ಚನ್ನಪಟ್ಟಣ: ಕಷ್ಟ ಕಾಲದಲ್ಲೂ ಒಂದಷ್ಟು ನೆರವಾಗುವ ಹೈನುಗಾರಿಕೆಯಿಂದಾಗಿ ಗ್ರಾಮೀಣರ ಬದುಕು ಹಸನಾಗಿದೆ ಎಂದು ಇಗ್ಗಲೂರು ಡೇರಿ ಅಧ್ಯಕ್ಷ ಡಿಎಂಕೆ ಕುಮಾರ್ ತಿಳಿಸಿದರು.
ತಾಲೂಕಿನ ಗಡಿಗ್ರಾಮ ಇಗ್ಗಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಿಶ್ರತಳಿ ಹಸುಗಳ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತ ಹೈನುಗಾರರಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ರಾಸುಗಳು ರೈತರ ಪಾಲಿಗೆ ಕಾಮಧೇನುವಾಗಿದ್ದು, ಹೈನುಗಾರಿಕೆ ಗ್ರಾಮೀಣ ಜನರ ಕೈಹಿಡಿದಿದೆ. ಇದರಿಂದಾಗಿ ರೈತರು ಕೊಂಚ ನಿರಾಳವಾಗಿ ಜೀವನ ಸಾಗಿಸುವಂತಾಗಿದೆ ಎಂದು ಹೇಳಿದರು.ಇಗ್ಗಲೂರು ಸೊಸೈಟಿ ಅಧ್ಯಕ್ಷ ಇ.ತಿ.ಶ್ರೀನಿವಾಸ್, ಪಶುವೈದ್ಯ ಇಲಾಖೆಯ ಉಪ ನಿರ್ದೇಶಕ ಅಸಾದುಲ್ಲಾ ಷರೀಫ್, ಬಮೂಲ್ ಚನ್ನಪಟ್ಟಣ ಶಿಬಿರ ಕಚೇರಿ ಸಹಾಯಕ ವ್ಯವಸ್ಥಾಪಕ ಡಾ.ಸಿ.ಆರ್.ಕಿರಣ್, ಇಗ್ಗಲೂರು ಗ್ರಾಪಂ ಅಧ್ಯಕ್ಷ ಎನ್.ಎಸ್.ಶಿವಪ್ರಕಾಶ್ ಸೇರಿದಂತೆ ಅನೇಕರು ಮಾತನಾಡಿದರು.
ಸ್ಪರ್ಧೆಯಲ್ಲಿ ಇಗ್ಗಲೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹದಿನಾಲ್ಕು ಸ್ಪರ್ಧಿಗಳು ಭಾಗವಹಿಸಿದ್ದರು.ನೆಲಮಾಕನಹಳ್ಳಿಯ ಯುವ ರೈತ ಕಾರ್ತಿಕ್ ೨೭.೭೯ ಲೀ ಹಾಲು ಕರೆಯುವ ಮೂಲಕ ಪ್ರಥಮ ಬಹುಮಾನ ಗಳಿಸಿ, ೧೫ ಸಾವಿರ ನಗದು ಹಾಗೂ ಇನ್ನಿತರ ವಸ್ತುಗಳನ್ನು ಪಡೆದರು. ಗಿಜಗನದಾಸನದೊಡ್ಡಿ ಪುಟ್ಟರಾಮೇಗೌಡ ೧೦ ಸಾವಿರ ನಗದು ಬಹುಮಾನದೊಂದಿಗೆ ಎರಡನೇ ಸ್ಥಾನ, ನೇರಳೂರು ಮನು ಎನ್.ಆರ್. ಹಾಗೂ ಇಗ್ಗಲೂರು ಸ್ವಾಮಿ ಮೂರು ಮತ್ತು ನಾಲ್ಕನೇ ಸ್ಥಾನ ಪಡೆದರು. ಇನ್ನುಳಿದ ಹತ್ತು ಸ್ಪರ್ಧಿಗಳಿಗೆ ತಲಾ ಒಂದು ಸಾವಿರ ನಗದು ಪ್ರೋತ್ಸಾಹ ಧನ ನೀಡಲಾಯಿತು.
ಪಶು ಪಾಲನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಕೃಷ್ಣಮೂರ್ತಿ,ಪಶು ಸಂಗೋಪನಾ ಇಲಾಖೆಯ ಡಾ.ಮಧು ಎ.ಎನ್, ಡಾ.ಹುಚ್ಚೇಗೌಡ, ಡಾ.ಲೋಕೇಶ್, ಡಾ.ಮೈತ್ರಿ, ಡಾ.ರಕ್ಷಿತಾ, ಡಾ.ಲೋಕೇಶ್, ಡಾ.ಗಿರೀಶ್, ಡಾ.ನಜೀರ್, ಡಾ.ಸುಮಯ್ಯ, ಡಾ.ವಿಶ್ವನಾಥ್, ಎಲ್ ಡಿಒ ಜಯರಾಂ, ಡಾ.ಜುನೈದ್, ಡಾ.ಅಂಕೇಗೌಡ ಇತರರಿದ್ದರು.
ಪೊಟೋ೧೬ಸಿಪಿಟಿ೩:ಚನ್ನಪಟ್ಟಣ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಧಿಕ ಹಾಲು ಕರೆಯುವ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.