ಹೈನುಗಾರಿಕೆ ರೈತರ ಬದುಕಿಗೆ ಆಧಾರಸ್ತಂಭ: ಶಿವಪ್ಪ ವಾದಿ

KannadaprabhaNewsNetwork |  
Published : Oct 06, 2024, 01:30 AM IST
೦೫ವೈಎಲ್‌ಬಿ೩:ಯಲಬುರ್ಗಾದ ರಾಬಕೊವಿ ಹಾಲು ಒಕ್ಕೂಟದ ಉಪಕಛೇರಿಯಲ್ಲಿ ಒಕ್ಕೂಟದ ಮಾಸಿಕ ಸಭೆ ಹಾಗೂ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರೋತ್ಸಾಹ ಧನ ಚೆಕ್‌ನ್ನು ವಿತರಿಸಿ ಸನ್ಮಾನಿಸಿ ಗೌರವಿಸಲಾಯಿತು | Kannada Prabha

ಸಾರಾಂಶ

ಹೈನುಗಾರಿಕೆ ರೈತರ ಸ್ವಾವಲಂಬಿ ಜೀವನಕ್ಕೆ ಆಧಾರಸ್ತಂಭವಾಗಿದೆ.

ರಾಬಕೊವಿ ಹಾಲು ಒಕ್ಕೂಟದ ಮಾಸಿಕ ಸಭೆ, ಪ್ರತಿಭಾ ಪುರಸ್ಕಾರ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ಹೈನುಗಾರಿಕೆ ರೈತರ ಸ್ವಾವಲಂಬಿ ಜೀವನಕ್ಕೆ ಆಧಾರಸ್ತಂಭವಾಗಿದೆ ಎಂದು ರಾಬಕೊವಿ ಹಾಲು ಒಕ್ಕೂಟದ ನಿರ್ದೇಶಕ ಶಿವಪ್ಪ ವಾದಿ ಹೇಳಿದರು.

ಪಟ್ಟಣದ ರಾಬಕೊವಿ ಹಾಲು ಒಕ್ಕೂಟದ ಉಪಕಚೇರಿಯಲ್ಲಿ ಇತ್ತೀಚೆಗೆ ಒಕ್ಕೂಟದ ಮಾಸಿಕ ಸಭೆ ಹಾಗೂ ರೈತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಬಕೊವಿ ಹಾಲು ಒಕ್ಕೂಟವು ಉತ್ಪಾದನೆಯಲ್ಲಿ ಪಾರದರ್ಶಕತೆ ಹಾಗೂ ಶ್ರೇಷ್ಠ ಗುಣಮಟ್ಟ ಕಾಪಾಡುವಲ್ಲಿ ಅತ್ಯಂತ ಮುಂಚೂಣಿ ಹೊಂದಿದೆ ಎಂದರು.

ರೈತರು ಹಾಲು ಒಕ್ಕೂಟದಿಂದ ನಾನಾ ಸೌಲಭ್ಯ ಪಡೆದುಕೊಂಡು ಹಾಲು ಉತ್ಪಾದನೆ ಹೆಚ್ಚಳಕ್ಕೆ ಶಕ್ತಿಮೀರಿ ಶ್ರಮಿಸುವ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಬೇಕು. ರೈತರು ಹಾಲಿನ ಶೇಖರಣೆ ಹೆಚ್ಚಾಗಬೇಕಿದೆ. ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡೆಯಬೇಕು. ಹೆಚ್ಚಿನ ಹಾಲು ನೀಡುವ ಉತ್ತಮ ರಾಸುಗಳ ತಳಿ ಅಭಿವೃದ್ಧಿ ಮಾಡುವ ಮೂಲಕ ರೈತರು ಅಭಿವೃದ್ಧಿ ಕಾಣಬೇಕು. ಸಕ್ರಿಯ ಸದಸ್ಯರು ರಾಸುಗಳ ವಿಮೆ ಮಾಡಿಸಬೇಕು. ರೈತರ ಆರ್ಥಿಕ ಚೇತರಿಕೆಗೆ ಹಾಲು ಉತ್ಪಾದನೆ ಸಹಕಾರಿಯಾಗಿದ್ದು, ರೈತರು ಹೈನುಗಾರಿಗೆ ಪದ್ಧತಿಗೆ ಪ್ರತಿಯೊಬ್ಬರೂ ಒಲವು ತೋರಬೇಕು. ಇದರಿಂದ ಕಡಿಮೆ ಅವಧಿಯಲ್ಲಿ ಆರ್ಥಿಕವಾಗಿ ಸಬಲರಾಗಿ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ನಿರ್ದೇಶಕಿ ಕವಿತಾ ಗುಳಗಣ್ಣವರ್, ಒಕ್ಕೂಟದ ನಿರ್ದೇಶಕಿ ಕವಿತಾ ಗುಳಗಣ್ಣವರ್, ಮಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶೇಖರಗೌಡಪಾಟೀಲ, ಜಿಲ್ಲಾ ಉಪ ವ್ಯವಸ್ಥಾಪಕ ಡಾ. ಗಂಗಾಧರ ದಿವಟರ್ ಮಾತನಾಡಿದರು.

ಬಳಿಕ ರೈತರ ಮಕ್ಕಳಾದ ಅಶ್ವಿನಿ ಭಜಂತ್ರಿ, ರಾಘವೇಂದ್ರ ನರಸಾಪುರ, ನಾಗಮ್ಮ ಪಾಟೀಲ್ ಅವರಿಗೆ ಉನ್ನತ ಶಿಕ್ಷಣ ಪ್ರೋತ್ಸಾಹಧನವಾಗಿ ತಲಾ ಇಪ್ಪತ್ತು ಸಾವಿರ ರು.ಗಳ ಚೆಕ್‌ನ್ನು ನೀಡಿದರು.

ಈ ವೇಳೆಯಲ್ಲಿ ಒಕ್ಕೂಟದ ವಿಸ್ತರಣಾಧಿಕಾರಿ ಗವಿಸಿದ್ದಪ್ಪ ದಾನಶೆಟ್ಟಿ, ರತ್ನಮ್ಮ, ಸೋಮಶೇಖರ ಗುರಿಕಾರ, ಅನಿತಾ ಹಿರೇಮಠ, ಬಸವರಾಜ ಯರದೊಡ್ಡಿ, ಸತ್ಯನಾರಾಯಣ ಅಂಗಡಿ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ