ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ದೊಡ್ಡಪಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಡಿ.ಎಚ್ ಮಧು, ಉಪಾಧ್ಯಕ್ಷರಾಗಿ ಸ್ವಾಮಿ ಅವಿರೋಧವಾಗಿ ಅಯ್ಕೆಯಾದರು.ಸಂಘದ ಒಟ್ಟು 12 ಮಂದಿ ನಿರ್ದೇಶಕರಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಿಂದ ಅಧ್ಯಕ್ಷಗಾಧಿಗೆ ಮಧು, ಉಪಾಧ್ಯಕ್ಷಗಾಧಿಗೆ ಸ್ವಾಮಿ ಹೊರತುಪಡಿಸಿ ಬೇರೆ ಯಾರೂ ಸಹ ಅರ್ಜಿ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿಯಾಗಿದ್ದ ವಾಷಿಂಪಾಷ ಅವಿರೋಧ ಆಯ್ಕೆ ಘೋಷಣೆ ಮಾಡಿದರು.
ನೂತನ ಅಧ್ಯಕ್ಷ ಡಿ.ಎಚ್. ಮಧು ಮಾತನಾಡಿ, ಸಹಕಾರ ಸಂಘಗಳ ಮೂಲಕ ಸರ್ಕಾರ ನಾನಾ ಯೋಜನೆಗಳನ್ನ ಜಾರಿಗೆ ತಂದಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಂಡು ಷೇರುದಾರರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ನಿರ್ದೇಶಕರಾದದ ಮಾಯೀಗೌಡ, ಎಂ.ಜಗದೀಶ್, ಚಂದ್ರು, ಧನಂಜಯ್ಯ, ಲಕ್ಷ್ಮಮ್ಮ, ವೀಣ, ಡಿ.ಎಂ.ಕೃಷೃಗೌಡ, ಶ್ರೀನಿವಾಸ್, ಶೇಖರ್, ದೇವರಾಜ್ ಯಕ, ಮುಂಖಡರಾದ ಮಂಜುನಾಥ್, ಡಿ.ಎಂ ಮಹೇಶ್, ಗೋವಿಂದೇಗೌಡ ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದರು.
ಕೃಷಿ ಪತ್ತಿನ ಸಂಘದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವು: ಗವೀಗೌಡ ಅಭಿನಂದನೆಪಾಂಡವಪುರ:
ತಾಲೂಕಿನ ಕ್ಯಾತನಹಳ್ಳಿ ಕೃಷಿಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಮತ ಕೊಟ್ಟು ಗೆಲುವಿಗೆ ಕಾರಣರಾದ ಸರ್ವಪಕ್ಷ ಮತದಾರರಿಗೆ ಕೃತಜ್ಞತೆ ಅರ್ಪಿಸುವುದಾಗಿ ಜೆಡಿಎಸ್ ರಾಜ್ಯ ರೈತ ವಿಭಾಗದ ಮಾಜಿ ಉಪಾಧ್ಯಕ್ಷ ಕ್ಯಾತನಹಳ್ಳಿ ಗವೀಗೌಡಪ್ರವೀಣ್ ತಿಳಿಸಿದರು.ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಯಾತನಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಮೈತ್ರಿ ಬೆಂಬಲಿತ ಅಭ್ಯರ್ಥಿಗಳಾದ ಸಾಲಗಾರರ ಕ್ಷೇತ್ರದಿಂದ ಅಭಿಷೇಕ್ (ಗವೀಗೌಡ ಮನು) ಹಾಗೂ ಸಾಲಗಾರರಲ್ಲ ಕ್ಷೇತ್ರದಿಂದ ರೈಲ್ವೆ ಶಿವಣ್ಣನವರ ಯಶ್ವಂತ್ ಗೆಲುವು ಸಾಧಿಸಿದ್ದಾರೆ. ಆಯ್ಕೆಯಾದ ಇಬ್ಬರು ನಿರ್ದೇಶಕರನ್ನು, ಕಡಿಮೆ ಮತಗಳ ಅಂತರಿಂದ ಸೋಲುಂಡ ಅಭ್ಯರ್ಥಿಗಳಿಗೂ ಅಭಿನಂದಿಸುತ್ತೇನೆ ಎಂದರು.
ಜೆಡಿಎಸ್-ಬಿಜೆಪಿ ಬೆಂಬಲಿತರಿಗೆ ಮತಕೊಟ್ಟು ಗೆಲುವಿಗೆ ಕಾರಣರಾದ ಕ್ಷೇತ್ರದ ಸರ್ವಪಕ್ಷಗಳ ಮತದಾರರು, ರೈತಾಪಿ ಬಂಧುಗಳಿಗೆ ಧನ್ಯವಾದಗಳು. ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲರೂ ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿ ಗೆ ಪೂರಕವಾಗಿ ಕೆಲಸ ಮಾಡಬೇಕು, ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ರೈತರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದರು.