ಬ್ಯಾಂಕಿನ ಅಭಿವೃದ್ಧಿಗೆ ಗ್ರಾಹಕರ ಸಹಕಾರ ಅಗತ್ಯ: ಬರೇಟ್ಟೋ

KannadaprabhaNewsNetwork |  
Published : Sep 21, 2026, 02:15 AM IST
ಅಳ್ನಾವರದ ಸೇಂಟ್ ಜೇವೇರ್ ಸಭಾಭವನದಲ್ಲಿ ನಡೆದ ಬ್ಯಾಂಕಿನ ವಾರ್ಷಿಕ  ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷೆ ಶಾಲೇಟ್ ಬರೇಟ್ಟೋ ಮಾತನಾಡಿದರು. | Kannada Prabha

ಸಾರಾಂಶ

ಬ್ಯಾಂಕಿನ ಠೇವುದಾರರು ಮತ್ತು ಸಾಲಗಾರರು ಬ್ಯಾಂಕಿನ ನಿಯಮಾವಳಿಗೆ ತಕ್ಕಂತೆ ವ್ಯವಹರಿಸುವುದರಿಂದ ಬ್ಯಾಂಕಿನ ಅಭಿವೃದ್ದಿಗೆ ಸಹಕರಿಸಬೇಕು.

ಅಳ್ನಾವರ: ಗ್ರಾಹಕರ ಮತ್ತು ಸದಸ್ಯರ ನಂಬಿಕೆಯೇ ಬ್ಯಾಂಕಿನ ಯಶಸ್ಸಿಗೆ ಕಾರಣ, ಬ್ಯಾಂಕು ಮತ್ತು ಗ್ರಾಹಕರ ಸಂಬಂಧ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ದಯಾಸಾಗರ ಸೌಹಾರ್ದ ಸೊಸೈಟಿಯ ಅಧ್ಯಕ್ಷೆ ಶಾಲೇಟ್ ಬರೇಟ್ಟೋ ಹೇಳಿದರು.

ಪಟ್ಟಣದ ಸೇಂಟ್ ಜೇವಿಯರ್ ಸಭಾಭವನದಲ್ಲಿ ರವಿವಾರ ಆಯೋಜಿಸಿದ್ದ ದಯಾಸಾಗರ ಸೌಹಾರ್ದ ಸೊಸೈಟಿಯ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದ ಅವರು, ಗ್ರಾಹಕರು ತಮ್ಮ ಹಣಕ್ಕೆ ಭದ್ರತೆ ಬಯಸುತ್ತಾರೆ. ಅವರ ವಿಶ್ವಾಸಕ್ಕೆ ಭದ್ದವಾಗಿ ನಮ್ಮ ಸಹಕಾರಿ ಸಂಸ್ಥೆ ಕಾರ್ಯ ನಿರ್ವಹಿಸುತ್ತದೆ. ಬ್ಯಾಂಕಿನ ಠೇವುದಾರರು ಮತ್ತು ಸಾಲಗಾರರು ಬ್ಯಾಂಕಿನ ನಿಯಮಾವಳಿಗೆ ತಕ್ಕಂತೆ ವ್ಯವಹರಿಸುವುದರಿಂದ ಬ್ಯಾಂಕಿನ ಅಭಿವೃದ್ದಿಗೆ ಸಹಕರಿಸಬೇಕು. ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ತ್ವರಿತಗತಿಯ ಸೇವೆ ನೀಡಲಾಗುವುದು. ಮುಂದಿನ ಆರ್ಥಿಕ ವರ್ಷದಿಂದ ಬ್ಯಾಂಕಿನಲ್ಲಿ ಪಡೆಯುವ ಸಾಲಗಳಿಗೆ ವಿಮೆ ಮಾಡಿಸುವ ಮೂಲಕ ಸಾಲಗಾರರಿಗೂ ಭದ್ರತೆ ನೀಡುವಂತಹ ವ್ಯವಸ್ಥೆ ಅಳವಡಿಸಲಾಗುವುದು, ಸಹಕಾರಿ ಬ್ಯಾಂಕು ಆರಂಭವಾಗಿ ನಾಲ್ಕುವರ್ಷವಾಗಿದ್ದು ಪ್ರತಿವರ್ಷ ಆರ್ಥಿಕವಾಗಿ ಸದೃಢವಾಗುತ್ತ ಸಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಂದಿನ ಆರ್ಥಿಕ ವರ್ಷದ ಗುರಿಗಳನ್ನು ಚರ್ಚಿಸಿ ಒಪ್ಪಿಗೆ ಪಡೆಯಲಾಯಿತು, ವ್ಯವಸ್ಥಾಪಕ ಲಿಯೋ ಬರೆಟ್ಟೋ ಅವರು ಹಿಂದಿನ ಮಹಾಸಭೆಯ ಠರಾವುಗಳನ್ನು ಓದಿ ಮಂಡಿಸಿದರು, ನಂತರ ಶೈಕ್ಷಣಿಕವಾಗಿ ಸಾಧನೆ ಮಾಡಿದ ಸಹಕಾರಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹಕ ಬಹುಮಾನ ವಿತರಿಸಲಾಯಿತು,

ಈ ವೇಳೆ ಉಪಾಧ್ಯಕ್ಷರಾದ ಜಾನ್ಸನ್ ಕರ್ಲೇಕರ, ಡೈಯಾನಾ ಡಿಸೋಜಾ, ಫ್ರಾನ್ಸಿಸ್ ರೋಡ್ರೀಗಸ್, ಜಾನ್ಸನ್ ಡಿಸಿಲ್ವಾ, ಜೇಮ್ಸ್ ಮೋತೇರೊ ಲಿನೇಟ್ ಡಿಸೋಜಾ, ಲಲಿತಾ ಡಿ,ಎನ್, ಮಂಜುನಾಥ ಈಟಿ, ರುಕ್ಮವ್ವಾ ಮೇತ್ರಿ, ಸಂತೋಷ ಬೆಂಡಿಗೇರಿ, ವಿಕ್ರಮ ಫರ್ನಾಂಡಿಸ್ ಮತ್ತಿತರರು ಇದ್ದರು. ಕಿರಣ ಕಲ್ಯಾಣಕರ, ಗಾಯತ್ರಿ ರಾಂದೇವಾಡಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ಸಮಾಜಕ್ಕೆ ದಿಕ್ಸೂಚಿಯಾಗಲಿ
ಮಳೆ ಇಲ್ಲ, ಬೆಳೆ ಇಲ್ಲ ಸರ್ಕಾರಕ್ಕೆ ಆದಾಯ ಕಡಿಮೆ ಇದೆ: ರಾಯರಡ್ಡಿ