ಬುರುಡೆ ಕೇಸ್‌: ಬೆಳ್ತಂಗಡಿ ಕೋರ್ಟ್‌ಗೆ ಎಸ್‌ಐಟಿ ವರದಿ

Published : Jul 16, 2026, 11:02 AM IST
Dharmmasthala Case Chinnayya

ಸಾರಾಂಶ

ರಾಜ್ಯ ಸೇರಿದಂತೆ ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ.

  ಬೆಳ್ತಂಗಡಿ :  ರಾಜ್ಯ ಸೇರಿದಂತೆ ದೇಶದಲ್ಲಿ ಭಾರಿ ಸದ್ದು ಮಾಡಿದ್ದ ಧರ್ಮಸ್ಥಳ ಗ್ರಾಮದ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ.

ನ್ಯಾಯಾಲಯ ನಿರಾಕರಿಸಿ ಅಂತಿಮ ವರದಿ ನೀಡುವಂತೆ ಸೂಚಿಸಿತ್ತು

ಈ ಹಿಂದೆ ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು, ಧರ್ಮಸ್ಥಳ ಪ್ರಕರಣದಲ್ಲಿ 2025ರ ನ.20ರಂದು BNS (u/s-215) ಅಡಿಯಲ್ಲಿ ಸಿ.ಎನ್.ಚಿನ್ನಯ್ಯ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್.ಟಿ, ವಿಠಲ್ ಗೌಡ, ಸುಜಾತಾ ಭಟ್ ವಿರುದ್ಧ 3,923 ಪುಟಗಳ ‘ಸುಳ್ಳು ಸಾಕ್ಷ್ಯ’ (Perjury Report) ವರದಿ ಸಲ್ಲಿಕೆ ಮಾಡಿದ್ದರು. ಈ ವರದಿ ಒಪ್ಪಲು ನ್ಯಾಯಾಲಯ ನಿರಾಕರಿಸಿ ಅಂತಿಮ ವರದಿ ನೀಡುವಂತೆ ಸೂಚಿಸಿತ್ತು.

ಅಂತಿಮ  12 ಫೈಲ್‌ಗಳ ರೂಪದ  ವರದಿ 

ಈ ಹಿನ್ನೆಲೆಯಯಲ್ಲಿ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ನ್ಯಾಯಾಲಯದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಶಾಂಕ್ ನಾಗೇಂದ್ರ ಭಟ್ ಮುಂದೆ ಬುಧವಾರ ಅಪರಾಹ್ನ 3 ಗಂಟೆಗೆ ಎಸ್ಐಟಿಯ ಮೊದಲಿನ 3,923 ಮತ್ತು ಈಗಿನ 3,082 ಸೇರಿ ಈವರೆಗೆ ತನಿಖೆಯ ಸಂಪೂರ್ಣ ಒಟ್ಟು 7005 ಪುಟಗಳ ಅಂತಿಮ ವರದಿಯನ್ನು 12 ಫೈಲ್‌ಗಳ ರೂಪದಲ್ಲಿ ಸಲ್ಲಿಸಿದ್ದಾರೆ.

ಎಸ್ಐಟಿ ಎಸ್ಪಿ ಸಿ.ಎ.ಸೈಮನ್, ಇನ್ಸ್‌ಪೆಕ್ಟರ್ ಕುಸುಮಾಧರ್, ಇನ್ಸ್‌ಪೆಕ್ಟರ್ ಮಂಜುನಾಥ್ ಹಾಗೂ ಸಿಬ್ಬಂದಿ ನ್ಯಾಯಾಲಯದಲ್ಲಿ ಹಾಜರಿದ್ದರು. ಪ್ರಕರಣದ ಆರೋಪಿ ಚಿನ್ನಯ್ಯ ಕೂಡ ನ್ಯಾಯಾಲಯದಲ್ಲಿ ಹಾಜರಾಗಿದ್ದ.

PREV
Get the latest news from Dakshina Kannada (ದಕ್ಷಿಣ ಕನ್ನಡ ಸುದ್ದಿ) — covering coastal city Mangaluru, local governance, beaches & tourism, culture & traditions (Yakshagana, Kambala), education, industry and agriculture, environment, civic issues, and community events from the district on Kannada Prabha News.
Read more Articles on

Recommended Stories

ಯಕ್ಷಗಾನ ಪಠ್ಯಕ್ರಮದಿಂದ ಶೈಲಿಗೆ ಧಕ್ಕೆಯಿಲ್ಲ: ಪಟ್ಲ
ಲೇಡಿಗೋಷನ್ ಆಸ್ಪತ್ರೆಯಲ್ಲಿ ವೈದ್ಯರ ದಿನಾಚರಣೆ