ಡಿ.ದೇವರಾಜ ಅರಸು ಅಭಿವೃದ್ಧಿ ಹರಿಕಾರ: ಡಿಸಿ ಹರ್ಷಲ್‌

KannadaprabhaNewsNetwork |  
Published : Aug 22, 2025, 01:00 AM IST
ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ತಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಹರ್ಷಲ್‌ ಭೋಯರ್‌ ಉದ್ಘಾಟಿಸಿದರು. | Kannada Prabha

ಸಾರಾಂಶ

D. Devaraja Urs is a pioneer of development: DC Harshal

-ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಯಾದಗಿರಿ

ಹಿಂದುಳಿದ ವರ್ಗಗಳ ಹರಿಕಾರರೆಂದು ಹೆಸರಾದ ಡಿ. ದೇವರಾಜ ಅರಸು ಅವರು ತಮ್ಮ ಎಂಟು ವರ್ಷಗಳ ಮುಖ್ಯಮಂತ್ರಿ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡುವ ಮೂಲಕ, ಜನಮಾನಸದ ನಾಯಕರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ತಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಡವರ, ಶೋಷಿತರ, ಹಿಂದುಳಿದ ವರ್ಗಗಳ ಜನರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಅವರು, ಅನೇಕ ಹೊಸ ಕಾನೂನು ಮತ್ತು ಕಾಯ್ದೆಗಳನ್ನು ಜಾರಿ ಮಾಡುವ‌ ಮೂಲಕ ದಿಟ್ಟ ಹೆಜ್ಜೆ ಇಟ್ಟು ಅನೇಕರ ಹೊಸ ಬದುಕಿಗೆ ದಾರಿದೀಪವಾಗಿದ್ದರು.

ಅವರು ಅಂದು ಮಾಡಿದ ಅನೇಕ ಜನಪರ ಯೋಜನೆಗಳು ಇಂದಿಗೂ ಜಾರಿಯಲ್ಲಿವೆ. ಅವರಿಗೆ ಅಧಿಕಾರಕ್ಕಿಂತ ಜನರ ಕಾಳಜಿಯೇ ಮುಖ್ಯವಾಗಿತ್ತು ಎಂಬುದನ್ನು ಅವರ ರಾಜಕೀಯ ಜೀವನ‌ ಮತ್ತು ಸಾಮಾಜಿಕ ಬದುಕು ಅವಲೋಕಿಸಿದಾಗ ತಿಳಿಯುತ್ತದೆ ಎಂದು ಭೊಯರ್ ಹೇಳಿದರು. ನಿವೃತ್ತ ಪ್ರಾಂಶುಪಾಲರಾದ ಅಶೋಕ ವಾಟ್ಕರ್ ಅವರು ಡಿ.ದೇವರಾಜ ಅರಸು ಅವರ ಜಯಂತಿ ಕುರಿತು ಉಪನ್ಯಾಸ ನೀಡಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸದಾಶಿವ ಎಂ. ನಾರಾಯಣಕರ್ ಪ್ರಾಸ್ತಾವಿಕ ಮಾತನಾಡಿ, ಸರ್ಕಾರ ಅನೇಕ ಯೋಜನೆಗಳನ್ನು ಈ ಮಹಾನ ನಾಯಕರ ಹೆಸರಲ್ಲಿ‌ ಜಾರಿಗೊಳಿಸುವ ಮೂಲಕ ಅನೇಕರಿಗೆ ಉಪಯೋಗವಾಗುವಂತಹ ಕೆಲಸ ಮಾಡಿದೆ ಎಂದರು.

ಯಾದಗಿರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಾಬುರಾವ್ ಹುಲಗಪ್ಪ ಕಾಡ್ಲೂರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ವಿಜಯ ಕುಮಾರ ಮಡ್ಡೆ, ಡಿವೈಎಸ್ಪಿ ನಾಯಕ, ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ಅಪ್ಪಣ್ಣ ಚಿನ್ನಾಕರ್, ಭೀಮಣ್ಣ ಮೇಟಿ, ಶರಣಪ್ಪ ಮಾನೇಗಾರ್, ಮೌಲಾಲಿ ಅನಪೂರ್, ನಾಗರತ್ನ ಮೂರ್ತಿ ಅನಪೂರ್, ಮರೇಪ್ಪ ಚಟ್ಟರಕರ್, ಉಮೇಶ ಮುದ್ನಾಳ, ಬಾಷುಮೀಯಾ ವಡಗೇರಾ, ಯಾದವ ಸಮಾಜದ ಜಿಲ್ಲಾದ್ಯಕ್ಷ ತಾಯಪ್ಪ ಯಾದವ್, ಮಡಿವಾಳಪ್ಪ ಬಿಜಾಸಪೂರ್, ಹಣಮಂತ ಗಣಪೂರ್, ಸುಭಾಶ್ಚಂದ್ರ ಕೌಲಗಿ, ಭೀಮರಾಯ ಹಳೆಮನಿ, ಭೀಮರಾಯ ಠಾಣಗುಂದಿ, ಮಲಿಕಾರ್ಜುನ ಕಟ್ಟಿಮನಿ ಇದ್ದರು. ನಿಲಯಪಾಲಕ ಉಮೇಶ ಪೂಜಾರ ಸ್ವಾಗತಿಸಿ, ಜ್ಯೋತಿಲತಾ ತಡಿಬಿಡಿ ಅವರು ನಿರೂಪಿಸಿ, ವಂದಿಸಿದರು.

-

21ವೈಡಿಆರ್‌1: ಯಾದಗಿರಿ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ತಯದಲ್ಲಿ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ. ಹರ್ಷಲ್‌ ಭೋಯರ್‌ ಉದ್ಘಾಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!