ಡೈರಿ ಚುನಾವಣೆ: ನಿರ್ದೇಶಕರ ಸ್ಥಾನಕ್ಕೆ ಮೈತ್ರಿಕೂಟದ ಅಭ್ಯರ್ಥಿಗಳು ಆಯ್ಕೆ

KannadaprabhaNewsNetwork |  
Published : May 27, 2025, 01:06 AM IST
26ಕೆಎಂಎನ್ ಡಿ13 | Kannada Prabha

ಸಾರಾಂಶ

ಪಾಂಡವಪುರ ಪಟ್ಟಣದ ಬೀರಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ (ಎನ್ ಡಿಎ) ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ಬೀರಶೆಟ್ಟಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ (ಎನ್ ಡಿಎ) ಮೈತ್ರಿಕೂಟದ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ಸಂಘದ 10 ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ (ಎನ್‌ಡಿಎ) ಮೈತ್ರಿಕೂಟದ 7 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್-ರೈತಸಂಘ ಮೈತ್ರಿಕೂಟದ ಬೆಂಬಲಿತ 3 ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ಸಾಮಾನ್ಯ ವರ್ಗದಿಂದ ಸಿ.ಮಧುಸೂದನ್, ಪಿ.ದಿವಾಕರ, ಪಿ.ವಿಶ್ವನಾಥ, ಆನಂದ, ಪಿ.ಜಿ.ರಮೇಶ್, ಮಹಿಳಾ ಮೀಸಲು ವರ್ಗದಿಂದ ಸುಜಾತ, ಪ್ರತಿಭಾ, ಬಿಸಿಎಂ ಎ ವರ್ಗದಿಂದ ಸುನಂದ, ಬಿಸಿಎಂ ಬಿ ವರ್ಗದಿಂದ ವಿ.ಸುರೇಶ ಚುನಾಯಿತರಾದರು. ಉಳಿದಂತೆ ಪರಿಶಿಷ್ಟ ಜಾತಿ ವರ್ಗದಿಂದ ಲಕ್ಷ್ಮಮ್ಮ ಅವಿರೋಧ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಕಾರ ಇಲಾಖೆಯ ವಸೀಂ ಪಾಷ ಕಾರ್ಯ ನಿರ್ವಹಿಸಿದರು.

ವಿಜೇತ ಅಭ್ಯರ್ಥಿಗಳನ್ನು ಪುರಸಭೆ ಸದಸ್ಯ ಯಶ್ವಂತ್ (ದಿಲೀಪ್), ಮಾಜಿ ಅಧ್ಯಕ್ಷ ಮಧು, ಜೆಡಿಎಸ್ ಮುಖಂಡರಾದ ಜೈಕುಮಾರ್, ಫಿಶ್ ನಟರಾಜು, ದೋಬಿ ರಮೇಶ್, ಗಾಡಿ ಕುಮಾರ್, ಬಜರಂಗಿ ಬಾಯ್ಸ್ ಅಧ್ಯಕ್ಷ ಕುಮಾರ್, ವಿವೇಕ್, ನವೀನ, ಕೃಷ್ಣೇಗೌಡ, ಬಿ.ಭಾಸ್ಕರ್, ವ್ಯವಸ್ಥೆ ಕುಮಾರ್, ಎಸ್.ಎಂ.ಬಿ.ಕೆಂಪಣ್ಣ, ಎಳನೀರು ಮಂಜು, ರಾಮೇಗೌಡ, ಎನ್.ದೀಪು, ನವೀನ್, ಲೋಕೇಶ್, ಪೂಜಾರಿ ರಮೇಶ್, ನವೀನಕುಮಾರ್, ಕಿರಣ್, ಹಿರೋಡೆ ಬೀದಿ ನಾರಾಯಣಗೌಡ , ಸಂದೀಪ್, ಪಿ.ಎಲ್.ಆದರ್ಶ, ಮಹೇಶ್, ಬಿಜೆಪಿ ಕಾರ್ಯಕರ್ತರು, ಜೆಡಿಎಸ್ ಕಾರ್ಯಕರ್ತರು ಗ್ರಾಮಸ್ಥರು ಇತರರು ಅಭಿನಂದಿಸಿ ಸಂಭ್ರಮಿಸಿದರು.

ಜತೆಗೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಮಳೆಯನ್ನೂ ಲೆಕ್ಕಿಸದೇ ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜೇತರನ್ನು ಅಭಿನಂದಿಸಿ ಖುಷಿಪಟ್ಟರು. ಚುನಾವಣೆಯಲ್ಲಿ ವಿಜೇತರಾದ ಕಾಂಗ್ರೆಸ್-ರೈತಸಂಘ ಮೈತ್ರಿಕೂಟದ ಬೆಂಬಲಿತ ಅಭ್ಯರ್ಥಿಗಳನ್ನು ಜಿಲ್ಲಾ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಎನ್.ಕೃಷ್ಣೇಗೌಡ, ಪುರಸಭೆ ಸದಸ್ಯರಾದ ಪಾರ್ಥಸಾರಥಿ, ಜಯಲಕ್ಷ್ಮಮ್ಮ ಹಾಗೂ ರೈತಸಂಘದ ಮುಖಂಡರು, ಇತರರು ಅಭಿನಂದಿಸಿದರು.

PREV

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ