ಕನ್ನಡಪ್ರಭ ವಾರ್ತೆ ಚಾಮರಾಜನಗರ
ತಾಲೂಕಿನ ಆಲೂರಿನ ಬಿ.ರಾಚಯ್ಯ ಚಿರಶಾಂತಿ ಧಾಮದಲ್ಲಿ ದಿ.ಗೌರಮ್ಮನವರ ಪುಣ್ಯಸ್ಮರಣೆ ಮತ್ತು ದಿ.ಬಿ.ರಾಚಯ್ಯನವರ ೨೫ನೇ ವರ್ಷದ ಸಂಸ್ಮರಣೋತ್ಸವ ಕಾರ್ಯಕ್ರಮದಲ್ಲಿ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಹಾಗೂ ಮೈಸೂರಿನ ಉರಿಲಿಂಗಿಪೆದ್ದಿ ಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಭಾಗವಹಿಸಿ, ಪುಷ್ಪ ನಮನ ಸಲ್ಲಿಸಿದರು.ಬೆಳಗ್ಗೆ ೧೧ ಗಂಟೆಗೆ ದಿ.ಗೌರಮ್ಮ ರಾಚಯ್ಯ ಹಾಗೂ ರಾಚಯ್ಯ ಅವರ ಸಮಾಧಿಗೆ ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿ.ಪಂ. ಮಾಜಿ ಸದಸ್ಯ ಎ.ಆರ್. ಬಾಲರಾಜು ಸೇರಿದಂತೆ ಕುಟುಂಬದವರು ಪೂಜೆ ಸಲ್ಲಿಸಿದರು. ದಿ.ಗೌರಮ್ಮ ರಾಚಯ್ಯ ಅವರ ೧೧ನೇ ದಿನದ ಪುಣ್ಯ ಕಾರ್ಯವನ್ನು ನೆರವೇರಿಸಿದರು. ಆಲೂರಿನ ಚಿರಶಾಂತಿ ಧಾಮದಲ್ಲಿ ದಿ.ಗೌರಮ್ಮ ನವರ ಸ್ಮರಣಾಂಜಲಿ ಹಾಗೂ ದಿ.ಬಿ.ರಾಚಯ್ಯನವರ ಸಂಸ್ಮರಣೆ ಸಂಗಮದಲ್ಲಿ ನಮನ ಮತ್ತು ಶ್ರೀ ಮಂಟೇಸ್ವಾಮಿ ಕಾವ್ಯ ಕಥನ ಕಾರ್ಯಕ್ರಮ ನಡೆಯಿತು. ತಾಳವಾಡಿಯ ಕೆ.ರಾಮದಾಸ್ ಅವರು ಶ್ರೀ ಮಂಟೇಸ್ವಾಮಿ ಪವಾಡ ಕುರಿತ ಪ್ರಸಂಗವನ್ನು ನಡೆಸಿಕೊಟ್ಟರು. ಸ್ಮರಣಾಂಜಲಿ ಕಾರ್ಯಕ್ರಮದಲ್ಲಿ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಮಾತನಾಡಿ, ಬಿ.ರಾಚಯ್ಯ ಅವರು ಮಾಡಿರುವ ಸೇವೆ ರಾಜ್ಯಕ್ಕೆ ಮಾದರಿಯಾಗಿದೆ. ಅವರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ, ಅವರು ಮಾಡಿರುವ ಸೇವೆ ನಮ್ಮೊಂದಿಗೆ ಇದೆ. ಅವರ ಪತ್ನಿ ಗೌರಮ್ಮ ಸಹ ಅವರ ಒಳ್ಳೆಯ ಕಾರ್ಯಗಳಿಗೆ ಬೆಂಬಲ ನೀಡಿದವರು. ಅವರ ಸೇವೆಯನ್ನು ಸ್ಮರಣೆ ಮಾಡಿಕೊಳ್ಳುವ ಇಂಥ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಿರುವ ಶಾಸಕ ಎ.ಆರ್. ಕೃಷ್ಣಮೂರ್ತಿ ಹಾಗೂ ಎ.ಆರ್.ಬಾಲರಾಜು ಮತ್ತು ಕುಟುಂಬಕ್ಕೆ ಆಭಾರಿಯಾಗಿದ್ದೇವೆ. ಅವರ ಸೇವೆ ವಿಶ್ವ ಮಟ್ಟಕ್ಕೆ ವಿಸ್ತರಣೆಯಾಗಲಿ, ಇಂಥವರು ನಮಗೆಲ್ಲ ಮಾರ್ಗದರ್ಶಕರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಕೊಳ್ಳೆಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ, ಜಿಪಂ ಮಾಜಿ ಸದಸ್ಯ ಆರ್.ಬಾಲರಾಜು, ಮಂಜುಳಾ ಕೃಷ್ಣಮುರ್ತಿ, ಶ್ರೀವರ್ಧನ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಮುಖಂಡರಾದ ಬಿ.ಕೆ.ರವಿಕುಮಾರ್, ಸದಾಶಿವಮೂರ್ತಿ, ತೋಟೇಶ್, ಎ.ಎಸ್.ಗುರುಸ್ವಾಮಿ. ಆಲೂರು ಪ್ರದೀಪ್, ಚಾಮುಲ್ ನಿರ್ದೇಶಕ ಕಮರವಾಡಿ ರೇವಣ್ಣ, ಆರ್.ಮಹದೇವ್, ಎ.ಸಿ.ಪ್ರವೀಣ್, ವೆಂಕಟರಮಣಸ್ವಾಮಿ (ಪಾಪು), ಮಹದೇವಪ್ರಸಾದ್ ಫಸಿ, ಯೋಗೇಶ್, ಪ್ರಭುಪ್ರಸಾದ್,ಲಕ್ಷಿ ನರಸಿಂಹ ಮೊದಲಾದವರು ಇದ್ದರು.