)
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಮಲೆನಾಡು ಭಾಗದಲ್ಲಿ ನಿರಂತರ ಮಳೆ ಪರಿಣಾಮ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಭಾನುವಾರ ಆರೆಂಜ್ ಅಲರ್ಟ್‌ನ ನೀಡಿದ್ದು, ಸಂಬಂಧಿತ ಜಿಲ್ಲಾಡಳಿತಗಳಿಗೆ ಎಚ್ಚರಿಕೆ ವಹಿಸಲು ಸೂಚಿಸಿದೆ.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಹರಿಹರಪುರದಲ್ಲಿ ತುಂಗಾ ನದಿ ನೀರಿನ ಮಟ್ಟ 619.16 ಮೀ. ದಾಖಲಾಗಿದೆ. ಇದು ಅಪಾಯದ ಮಟ್ಟವಾದ 618.00 ಮೀ. 1.16 ಮೀ. ಹೆಚ್ಚಾಗಿದೆ. ನದಿ ತೀವ್ರ ಪ್ರವಾಹ ಪರಿಸ್ಥಿತಿಯಲ್ಲಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳು ಹಾಗೂ ಕೃಷಿಕರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.2019ರಲ್ಲಿ ಸುರಿದ ಭಾರೀ ಮಳೆಯಿಂದ ತುಂಗಾ 619.865 ಮೀ. ಹರಿದಿತ್ತು. ಅದಕ್ಕೆ ಹೋಲಿಸಿದರೆ 0.71 ಮೀ. ಅಷ್ಟೇ ಕಡಿಮೆ ಇದೆ ಎಂದು ತಿಳಿಸಿದೆ.
ಶಿವಮೊಗ್ಗ ಜಿಲ್ಲೆಯ ಮಹಿಷಿ ಪ್ರದೇಶದಲ್ಲೂ ತುಂಗಾ ನದಿ ಅಪಾಯದ ಮಟ್ಟ ಮೀರಿದೆ. ಮಧ್ಯಾಹ್ನ 12 ಗಂಟೆಗೆ 595.73 ಮೀ. ನೀರಿನ ಮಟ್ಟ ದಾಖಲಾಗಿದೆ. ಇದು ಅಪಾಯದ ಮಟ್ಟಕ್ಕಿಂತ 1.73 ಮೀ. ಹೆಚ್ಚಾಗಿದೆ. ನೀರಿನ ಮಟ್ಟದಲ್ಲಿ ತ್ವರಿತ ಏರಿಕೆ ಕಂಡುಬರುತ್ತಿರುವುದರಿಂದ ತಗ್ಗು ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲು ಅಧಿಕಾರಿಗಳು ಮನವಿ ಮಾಡಿದ್ದಾರೆ. ---ಕೋಟ್----
- ಭನ್ವರ್ ಸಿಂಗ್ ಮೀನಾ, ಜಿಲ್ಲಾಧಿಕಾರಿ, ಚಿಕ್ಕಮಗಳೂರು