ಕನ್ನಡಪ್ರಭ ವಾರ್ತೆ ಮಂಗಳೂರು
ವಿಶಾಖಪಟ್ಟಣಂ ತಂಡದ ಸೌಂದರ್ಯ ಮದ್ದಾಳಿ ಮತ್ತು ತಂಡ ಕುಚಿಪುಡಿಯಲ್ಲಿ ಅತ್ಯಂತ ಸುಂದರವಾಗಿ ನೃತ್ಯ ಪ್ರದರ್ಶನ ನೀಡಿದರು. ಮುಂಬೈನ ಸುಜಾತಾ ನಾಯರ್ ಹಾಗೂ ಪುತ್ರಿ ಶರಣ್ಯ ಅವರ ಜೊತೆಯಲ್ಲಿ ಮೋಹಿನೀಯಟ್ಟಂನಲ್ಲಿ ಪ್ರದರ್ಶನ ನೀಡಿದರು.ನೃತ್ಯ ಗುರು ನಿಲೇಶ್ವರಂ ಕಲಾಮಂಡಲಂ ಅಜಿತ್ ಅವರನ್ನು ಗೋಶಾಲೆಯ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಉದುಮ ಶಾಸಕ ಸಿ. ಎಚ್. ಕುಂಞಂಬು ಇದ್ದರು.
...........ಚೇಳೈರು ಖಂಡಿಗೆ ಜಾತ್ರಾ ಮಹೋತ್ಸವ 14,15ರಂದುತುಳುನಾಡಿನಲ್ಲಿ ಬೇಸಿಗೆಯ ಕೊನೆಯ ಜಾತ್ರೆಯಾಗಿರುವ ಚೇಳೈರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ಜಾತ್ರಾ ಮಹೋತ್ಸವ 14 ಹಾಗೂ 15ರಂದು ಜರುಗಲಿದೆ. 14ರಂದು ಬೆಳಗ್ಗೆ 7ಕ್ಕೆ ಮೀನು ಹಿಡಿಯುವಿಕೆ, ನಂತರ ಮೂಲಸ್ಥಾನದಲ್ಲಿ ಗಣಹೋಮ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ 9 ಕ್ಕೆ ಬ್ರಹ್ಮಸ್ಥಾನದಲ್ಲಿ ತಂಬಿಲ, ಕುಮಾರ ಸಿರಿಗಳ ದರ್ಶನ, ದೈವಗಳ ಭಂಡಾರ ಮೂಲಸ್ಥಾನಕ್ಕೆ ಹೋಗುವ ಆಚರಣೆ ನಡೆಯುುವುದು. 15ರಂದು ಬೆಳಗ್ಗೆ 5ಕ್ಕೆ ಧರ್ಮರಸು ಉಳ್ಳಾಯ, ಇಷ್ಟದೇವತೆ, ಬೊಬ್ಬರ್ಯ, ಪರಿವಾರ ದೈವಗಳಿಗೆ ನೇಮೋತ್ಸವ, ನಂತರ ನಾಗದೇವರಿಗೆ ತಂಬಿಲ, ಜಾರಂತಾಯ ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಕೋರ್ದಬ್ಬು ದೈವದ ಭೇಟಿ, ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಜಾತ್ರೆಯ ಸಂದರ್ಭ ವಿಶೇಷವಾಗಿ ತುಳುನಾಡ ಸಂತೆ ಎರಡು ದಿನ ಜರಗಲಿದೆ ಎಂದು ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ತೋಕೂರುಗುತ್ತು ತಿಳಿಸಿದ್ದಾರೆ.