ದಸರಾ, ದೀಪಾವಳಿಗೆ ವಿಶೇಷ ರೈಲು: ರೈಲ್ವೆ ಸಚಿವರಿಗೆ ಟ್ವೀಟ್

KannadaprabhaNewsNetwork |  
Published : Oct 10, 2026, 02:45 AM IST
ಅರುಣ್‌ಶ್ಯಾಮ್‌  | Kannada Prabha

ಸಾರಾಂಶ

ದಸರಾ ಹಾಗೂ ದೀಪಾವಳಿ ಹಬ್ಬದ ರಜಾ ಅವಧಿಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ವಿಶೇಷ ರೈಲುಗಳನ್ನು ಓಡಿಸುವಂತೆ ದ.ಕ. ಮೂಲದ ಬೆಂಗಳೂರಿನ ಹಿರಿಯ ನ್ಯಾಯವಾದಿ ಹಾಗೂ ಕರ್ಣಾಟಕ ಬ್ಯಾಂಕ್‌ ನಿರ್ದೇಶಕ ಅರುಣ್‌ಶ್ಯಾಮ್‌ ಒತ್ತಾಯಿಸಿದ್ದಾರೆ.ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಂಘಟನೆಯ ಮನವಿಯನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಗುರುವಾರ ತನ್ನ ‘ಎಕ್ಸ್‌’ ಖಾತೆ ಮೂಲಕ ಟ್ಯಾಗ್ ಮಾಡಿ ಅವರು ಮನವಿ ಮಾಡಿದ್ದಾರೆ.

ಮಂಗಳೂರು: ದಸರಾ ಹಾಗೂ ದೀಪಾವಳಿ ಹಬ್ಬದ ರಜಾ ಅವಧಿಯಲ್ಲಿ ಬೆಂಗಳೂರು-ಮಂಗಳೂರು ನಡುವೆ ಹೆಚ್ಚುತ್ತಿರುವ ಪ್ರಯಾಣಿಕರ ದಟ್ಟಣೆ ಹಿನ್ನೆಲೆಯಲ್ಲಿ ವಿಶೇಷ ರೈಲುಗಳನ್ನು ಓಡಿಸುವಂತೆ ದ.ಕ. ಮೂಲದ ಬೆಂಗಳೂರಿನ ಹಿರಿಯ ನ್ಯಾಯವಾದಿ ಹಾಗೂ ಕರ್ಣಾಟಕ ಬ್ಯಾಂಕ್‌ ನಿರ್ದೇಶಕ ಅರುಣ್‌ಶ್ಯಾಮ್‌ ಒತ್ತಾಯಿಸಿದ್ದಾರೆ.ಪುತ್ತೂರು-ಸುಬ್ರಹ್ಮಣ್ಯ ರೈಲು ಬಳಕೆದಾರರ ಸಂಘಟನೆಯ ಮನವಿಯನ್ನು ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಹಾಗೂ ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರಿಗೆ ಗುರುವಾರ ತನ್ನ ‘ಎಕ್ಸ್‌’ ಖಾತೆ ಮೂಲಕ ಟ್ಯಾಗ್ ಮಾಡಿ ಅವರು ಮನವಿ ಮಾಡಿದ್ದಾರೆ.ದಸರಾ ಸಂದರ್ಭದಲ್ಲಿ ಬೆಂಗಳೂರಿನಿಂದ ಕರಾವಳಿ ಕರ್ನಾಟಕದ ತಮ್ಮ ಊರುಗಳಿಗೆ ತೆರಳುವವರ ಸಂಖ್ಯೆ ಹೆಚ್ಚಲಿದ್ದು, ಮಂಗಳೂರು ಮಾತ್ರವಲ್ಲದೆ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳಕ್ಕೆ ತೆರಳುವ ಭಕ್ತರ ಸಂಖ್ಯೆಯೂ ಹೆಚ್ಚಾಗಲಿದೆ. ಹೀಗಾಗಿ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಹೆಚ್ಚುವರಿ ರೈಲು ಸೇವೆ ಅಗತ್ಯವಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಅ.16ರಂದು ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು-ಕೋಝಿಕ್ಕೋಡ್ ಎಕ್ಸ್‌ಪ್ರೆಸ್‌ನಲ್ಲಿ ‘ರೆಗ್ರೆಟ್’ ತೋರಿಸುತ್ತಿದ್ದು, 16585 ಎಸ್‌ಎಂವಿಟಿ ಬೆಂಗಳೂರು-ಮುರ್ಡೇಶ್ವರ ಎಕ್ಸ್‌ಪ್ರೆಸ್‌ನಲ್ಲಿ 150ಕ್ಕೂ ಅಧಿಕ ಪ್ರಯಾಣಿಕರ ವೇಟಿಂಗ್ ಲಿಸ್ಟ್ ಇದೆ. ಇದೇ ರೀತಿ ನ. 6ರಂದು ದೀಪಾವಳಿ ಅವಧಿಯಲ್ಲೂ ಎರಡೂ ರೈಲುಗಳಲ್ಲಿ 150ಕ್ಕೂ ಅಧಿಕ ವೇಟಿಂಗ್ ಲಿಸ್ಟ್ ಇರುವುದನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.ಅ. 16ರಂದು ಕೆಎಸ್ಆರ್ ಬೆಂಗಳೂರು/ಯಶವಂತಪುರದಿಂದ ಮಂಗಳೂರು ಸೆಂಟ್ರಲ್‌ಗೆ ವಿಶೇಷ ರೈಲು ಓಡಿಸಬೇಕು ಎಂದು ಆಗ್ರಹಿಸಲಾಗಿದೆ. ದಸರಾ ರಜೆ ಮುಗಿದ ಬಳಿಕ ಪ್ರಯಾಣಿಕರ ವಾಪಸಾತಿಗಾಗಿ ಅ.20ರಂದು ಮಂಗಳೂರು ಸೆಂಟ್ರಲ್‌ನಿಂದ ಕೆಎಸ್ಆರ್ ಬೆಂಗಳೂರು/ಯಶವಂತಪುರಕ್ಕೆ ವಿಶೇಷ ರೈಲು ಓಡಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ದೀಪಾವಳಿ ಪ್ರಯುಕ್ತ ನ.6ರಂದು ಬೆಂಗಳೂರು/ಯಶವಂತಪುರದಿಂದ ಮಂಗಳೂರಿಗೆ ಹಾಗೂ ರಜೆ ಮುಗಿದ ಬಳಿಕ ನ.9ರಂದು ಮಂಗಳೂರಿನಿಂದ ಬೆಂಗಳೂರು/ಯಶವಂತಪುರಕ್ಕೆ ವಿಶೇಷ ರೈಲು ಸೇವೆ ಕಲ್ಪಿಸುವಂತೆ ಅರುಣ್‌ಶ್ಯಾಮ್‌ ಮನವಿಯಲ್ಲಿ ಆಗ್ರಹಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಳೆ ಮೈಸೂರು ಭಾಗಕ್ಕೆ ನಾಲ್ವಡಿ ಹೆಸರಿಡಿ
ಎಸ್ಐಆರ್ ರದ್ದುಪಡಿಸಲು, ಜ್ಞಾನೇಶ್ ಕುಮಾರ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ