ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ದುಂದುವೆಚ್ಚಕ್ಕೆ ಕಡಿವಾಣ ಹಾಕಿ: ಪಿ.ಸಿ. ಗದ್ದಿಗೌಡರ

KannadaprabhaNewsNetwork |  
Published : Mar 12, 2024, 02:06 AM IST
ಹುನಗುಂದ ಸಮೀಪದ ಇಲಾಳ ಗ್ರಾಮದ ಬೊಮ್ಮಲಿಂಗೇಶ್ವರ ಜಾತ್ರೆ ಅಂಗವಾಗಿ ನಡೆದ ಸರ್ವಧರ್ಮಗಳ ಸಾಮೂಹಿಕ ವಿವಾಹದ ಸಮಾರಂಭವನ್ನು ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ ಉದ್ಘಾಟಿಸಿದರು. ಅಮೀನಗಡ- ಯರಿಗೋನಾಳ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ, ಮಲ್ಲಯ್ಯ ಮೂಗನೂರ ಇದ್ದರು. | Kannada Prabha

ಸಾರಾಂಶ

ಹುನಗುಂದ ತಾಲೂಕಿನ ಇಲಾಳ ಗ್ರಾಮದ ಬೊಮ್ಮಲಿಂಗೇಶ್ವರ ಜಾತ್ರೆ ಅಂಗವಾಗಿ ಶನಿವಾರ ನಡೆದ ಸರ್ವಧರ್ಮಗಳ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿದ ಪಿ.ಸಿ. ಗದ್ದಿಗೌಡರ ಮಾತನಾಡಿ, ಮದುವೆಗಾಗಿ ದುಂದು ವೆಚ್ಚ ಮಾಡಬೇಡಿ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಹೇಳಿದರು.

ಕನ್ನಡಪ್ರಭ ವಾರ್ತೆ ಹುನಗುಂದ

ಮದುವೆಗಾಗಿ ದುಂದು ವೆಚ್ಚ ಮಾಡಬೇಡಿ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡು ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕೆಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.

ತಾಲೂಕಿನ ಸಮೀಪದ ಇಲಾಳ ಗ್ರಾಮದ ಬೊಮ್ಮಲಿಂಗೇಶ್ವರ ಜಾತ್ರೆ ಅಂಗವಾಗಿ ಶನಿವಾರ ನಡೆದ ಸರ್ವಧರ್ಮಗಳ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪತ್ನಿಗೆ ತವರು ಮನೆ ಒಂದು ಕಣ್ಣಾದರೆ ಗಂಡನ ಮನೆ ಮತ್ತೊಂದು ಕಣ್ಣು ಇದ್ದಂತೆ. ಗಂಡ-ಹೆಂಡತಿಯ ನಡುವೆ ಪ್ರೀತಿ, ವಿಶ್ವಾಸ, ನಂಬಿಕೆ ಮುಖ್ಯ. ಕಷ್ಟ, ಕಾರ್ಪಣ್ಯ ಸರಿದೂಗಿಸಿಕೊಂಡು ಮುನ್ನಡೆಯಬೇಕು. ಪತಿ-ಪತ್ನಿಯರು ಪರಸ್ಪರ ಸಹಾಯ, ಸಹಕಾರದಿಂದ ಇದ್ದರೆ ಸುಖ ಸಂಸಾರ ಸಾಧ್ಯ ಎಂದ ಅವರು, ಇಲಾಳದ ಬೊಮ್ಮಲಿಂಗೇಶ್ವರನ ಮಹಿಮೆ ಅಪಾರ. ಜಾತ್ರೆಯಿಂದ ಜನರಲ್ಲಿ ಸಂಬಂಧ ಗಟ್ಟಿಗೊಳ್ಳುತ್ತವೆ ಎಂದು ಹೇಳಿದರು.

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಬೊಮ್ಮಲಿಂಗೇಶ್ವರ ಒಂದು ಶಕ್ತಿಪೀಠ. ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಆಯೋಜಿಸಿರುವ ಗ್ರಾಮಸ್ಥರ ಕಾರ್ಯ ಶ್ಲಾಘನೀಯ. ನಮ್ಮ ನಿಗಮದಿಂದ ತುಳಿತಕ್ಕೆ ಒಳಗಾದ ಕುಟುಂಬಗಳಿಗೆ ಸಹಾಯ, ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಅಮೀನಗಡ-ಯರಿಗೋನಾಳ ಗಚ್ಚಿನಮಠದ ಶಂಕರರಾಜೇಂದ್ರ ಸ್ವಾಮೀಜಿ ಮಾತನಾಡಿ, ಸತಿಪತಿಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಸಹಬಾಳ್ವೆಯಿಂದ ಸುಖ ಜೀವನ ನಡೆಸಿ ಎಂದು ನೂತನ ದಂಪತಿಗೆ ಕಿವಿಮಾತು ಹೇಳಿದರು.

ಚಳಗೇರಿಯ ವೀರಸಂಗಮೇಶ್ವರ ಶಿವಚಾರ್ಯರು, ಹುನಗುಂದ ಗಚ್ಚಿನಮಠದ ಅಮರೇಶ್ವರ ದೇವರು, ಉಪನ್ಯಾಸಕ ಸಂಗಣ್ಣ ಗೋಡಿ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗ್ರಾಮದ ಯುವಕ-ಯುವತಿಯರನ್ನು ಸನ್ಮಾನಿಸಲಾಯಿತು.

ಬೊಮ್ಮಲಿಂಗೇಶ್ವರ ಜಾತ್ರೆ ಅಂಗವಾಗಿ ನಡೆದ ಸರ್ವಧರ್ಮಗಳ ಸಾಮೂಹಿಕ ವಿವಾಹದಲ್ಲಿ 19 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸರೂರಿನ ರೇವಸಿಣದ್ದಯ್ಯ ಗುರುವಿನ, ಪುರಗಿರಿಯ ಕೈಲಾಸಲಿಂಗ ಶಿವಚಾರ್ಯರು, ಹೈಕೋರ್ಟ್‌ ವಕೀಲ ಎಸ್.ಎಂ. ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷೆ ಬಾಯಕ್ಕ ಮೇಟಿ, ಬೊಮ್ಮಲಿಂಗಯ್ಯ ಕಾಟಾಪೂರಮಠ, ಯಲ್ಲಪ್ಪ ಸಿ ಗೋಡಿ, ಮಲ್ಲಯ್ಯ ಮೂಗನೂರಮಠ, ಶರಣಪ್ಪ ಗೋಡಿ, ಚಂದ್ರಶೇಖರಯ್ಯ ಕಾಟಾಪೂರಮಠ, ವಿರೂಪಾಕ್ಷ ಕಾಟಾಪೂರಮಠ, ಬಸವರಾಜ ಅಂಗಡಿ, ವಿ.ಎಸ್. ದಮ್ಮೂರಮಠ, ಪ್ರಕಾಶ ಗೋಡಿ ಇತರರು ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ