- ತಿರಂಗ್ ಸೈಕಲ್ ರ‍್ಯಾಲಿ ಸಮಾರೋಪದಲ್ಲಿ ಎಸ್‌ಪಿ ಉಮಾ ಪ್ರಶಾಂತ್ - - -
ನಿತ್ಯವೂ ಸೈಕಲ್‌ಗಳನ್ನು ಬಳಸುವುದರಿಂದ ಉತ್ತಮ ಆರೋಗ್ಯವನ್ನು ಹೊಂದುವ ಜೊತಗೆ ವಾಯುಮಾಲಿನ್ಯ ತಡೆದು, ಪರಿಸರಕ್ಕೂ ಉಪಕಾರಿಯಾಗಿ ನಾವು ಬಾಳಬಹುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ದಾವಣಗೆರೆ ಬೈಸಿಕಲ್ ಕ್ಲಬ್ ಸಹಯೋಗದಲ್ಲಿ ಕ್ವಿಟ್ ಇಂಡಿಯಾ ಕಾರ್ಯಕ್ರಮದಡಿ ವಿಶ್ವ ಬೈಸಿಕಲ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ತಿರಂಗ್ ಸೈಕಲ್ ರ‍್ಯಾಲಿ ಸಮಾರೋಪದಲ್ಲಿ ಅವರು ಮಾತನಾಡಿದರು.ಪ್ರತಿಯೊಬ್ಬರೂ ಸೈಕಲ್ ಬಳಕೆಗೆ ಮುಂದಾಗಬೇಕು. ಒಂದೊಂದು ಮನೆಯಲ್ಲಿ 2-3 ದ್ವಿಚಕ್ರ ವಾಹನಗಳಿರುತ್ತವೆ. ಶ್ರೀಮಂತರ ಮನೆಯಲ್ಲಿ ಕಾರುಗಳು, ಐಷಾರಾಮಿ ಕಾರುಗಳು ಇರುತ್ತವೆ. ದ್ವಿಚಕ್ರ, ಲಘು ವಾಹನ, ಭಾರಿ ವಾಹನಗಳ ಹೊಗೆಯಿಂದ ಪರಿಸರ ಹಾಳಾಗುತ್ತದೆ. ಆದ್ದರಿಂದ ವಾರದಲ್ಲಿ ಒಂದು ದಿನವಾದರೂ ಸೈಕಲ್ ಬಳಸುವ ಬದಲಾವಣೆ ಪ್ರತಿಯೊಬ್ಬರಲ್ಲೂ ಬರಬೇಕಾಗಿದೆ ಎಂದರು.
ಸಂಚಾರಿ ಪೊಲೀಸ್ ವೃತ್ತ ನಿರೀಕ್ಷಕ ಸಿಪಿಐ ಮಂಜುನಾಥ ನಲವಾಗಲು ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಸೈಕಲ್ ರ‍್ಯಾಲಿಗೆ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ, ಪೊಲೀಸ್ ಅಧಿಕಾರಿಗಳಾದ ಎಚ್.ಬಿ.ಸೋಮಶೇಖರಪ್ಪ, ಮಲ್ಲಮ್ಮ ಚೌಬೆ, ಸಂಚಾರಿ ಪೊಲೀಸ್ ಮಹೇಂದ್ರ, ಬೈಸಿಕಲ್ ಕ್ಲಬ್ ಅಧ್ಯಕ್ಷ ರಾಜೇಂದ್ರ ಪ್ರಸಾದ, ಕಾರ್ಯದರ್ಶಿ ಕೆ.ಎಸ್.ಮಹೇಶ, ಡಾ.ಸುರೇಶ, ಡಾ.ರಾಘವೇಂದ್ರ, ಡಾ.ಮಾಲತೇಶ, ಡಾ.ಸಂತೋಷ, ಕಿರಣ, ನಾಗರಾಜ, ಹೇಮಂತ್ ಆರಾಧ್ಯ, ಹಿಮಾಲಯನ್ ಅಡ್ವೆಂಚರ್ ಅಕಾಡೆಮಿ ಎನ್.ಕೆ.ಕೊಟ್ರೇಶ, ವೀರೇಶ, ಅರುಣ ಇತರರು ಇದ್ದರು.
- - --1ಕೆಡಿವಿಜಿ34:
ದಾವಣಗೆರೆಯಲ್ಲಿ ನಡೆದ ಸೈಕಲ್ ರ‍್ಯಾಲಿಗೆ ಸಿಪಿಐ ನಲವಾಗಲು ಮಂಜುನಾಥ ಚಾಲನೆ ನೀಡಿದರು. ಎಸ್‌ಪಿ ಉಮಾ ಪ್ರಶಾಂತ್, ತಹಸೀಲ್ದಾರ್ ಡಾ. ಎಂ.ಬಿ. ಅಶ್ವಥ್ ಇತರರು ಭಾಗವಹಿಸಿದ್ದರು.