5, 6ಕ್ಕೆ ದಸಂಸ ಮಹಾಧಿವೇಶನ

KannadaprabhaNewsNetwork |  
Published : Oct 01, 2024, 01:17 AM IST
ಪತ್ರಿಕಾಗೋಷ್ಠಿ | Kannada Prabha

ಸಾರಾಂಶ

ತುಮಕೂರು: ಕರ್ನಾಟಕದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಮಟ್ಟದ ಮಹಾಧಿವೇಶನ ಅಕ್ಟೋಬರ್ 5 ರ ಶನಿವಾರ ಮತ್ತು ಅಕ್ಟೋಬರ್ 6 ರ ಭಾನುವಾರ ನಗರದ ಎಂಪ್ರೆಸ್ ಕೆಪಿಎಸ್‌ಶಾಲೆಯ ಸಭಾಂಗಣದಲ್ಲಿ ಜರುಗಲಿದೆ ಎಂದು ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.

ತುಮಕೂರು: ಕರ್ನಾಟಕದಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ರಾಜ್ಯಮಟ್ಟದ ಮಹಾಧಿವೇಶನ ಅಕ್ಟೋಬರ್ 5 ರ ಶನಿವಾರ ಮತ್ತು ಅಕ್ಟೋಬರ್ 6 ರ ಭಾನುವಾರ ನಗರದ ಎಂಪ್ರೆಸ್ ಕೆಪಿಎಸ್‌ಶಾಲೆಯ ಸಭಾಂಗಣದಲ್ಲಿ ಜರುಗಲಿದೆ ಎಂದು ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮದ ಪ್ರಕಾರ ಪ್ರತಿ ಮೂರು ವರ್ಷಗಳಿಗೊಮ್ಮೆ ಸರ್ವ ಸದಸ್ಯರ ಸಭೆ ನಡೆಸುವುದು ಕಡ್ಡಾಯ. ಹಿನ್ನೆಲೆಯಲ್ಲಿ ಅಕ್ಟೋಬರ್ 5-6 ರಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರು,ಸಂಘಟನಾ ಸಂಚಾಲಕರು,ಪದಾಧಿಕಾರಿಗಳು, ತಾಲೂಕು ಪದಾಧಿಕಾರಿಗಳ ಮಹಾಧೀವೇಶವನ್ನು ಆಯೋಜಿಸ ಲಾಗುತ್ತಿದೆ. ಅಕ್ಟೋಬರ್ 5 ರಂದು ನಡೆಯುವ ದಲಿತ ಸಂಘರ್ಷ ಸಮಿತಿಯ ಮಹಾಧೀವೇಶನವನ್ನು ಬಂಡಾಯ ಸಾಹಿತಿ ನಾಡೋಜ ಬರಗೂರ ರಾಮಚಂದ್ರಪ್ಪ ಅವರು ಉದ್ಘಾಟಿಸಲಿದ್ದು, ಸಹಕಾರಿ ಸಚಿವರಾದ ಕೆ.ಎನ್.ರಾಜಣ್ಣ, ಜಾನಪದ ಅಕ್ಯಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್, ಇಂದಿರಾ ಕೃಷ್ಣಪ್ಪ, ನಟರಾಜ್ ಬೂದಾಳ್, ಜಿ.ವಿ.ಆನಂದಮೂರ್ತಿ, ಕೆ.ದೊರೆರಾಜು ಮತ್ತಿತರರ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಮಾವಳ್ಳಿ ಶಂಕರ್ ತಿಳಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್‌ವಾದದ ತುಮಕೂರು ಜಿಲ್ಲಾಧ್ಯಕ್ಷ ಕುಂದೂರು ತಿಮ್ಮಯ್ಯ ಮಾತನಾಡಿ, ರಾಜ್ಯದ ಚಳವಳಿಗಳಲ್ಲಿ ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ ದಲಿತ ಸಂಘರ್ಷ ಸಮಿತಿಯ ಹೋರಾಟ ರೋಚಕವಾದುದ್ದು, ಹಲವಾರು ನಾಯಕರು ಚಳವಳಿಯ ರಥ ಎಳೆದಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಚೇಳೂರು ಶಿವನಂಜಪ್ಪ, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುರುಳಿ ಕುಂದೂರು, ಶ್ರೀನಿವಾಸ್, ತಾಯಪ್ಪ, ನಾಗಣ್ಣ ಬಡಿಗೇರ್,ವೀರೇಶ್ ಹಿರೇಹಳ್ಳಿ,ಡಾ.ಮಹೇಶ್, ಸಿದ್ದಪ್ಪ ಕಾಂಬ್ಳೆ ಮತ್ತಿತರರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ಪ್ರಕರಣ:ಸರ್ಕಾರದ ಮನೆಗೆ 37 ಜನ ಮಾತ್ರ ಅರ್ಹ
ಉದ್ಯಮಿ ಮಾಲೀಕನ ಮನೆಗೇ ಕನ್ನ:ಕಾರು ಚಾಲಕ ಸೇರಿ ನಾಲ್ವರ ಸೆರೆ