಸಣ್ಣ ಸಮುದಾಯಗಳ ಏಳಿಗೆ