ಕನ್ನಡಪ್ರಭ ವಾರ್ತೆ ನಾಗಮಂಗಲ
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಭಾರತದಲ್ಲಿಯೇ ದಕ್ಷಬ್ರಹ್ಮ ಸಂಹಾರದ ಸಂಪ್ರದಾಯವಿರುವುದು ನಾಗಮಂಗಲದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಮಾತ್ರ. ಈ ಪ್ರತೀತಿ ದೇಶದ ಯಾವುದೇ ರಾಜ್ಯಗಳ ಶ್ರೀ ವೀರಭದ್ರಸ್ವಾಮಿ ದೇಗುಲ, ಜಾತ್ರೆಗಳಲ್ಲಿ ನಡೆಯುವುದಿಲ್ಲ. ದಕ್ಷಬ್ರಹ್ಮ ಸಂಹಾರವೇ ಈ ಜಾತ್ರಾ ಮಹೋತ್ಸವದ ವಿಶೇಷ ಎಂದರು.
ಕಳೆದ ಸೆ.21ರಂದು ಅಂಕುರಾರ್ಪಣ ನೆರವೇರಿಸಿ, ಸೆ.22ರಂದು ವಿಶೇಷ ಪೂಜೆಯೊಂದಿಗೆ ಧ್ವಜಾರೋಹಣ ಮಾಡುವ ಮೂಲಕ 18 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗಿದೆ. ಪ್ರತಿನಿತ್ಯ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯ ಉತ್ಸವಗಳು ನಡೆಯುತ್ತಿವೆ ಎಂದರು.ಸೆ.25ರಂದು ಗ್ರಾಮದ ಗುಂಡಾ ಭಕ್ತರಿಂದ ಮಂದಹಾಸ ಉತ್ಸವ ನಡೆಯಿತು. ಸೆ.26ರಂದು ಚಿಕ್ಕವೀರನಕೊಪ್ಪಲು ಗ್ರಾಮಸ್ಥರಿಂದ ಶೇಷವಾಹನೋತ್ಸವ. ಸೆ.27ರಂದು ಭದ್ರೇಗೌಡನಕೊಪ್ಪಲು ಗ್ರಾಮಸ್ಥರಿಂದ ಭೂತವಾಹನೋತ್ಸವ, ಸೆ.28ರಂದು ಕಸುವಿನಹಳ್ಳಿ ಗ್ರಾಮಸ್ಥರಿಂದ ಬಸವ ವಾಹನೋತ್ಸವ, ಸೆ.29ರಂದು ದಂ.ಜಕ್ಕನಹಳ್ಳಿ ಗ್ರಾಮಸ್ಥರಿಂದ ನಂದಿವಾಹನೋತ್ಸವ, ಸೆ.30ರಂದು ನಾಗಮಂಗಲ ಲಕ್ಕಿಬೋರಣ್ಣ ವಂಶಸ್ಥರಿಂದ ಹುಲಿವಾಹನೋತ್ಸವ, ಅ.1ರಂದು ಪಾಲಗ್ರಹಾರ ಗ್ರಾಮಸ್ಥರಿಂದ ನಂದಿ ವಾಹನೋತ್ಸವ, ಅ.2ರಂದು ಜೋಡಿನೇರಕೆರೆ ಗ್ರಾಮಸ್ಥರಿಂದ ನವಿಲು ವಾಹನೋತ್ಸವ, ಅ.3ರಂದು ಬೆಟ್ಟದಮಲ್ಲೇನಹಳ್ಳಿ ಗ್ರಾಮಸ್ಥರಿಂದ ತ್ರಿಪುರ ಸಂವಾಹ ಲೀಲೋತ್ಸವ ಜರುಗಿವೆ ಎಂದರು.
ರಥೋತ್ಸವ ಹಾಗೂ ಕೊಂಡೋತ್ಸವ ದಿನದಂದು ಎಲ್ಲ ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಹಾಗಾಗಿ ತಾಲೂಕು, ಜಿಲ್ಲೆ ಸೇರಿದಂತೆ ನಾಡಿನ ವಿವಿದೆಡೆ ಇರುವ ದೇವರ ಒಕ್ಕಲುಗಳು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಗೌರವಾದ್ಯಕ್ಷ ಬಿ.ಕೃಷ್ಣ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಎನ್.ನಟರಾಜ್, ಸದಸ್ಯ ಎನ್. ರುದ್ರೇಶ್ ಗೋಷ್ಠಿಯಲ್ಲಿ ಇದ್ದರು.