- ಮನೆಯೊಂದರಲ್ಲಿ ಸಲ್ಲಿಸುತ್ತಿರುವ ಕುಟುಂಬ
ಬಾಳೆಹೊನ್ನೂರು: ಬ್ರಿಟೀಷರ ಈಸ್ಟ್ ಕಂಪೆನಿ ಆಡಳಿತಾವಧಿಯಲ್ಲಿ ಚಲಾವಣೆಯಲ್ಲಿದ್ದ ಶ್ರೀರಾಮ, ಸೀತಾ ಚಿತ್ರದ ನಾಣ್ಯ ಪಟ್ಟಣದ ಮನೆಯೊಂದರಲ್ಲಿ ನಿತ್ಯವೂ ಪೂಜೆಗೆ ಪಾತ್ರವಾಗಿದೆ.
ಕ್ರಿ.ಶ.1818ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಭಾರತದಲ್ಲಿ ಚಲಾವಣೆಗೆ ತಂದಿದ್ದ ಈ ನಾಣ್ಯವನ್ನು ಪಟ್ಟಣದ ಹೋಬಳಿ ಜಾನಪದ ಪರಿಷತ್ ಅಧ್ಯಕ್ಷ ಸುನೀಲ್‌ರಾಜ್ ಭಂಡಾರಿ ಸಂಗ್ರಹಿದ್ದು, ತಮ್ಮ ಮನೆಯಲ್ಲಿ ನಿತ್ಯವೂ ಪೂಜಿಸುತ್ತಿದ್ದಾರೆ. ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮನ ಚಿತ್ರದ ನಾಣ್ಯ ಇದಾಗಿದ್ದು, ಭಾರತ ಆಳಿದ ಬ್ರಿಟಿಷರು ಆಗಿನ ಕಾಲದಲ್ಲೇ ಇಂತಹ ನಾಣ್ಯಚಲಾವಣೆಗೆ ತರುವ ಮೂಲಕ ಭಾರತದ ಅಸ್ಮಿತೆ, ರಾಮಾಯಣದ ಐತಿಹ್ಯ ವನ್ನು ಜನರಿಗೆ ತಿಳಿಸುವ ಕಾರ್ಯ ಮಾಡಿರುವುದು ಗಮನಾರ್ಹ.ನಾಣ್ಯದ ಒಂದು ಬದಿಯಲ್ಲಿ ರಾಮ, ಸೀತೆ, ಲಕ್ಷ್ಮಣ, ಹನುಮಂತ ಹಾಗೂ ಮಂಟಪದ ಚಿತ್ರವಿದೆ. ಇನ್ನೊಂದು ಬದಿಯಲ್ಲಿ ಯುಕೆ ಹಾಫ್ ಅಣ ಎಂದು ಆಂಗ್ಲ ಮತ್ತು ಬ್ರಿಟಿಷ್ ಭಾಷೆಯಲ್ಲಿದ್ದು, ಸುತ್ತಲೂ ಈಸ್ಟ್ ಇಂಡಿಯಾ ಕಂಪೆನಿ, 1818 ಇಸವಿ ಹಾಕಿ ವಿಶೇಷವಾಗಿ ಹೂವುಗಳನ್ನು ಚಿತ್ರಿಸಲಾಗಿದೆ.ನಾಣ್ಯಕ್ಕೆ ಸುಮಾರು 206 ವರ್ಷಗಳಾಗಿದ್ದರೂ ಸಹ ತಾಮ್ರದ ಈ ನಾಣ್ಯ ಅತ್ಯಂತ ಗಟ್ಟಿಮುಟ್ಟಾಗಿ ತನ್ನ ಹೊಳಪು ಕಾಯ್ದುಕೊಂಡಿದೆ. 50 ಗ್ರಾಂಗೂ ಅಧಿಕ ತೂಕ ಹೊಂದಿದೆ.
--- ಕೋಟ್---
ಸುನೀಲ್‌ರಾಜ್ ಭಂಡಾರಿ, ಅಧ್ಯಕ್ಷ, ಹೋಬಳಿ ಜಾನಪದ ಪರಿಷತ್೧೮ಬಿಹೆಚ್‌ಆರ್ ೩,೪:
ನಾಣ್ಯವನ್ನು ಪ್ರದರ್ಶಿಸುತ್ತಿರುವ ಸುನೀಲ್‌ರಾಜ್ ಭಂಡಾರಿ.