ಜಾಗೃತಿ ನಂತರವೂ ಸೈಬರ್‌ ಅಪರಾಧ ಕಡಿಮೆ ಆಗುತ್ತಿಲ್ಲ: ಎಸ್‌ಐ ಶಿವಶಂಕರ್‌

KannadaprabhaNewsNetwork |  
Published : Jun 18, 2025, 12:08 AM IST
17ಸೈಬರ್ | Kannada Prabha

ಸಾರಾಂಶ

ಉಡುಪಿ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಸೈಬರ್‌ ಸೆಕ್ಯುರಿಟಿ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ಉಡುಪಿಇಲ್ಲಿನ ತೆಂಕನಿಡಿಯೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಆಶ್ರಯದಲ್ಲಿ ಸೈಬರ್‌ ಸೆಕ್ಯುರಿಟಿ ಮಾಹಿತಿ ಕಾರ್ಯಾಗಾರ ಆಯೋಜಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಮಲ್ಪೆ ಪೊಲೀಸ್‌ ಠಾಣೆಯ ಎಸ್ಐ ಶಿವಶಂಕರ್‌ ಮಾತನಾಡಿ, ಇತ್ತೀಚೆಗೆ ಸಾಕಷ್ಟು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರೂ ಸೈಬರ್‌ ಅಪರಾಧಗಳು ಕಡಿಮೆಯಾಗಿಲ್ಲ. ಡಿಜಿಟಲ್‌ ತಂತ್ರಜ್ಞಾನ ಎಲ್ಲಾ ಕ್ಷೇತ್ರಗಳಲ್ಲಿಯೂ ಅಪಾಯಗಳಿಗೆ ಕಾರಣವಾಗುತ್ತಿದೆ ಎಂದರು.ಭಾರತದಲ್ಲಿ ಯುವ ಜನ ಸಂಪನ್ಮೂಲ ಶೇ ೬೦ ಇದ್ದು ಇದನ್ನು ನಾಶಪಡಿಸಲು ಮಾದಕ ವಸ್ತುಗಳ ಚಟಗಳ ಜಾಲಕ್ಕೆ ಯುವಜನತೆಯನ್ನು ಬಲಿ ಪಶು ಮಾಡುವ ಮೂಲಕ ದೇಶದ ಆರ್ಥಿಕತೆಗೆ ಪೆಟ್ಟು ಬೀಳಿಸುವ ಜಾಲಗಳು ಕೂಡ ನಮ್ಮಲ್ಲಿರುವುದು ಆತಂಕಕಾರಿ ವಿಷಯವಾಗಿದೆ. ಇತ್ತೀಚಿನ ಅಂಕಿ ಅಂಶಗಳ ಪ್ರಕಾರ ಜೀವನ ಶೈಲಿಯಲ್ಲಿ ಉಂಟಾಗಿರುವ ಬದಲಾವಣೆಗಳಿಂದ ಯುವಜನತೆಯಲ್ಲಿ ಶೇ 2.1ರಷ್ಟಿರಬೇಕಾಗಿದ್ದ ಫಲವಂತಿಕೆ (ಫರ್ಟಿಲಿಟಿ) ಶೇ ೧.೭ ಕ್ಕೆ ಕುಸಿದಿದೆ. ಆದ್ದರಿಂದ ಯುವವಿದ್ಯಾರ್ಥಿಗಳು ದುಶ್ಚಟಗಳಿಗೆ, ಸೈಬರ್ ವಂಚನೆಗೆ ಬಲಿಯಾಗದೇ, ಸಾರಿಗೆ ನಿಯಮಗಳನ್ನು ಪಾಲಿಸಿ, ಯಶಸ್ವಿ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ ಎಸ್.ಎಂ.ಎಸ್‌. ಕಾಲೇಜಿನ ಉಪನ್ಯಾಸಕ ಸಂತೋಷ್‌ ನೀಲಾವರ ಮಾತನಾಡಿ, ವಿವಿಧ ರೀತಿಯ ಸೈಬರ್‌ ಅಪರಾಧಗಳು, ಸೆಕ್ಯುರಿಟಿ ವಿಧಾನಗಳ ಬಗ್ಗೆ ಸವಿವರವಾಗಿ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ವಿ. ಗಾಂವಕರ ವಹಿಸಿದ್ದು, ವೇದಿಕೆಯಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ದತ್ತ ಕುಮಾರ್‌, ಸ್ನಾತಕೋತ್ತರ ಸಮಾಜಕಾರ್ಯ ವಿಭಾಗದ ಮುಖ್ಯಸ್ಥೆ ಸುಷ್ಮಾ ಟಿ. ಉಪಸ್ಥಿತರಿದ್ದರು. ವಿದ್ಯಾರ್ಥಿ ಪ್ರೇಂಸಾಯಿ ಆರ್.ಎಂ. ಸ್ವಾಗತಿಸಿ, ಗೌತಮಿ ಜಿ. ಸುವರ್ಣ ವಂದಿಸಿದರು. ಮಹಮ್ಮದ್‌ ಸಹದ್‌ ಕಾರ್ಯಕ್ರಮ ನಿರೂಪಿಸಿದರು. ಎಂ.ಎಸ್.ಡಬ್ಲ್ಯು ಉಪನ್ಯಾಸಕರಾದ ಅಮಿತ, ರಾಜೇಂದ್ರ ಎಂ., ರವಿ ಎಸ್.‌, ಕರಾವಳಿ ಕಾವಲು ಪಡೆಯ ಸಿಬ್ಬಂದಿ ರತ್ನಾಕರ್‌ ಉಪಸ್ಥಿತರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ