ಕನ್ನಡಪ್ರಭ ವಾರ್ತೆ ಗುಬ್ಬಿ
ಈ ವೇಳೆ ಮಾತನಾಡಿದ ಮುಖಂಡ ಕಡಬ ಶಂಕರ್, ಗ್ರಾಮದಲ್ಲಿ ಸುಮಾರು 30 ದಲಿತ ಕುಂಟುಂಬಗಳು ವಾಸವಾಗಿದ್ದು ದಲಿತ ರೈತರ ಜಮೀನಿನ್ನು ಸರ್ವೆ ಮಾಡುತ್ತೇವೆ ಎಂದು ಹೇಳಿರುವ ಅಧಿಕಾರಿಗಳು, ರೈತರ ಮನೆ ಹತ್ತಿರ ಹೋಗಿ ದಾಖಲಾತಿಗಳನ್ನು ಪಡೆದು ಸಹಿ ಪಡೆದುಕೊಂಡಿದ್ದಾರೆ. ಸರ್ವೆ ನಡೆಸುವ ನಾಟಕ ಮಾಡಿರುವ ಅಧಿಕಾರಿಗಳು ರೈತರ ಪ್ರತಿ 1 ಎಕರೆ ಜಮೀನಿನಲ್ಲಿ 5-10 ಗುಂಟೆಗಳನ್ನು ಕಡಿಮೆ ಮಾಡುವ ಮೂಲಕ ಉಳಿದಿರುವ ಜಮೀನನ್ನು ಬೇರೆಯವರಿಗೆ ಮಾರಾಟ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಬಗ್ಗೆ ವಿಚಾರಿಸಿದರು ಯಾರೊಬ್ಬರು ಉತ್ತರ ನೀಡುತ್ತಿಲ್ಲ. ಒಂದೇ ಕಡೆ ಜಮೀನುಗಳಲ್ಲಿ ಅಳತೆ ಕಡಿಮೆ ತೋರಿಸಿ ಕೊನೆಗೆ ಉಳಿಯುವ ಜಮೀನಿಗೆ ಪಟ್ಟಭದ್ರರ ಹೆಸರು ಕೂಡಿಸುವ ಸಂಚನ್ನು ಅಧಿಕಾರಿಗಳು ನಡೆಸಿರುವುದು ನಾಚಿಕೆಗೇಡಿನ ಸಂಗತಿ. ಈ ಸಮಸ್ಯೆ ಪರಿಹಾರಕ್ಕೆ ತಹಸೀಲ್ದಾರರು ಸ್ಥಳಕ್ಕೆ ಬರಬೇಕು ಮತ್ತು ಕೊಳ್ಳೆ ಹೊಡೆಯಲು ಉದ್ದೇಶಿಸಿರುವ ದಲಿತರ ಜಮೀನನ್ನು ವಾಪಸ್ಸು ಕೊಡಿಸಬೇಕು. ಇಲ್ಲವಾದರೆ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದು ಎಚ್ಚರಿಸಿದರು. ದಲಿತ ಮುಖಂಡ ಈಶ್ವರಯ್ಯ ಮಾತನಾಡಿ ಹಲಸಿನ ನಾಗೇನಹಳ್ಳಿ ಗ್ರಾಮದಲ್ಲಿ ಸುಮಾರು 30ರಿಂದ 40 ದಲಿತ ಕುಂಟುಂಬಗಳು ಇದ್ದು ಸುಮಾರು ಎರಡು ತಲೆ ಮಾರುಗಳಿಂದ ರೈತರಿಗೆ ಸರ್ಕಾರ ಭೂಮಿ ಕೊಟ್ಟಿದೆ. ರೈತರು ಜಮೀನಿನ್ನು ಸಾಗುವಳಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ದಲಿತರ ಜಮೀನು ದುರಸ್ತಿ ಮಾಡುವ ನೆಪದಲ್ಲಿ ಜಮೀನಿನ ದಾಖಲೆ ಹಾಗೂ ಅಳತೆ ತಿದ್ದಲಾಗುತ್ತಿದೆ. ಇದು ಸರಿಯಲ್ಲ ಎಂದರು. ಕಂದಾಯ ಅಧಿಕಾರಿ ಮೋಹನ್ ಮಾತನಾಡಿ ರೈತರ ಜಮೀನು ಸರ್ವೆ ಮಾಡುವಾಗ ರೈತರ ಜಮೀನ್ ಕಡಿಮೆ ಆಗಿದೆ ಅಂಥ ರೈತರು ಪ್ರತಿಭಟನೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೂಡಲೇ ತಹಸೀಲ್ದಾರ್ ಗಮನಕ್ಕೆ ತಂದು ಮತ್ತೊಮ್ಮೆ ರೈತರ ಜಮೀನ್ ಸರ್ವೆ ಮಾಡಿಸಿ ಒಂದು ವಾರದೊಳಗೆ ಸಮಸ್ಯೆಯನ್ನು ಬಗೆಹರಿಸಲಾಗುತ್ತದೆ. ರೈತರು ಸಹಕರಿಸಬೇಕು ಎಂದು ಹೇಳಿದ ಬಳಿಕ ದಲಿತ ಮುಖಂಡರು ಪ್ರತಿಭಟನೆಯನ್ನು ಹಿಂಪಡೆದರು.
ಇದೇ ಸಂಧರ್ಭದಲ್ಲಿ ದಲಿತ ಮುಖಂಡರಾದ ಕಲ್ಲೇಶ್ ,ರವಿಕುಮಾರ್ , ಯೋಗೀಶ್ , ಶಶಿಕುಮಾರ್ , ಹಾಗೂ ದಲಿತ ಮುಖಂಡರು ಭಾಗವಹಿಸಿದ್ದರು.