
ಮುಳಗುಂದ: ದೇಹದ ಸದೃಢತೆ ಕಾಯ್ದುಕೊಳ್ಳಲು ಸೈಕ್ಲಿಂಗ್‌ನಷ್ಟು ಉತ್ತಮವಾದ ವ್ಯಾಯಾಮ ಇನ್ನೊಂದಿಲ್ಲ. ಆದ್ದರಿಂದ ಮಕ್ಕಳು ನಿತ್ಯ ಸೈಕ್ಲಿಂಗ್ ಮಾಡಬೇಕು ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಗೌಡ ಪಾಟೀಲ ಹೇಳಿದರು.
ಒಳಾಂಗಣ ಹಾಗೂ ಹೊರಾಂಣಗಳನ್ನು ಹೊಂದಿರುವ ಜಿಲ್ಲೆಯಾಗಿದೆ. ಕ್ರೀಡೆಗೆ ಮುಳಗುಂದ ಪಟ್ಟಣ ಸಾಕಷ್ಟು ಸಹಾಯ, ಸಹಕಾರ ನೀಡುತ್ತಿದ್ದು, ಇದರಿಂದ ಸಾಕಷ್ಟು ಕ್ರೀಡಾಪಟುಗಳು ರಾಜ್ಯ ಅಂತಾರಾಜ್ಯ ಮಟ್ಟದಲ್ಲಿ ಮಿಂಚುವ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ, ಈ ಸೈಕ್ಲಿಂಗ್ ಕ್ರೀಡೆ ತುಂಬಾ ರೋಚಕವಾಗಿದ್ದು, ಇಂತಹ ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸುವಿಕೆ ಮುಖ್ಯ ಎಂದರು.
ಮುಳಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಸುಂಕಾಪೂರ ಮಾತನಾಡಿ, ಮುಳಗುಂದ ಪಟ್ಟಣದಲ್ಲಿ ರಾಜ್ಯ ಮಟ್ಟದ ಸೈಕ್ಲಿಂಗ್ ಸ್ಪರ್ಧೆ ಜರುಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. ಇದರಿಂದ ಗ್ರಾಮೀಣ ಮಕ್ಕಳು ಭಾಗವಹಿಸುವುದರಿಂದ ಅವರ ಭವಿಷ್ಯಕ್ಕೆ ಸಹಕಾರಿಯಾಗುವುದು ಎಂದರು.ಉದ್ಘಾಟನೆಯನ್ನು ಗದಗ ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೃಷ್ಣಗೌಡ ಪಾಟೀಲ, ಅಧ್ಯಕ್ಷತೆಯನ್ನು ಗದಗ ಜಿಲ್ಲಾ ಸೈಕ್ಲಿಂಗ್ ಅಸೋಸಿಯೇಶನ್ ಅಧ್ಯಕ್ಷ ಎಸ್.ವಿ. ಕಣವಿ, ಮುಖ್ಯ ಅತಿಥಿಗಳಾಗಿ ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಡಾ. ಎಸ್.ಸಿ. ಚವಡಿ, ಬಿ.ವಿ. ಸುಂಕಾಪೂರ, ಜಿ.ವಿ. ಪಾಟೀಲ್, ಸಿಪಿಐ ಜಿ.ಬಿ. ಸುಬ್ಬಾಪೂರಮಠ, ನಾಗರಾಜ ದೇಶಪಾಂಡೆ, ಕೆ.ಎಲ್. ಕರಿಗೌಡ್ರ, ಅಶೋಕ ಹುಣಸಿಮರದ, ಎಂ.ಕೆ. ಡಾಲಾಯತ, ವಿಲಾಸ ನೀಲಗುಂದ, ಎಸ್.ಎಂ. ಕುರಣಿ, ಐಶ್ವರ್ಯ ಕರಿಗಾರ, ಪವಿತ್ರಾ ಕುರ್ತಕೋಟಿ ಅಮೇಚೂರ ಸ್ಪೋಟ್ಸ್ ಅಸೋಸಿಯೇಶನ್ ಸದಸ್ಯರು ಇದ್ದರು.