ತರೀಕೆರೆಗಮಕ ಭಾರತದ ಪ್ರಾಚೀನ ಕಲೆಯಾಗಿದೆ ಎಂದು ತರೀಕೆರೆ ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಚ್. ಕುಮಾರಸ್ವಾಮಿ ಹೇಳಿದ್ದಾರೆ.
ತರೀಕೆರೆಯಲ್ಲಿ ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆ
ಗಮಕ ಭಾರತದ ಪ್ರಾಚೀನ ಕಲೆಯಾಗಿದೆ ಎಂದು ತರೀಕೆರೆ ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಚ್. ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ಗಮಕ ಕಲಾ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಘಟಕದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹ ಯೋಗದಲ್ಲಿ ಪಟ್ಟಣದ ಶ್ರೀ ಸತ್ಯಪ್ರದ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆದ ಗಮಕ ವಾಚನದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿ ಸಂಗೀತ ಮತ್ತು ಸಾಹಿತ್ಯದ ಭಾಗವಾಗಿ ವಚನ ಮತ್ತು ವ್ಯಾಖ್ಯಾನ ವೈಶಿಷ್ಟ್ಯಪೂರ್ಣವಾಗಿದೆ. ಗಮಕ ಕಲೆಗೆ ವಿಶಿಷ್ಟ ಸ್ಥಾನವಿದೆ ಎಂದು ಹೇಳಿದರು.
ತಾಲೂಕು ಗಮಕ ಕಲಾ ಪರಿಷತ್ ಗೌರವಾಧ್ಯಕ್ಷ ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಗಮಕ ಸಾಹಿತ್ಯ ಅತ್ಯಂತ ವಿಸ್ಥಾರವಾಗಿದೆ. ಸನಾತನ ಧರ್ಮದ ಮೇರುಕೃತಿ ರಾಮಾಯಣ ಮತ್ತು ಮಹಾಭಾರತ ಖಂಡ ಕಾವ್ಯ ಪ್ರಸಂಗವನ್ನು ಅನೇಕ ಜ್ಞಾನಿಗಳು ಸಾಮಾನ್ಯರಿಗೂ ಸರಳವಾಗಿ ಅರ್ಥವಾಗುವಂತೆ ಪ್ರಸಂಗಗಳನ್ನು ವಿಭಾಗಿಸಿ ವಾಚನ ಮತ್ತು ವ್ಯಾಖ್ಯಾನದ ಮೂಲಕ ಜನಮನಕ್ಕೆ ತಲುಪಿಸಿರುವುದು ವಿಶೇಷ ಎಂದು ಹೇಳಿದರು.
ಒಂದೊಂದು ಪ್ರಸಂಗ ಮನುಷ್ಯನ ಜೀವನದ ಔನ್ನತ್ಯಕ್ಕೆ ಸಂಗೀತ ಮತ್ತು ಸಾಹಿತ್ಯದ ಮುಖೇನ ಅನೇಕ ಕಾರ್ಯ ಕ್ರಮ ಗಳಲ್ಲಿ ಇಂತಹ ಪ್ರಯೋಗ ಪ್ರಾಚೀನ ಕಾಲದಿಂದ ಈ ವರೆಗೂ ನಿರಂತರವಾಗಿ ನಡೆದಿದೆ. ದೇವನೂರು ಮಹಾಕವಿ ಲಕ್ಷ್ಮೀಶ ಅವರ ವಿರಚಿತ ಜೈಮಿನಿ ಭಾರತ ಮಹಾಕಾವ್ಯ ಅತ್ಯಂತ ಮನೋಜ್ಞವಾಗಿದೆ ವಾಚಕರು ಹಾಗೂ ವ್ಯಾಖ್ಯಾನ ಕಾರರಿಗೆ ಅತ್ಯಂತ ಅಪ್ಯಾಯಮಾನವಾಗಿದೆ. ಇಂತಹ ಗಮಕ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಶ್ರೀವಾರಿ ಭಜನಾ ಮಂಡಳಿ ಅಧ್ಯಕ್ಷೆ ಕವಿತಾ ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಭಾರತೀಯ ಪರಂಪರೆ ಅನೇಕ ಶ್ರೇಷ್ಠ ಗ್ರಂಥಗಳ ಸಾರ ಆಸ್ವಾದಿಸುವ ಅವಕಾಶ ಕಲ್ಪಿಸುವ ಗಮಕ ಕಲಾ ಪರಿಷತ್ತಿನ ಪ್ರಯತ್ನ ಶ್ಲಾಘನೀಯ ಎಂದರು.
ಕಜಾಪ ತಾಲೂಕು ಅಧ್ಯಕ್ಷೆ ಲೀಲಾಸೋಮಶೇಖರಯ್ಯಮಾತನಾಡಿ ಹಿಂದೂ ಸಮಾಜದ ಎಲ್ಲಾ ಭಜನಾ ಮಂಡಳಿ ಯವರನ್ನು ಒಗ್ಗೂಡಿಸಿ, ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ರೂಪಿಸಿರುವುದು ಉತ್ತಮ ಎಂದರು.
ಗಮಕ ಕಲಾ ಪರಿಷತ್ತು ಜಿಲ್ಲಾಧ್ಯಕ್ಷ ಕಲಾಶ್ರೀ ರಾಮಸುಬ್ರಾಯ ಶೇಟ್ ಮತ್ತು ಕಮ್ಮರಡಿ ಗಮಕ ಶಿಕ್ಷಕಿ ಮನೋನ್ಮಣಿ ಮೂರ್ತಿ ಶ್ರೀಕೃಷ್ಣನ ಬಾಲ್ಯ ಲೀಲೆಗಳು ಎಂಬ ಪ್ರಸಂಗ ಕುರಿತು ಗಮಕ ವಾಚನ ಮಾಡಿದರು.
ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ, ಶ್ರೀ ಸತ್ಯಪ್ರದ ಲಕ್ಷ್ಮೀ ವೆಂಕಟೇಶ್ವರಸ್ವಾಮಿ ದೇವಸ್ಥಾನ ಟ್ರಸ್ಚಿ ಕೃಷ್ಣಮೂರ್ತಿ, ಗಮಕಿಗಳಾದ ಸುನಿತಾ ಕಿರಣ್, ಲಕ್ಷ್ಮೀಭಗವಾನ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
2ಕೆಟಿಆರ್.ಕೆ.8ಃ ತರೀಕೆರೆಯಲ್ಲಿ ನಡೆದ ಗಮಕ ವಾಚನ ಕಾರ್ಯಕ್ರಮವನ್ನು ಶ್ರೀವಾರಿ ಭಜನಾ ಮಂಡಳಿ ಅಧ್ಯಕ್ಷೆ ಕವಿತಾ ಪ್ರಕಾಶ್ ಉದ್ಘಾಟಿಸಿದರು. ತಾಲೂಕು ಗಮಕ ಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಚ್.ಕುಮಾರಸ್ವಾಮಿ, ಕನ್ನಡಶ್ರೀ ಬಿ.ಎಸ್. ಭಗವಾನ್, ಕಲಾಶ್ರೀ ರಾಮಸುಬ್ರಾಯ ಶೇಟ್, ಕಮ್ಮರಡಿ ಗಮಕ ಶಿಕ್ಷಕಿ ಮನೋನ್ಮಣಿಮೂರ್ತಿ, ಸುನಿತಾ ಕಿರಣ್, ಲೀಲಾ ಸೋಮಶೇಖರಯ್ಯ, ಕೆ.ಎಸ್. ಶಿವಣ್ಣ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.