ನದಾಫ್‌-ಪಿಂಜಾರ ಸಮಾಜ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲಿ: ಶ್ರೀನಿವಾಸ್ ಗುಪ್ತಾ

KannadaprabhaNewsNetwork |  
Published : Feb 17, 2025, 12:32 AM IST
15ಕೆಪಿಎಲ್24 ಕೊಪ್ಪಳ ನಗರ ಘಟಕದ ಸದಸ್ಯರ ಮಾನ್ಯತಾ ಪತ್ರ ನೀಡುವ ಕಾರ್ಯಕ್ರಮ | Kannada Prabha

ಸಾರಾಂಶ

ನದಾಫ್ -ಪಿಂಜಾರ್ ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ.

ಕೊಪ್ಪಳ ನಗರ ಘಟಕದ ಸದಸ್ಯರ ಮಾನ್ಯತಾ ಪತ್ರ ವಿತರಣೆ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕೊಪ್ಪಳ

ನದಾಫ್ -ಪಿಂಜಾರ್ ಸಮಾಜದ ಪ್ರತಿಯೊಬ್ಬರು ಮಕ್ಕಳಿಗೆ ಶಿಕ್ಷಣ ನೀಡಿದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಹೇಳಿದರು.

ಕೊಪ್ಪಳದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘ ಶಿವಮೊಗ್ಗ, ಕೊಪ್ಪಳ ಗ್ರಾಮೀಣ ಘಟಕದಿಂದ ಉಚಿತ ಕನ್ನಡಕ ವಿತರಣೆ, ಸ್ಮಾರ್ಟ್ ಕಾರ್ಡ್ ವಿತರಣೆ, ತಾಲೂಕು ಮತ್ತು ಜಿಲ್ಲೆಯಿಂದ 2025ರ ಕ್ಯಾಲೆಂಡರ್ ಬಿಡುಗಡೆ ಹಾಗೂ ಕೊಪ್ಪಳ ನಗರ ಘಟಕದ ಸದಸ್ಯರ ಮಾನ್ಯತಾ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜದ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಸಮಾಜ ಆ ವಿದ್ಯಾರ್ಥಿಯ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸಬೇಕು. ನಂತರ ವಿದ್ಯಾರ್ಥಿ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಾನೆ. ನದಾಫ್ ಪಿಂಜಾರ ಸಮಾಜ ಅನೇಕ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡು ಇತರ ಸಮಾಜಗಳ ಪ್ರೀತಿ ಗಳಿಸಿ ರಾಜಕೀಯ, ಆರ್ಥಿಕ, ಶೈಕ್ಷಣಿಕವಾಗಿ ಬೆಳೆಯಲಿ ಎಂದರು.

ರಾಜ್ಯ ಕೋಶ್ಯಾಧ್ಯಕ್ಷ ಶಹೈಬ್ಬುದ್ದೀನ್ ಸಾಬ್ ಮಾತನಾಡಿ, ಸಂಘದ ಕಾರ್ಯಚಟುವಟಿಕೆ, ಸಂಘದ ಸಮಾಜಮುಖಿ ಕಾರ್ಯಗಳ ಕುರಿತು ತಿಳಿಸಿದರು.

ಭಾಗ್ಯನಗರ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಹೊನ್ನೂರಸಾಬ ಬೈರಾಪುರ ಮಾತನಾಡಿ, ಸಂಘ ಸಮಾಜಮುಖಿ ಕಾರ್ಯಗಳತ್ತ ಮುನ್ನಡೆಯಲಿ. ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ್ ಗುಪ್ತಾ ಅವರದ್ದು ಸಂಘಕ್ಕೆ ಸದಾ ಸಹಾಯ ಸಹಕಾರ ಇದೆ, ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಪ್ಪಳ ತಾಲೂಕು ನದಾಫ್ ಪಿಂಜಾರ್ ಸಮಾಜದ ಅಧ್ಯಕ್ಷ ಅಸ್ಮಾನ್ ಸಾಬ್ ವಹಿಸಿದ್ದರು. ವೇದಿಕೆಯ ಮೇಲೆ ಕೊಪ್ಪಳ ಜಿಲ್ಲಾ ನದಾಫ್ ಪಿಂಜಾರ ಸಮಾಜದ ಅಧ್ಯಕ್ಷ ಕಾಶೀಂಅಲಿ ಮುದ್ದಾಬಳ್ಳಿ, ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶಾ, ವಿಜಯನಗರ ಜಿಲ್ಲಾಧ್ಯಕ್ಷ ಪಿ. ಹೊನ್ನೂರ್ ಸಾಬ್, ಕೊಪ್ಪಳ ತಾಲೂಕು ಉಪಾಧ್ಯಕ್ಷ ಫಕ್ರುಸಾಬ್ ನದಾಫ್, ಶಿಕ್ಷಕರಾದ ಕಾಸಿಂಸಾಬ್ ಸಂಕನೂರ, ಅಲ್ಪಾ ಟ್ರಸ್ಟ್ ಅಧ್ಯಕ್ಷೆ ಸಲೀಮಾ ಜಾನ್, ಮುಸ್ಲಿಂ ಪಂಚ್ ಕಮಿಟಿ ಅಧ್ಯಕ್ಷ ಖಾದರ್ ಸಾಬ್ ಕುದರಿಮೋತಿ, ತಾಲೂಕು ಉಪಾಧ್ಯಕ್ಷ ಮುರ್ತಜಸಾಬ ಚುಟ್ಟದ, ತಾಲೂಕು ಕಾರ್ಯದರ್ಶಿ ಮುಸ್ತಫಾ ಕುದರಿ ಮೋತಿ, ತಾಲೂಕು ಸಹ ಕಾರ್ಯದರ್ಶಿ ಶಾಕೀರ್ ನದಾಫ್ ಸೇರಿದಂತೆ ಸಮಾಜದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ