ಹುಲಿಗೆಮ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವ, ನಿತ್ಯ ಚಂಡಿಕಾ ಯಾಗ

KannadaprabhaNewsNetwork |  
Published : Oct 09, 2026, 02:00 AM IST
ಶ್ರೀ ಹುಲಿಗೆಮ್ಮ ದೇವಿಯ ಅಲಂಕಾರ ಮಾಡಲಾಗಿದೆ. | Kannada Prabha

ಸಾರಾಂಶ

ಮುನಿರಾಬಾದ್‌ನ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಪ್ರತಿನಿತ್ಯ ದೇವಸ್ಥಾನದಲ್ಲಿ ಚಂಡಿಕಾ ಹೋಮ ಜರುಗಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ರಾವ್ ತಿಳಿಸಿದ್ದಾರೆ.

ಮುನಿರಾಬಾದ್: ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಹುಲಿಗೆಮ್ಮ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ಪ್ರಯುಕ್ತ ಪ್ರತಿನಿತ್ಯ ದೇವಸ್ಥಾನದಲ್ಲಿ ಚಂಡಿಕಾ ಹೋಮ ಜರುಗಲಿದೆ ಎಂದು ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ರಾವ್ ತಿಳಿಸಿದ್ದಾರೆ.

ಅ. 11ರಿಂದ ಅ. 20ರ ವರೆಗೆ ಪ್ರತಿನಿತ್ಯ ದೇವಸ್ಥಾನದಲ್ಲಿ ಚಂಡಿಕಾ ಹೋಮ ನಡೆಯಲಿದೆ ಎಂದು ಅವರು ಹೇಳಿದರು. ದಸರಾ ಮಹೋತ್ಸವದ ಪ್ರಯುಕ್ತ ದೇವಸ್ಥಾನದಲ್ಲಿ ಪ್ರತಿನಿತ್ಯ ಬೆಳಗಿನ ಜಾವ ಸುಪ್ರಭಾತ, ಅಮ್ಮನವರಿಗೆ ವಿಶೇಷ ಪೂಜೆ, ಮಹಾ ನೈವೇದ್ಯ ಮಾಡಲಾಗುವುದು. ಎನ್ . ನಾಗಭೂಷಣ ಹೊಸಪೇಟೆ ಇವರಿಂದ ಚಿದಾನಂದ ಅವಧೂತ ವಿರಚಿತ ಶ್ರೀದೇವಿ ಪಾರಾಯಣ ಪಠಣ ಕಾರ್ಯ ಪ್ರತಿನಿತ್ಯ ಜರುಗಲಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ವಿವರಿಸಿದರು.

ಅ. 11ರಂದು ಸಂಜೆ 6.30ಕ್ಕೆ ಘಟಸ್ಥಾಪನೆ ಮಾಡಲಾಗುವುದು. ನೇಹಾ ಹಾಗೂ ತಂಡದವರು ಭರತನಾಟ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಅ 12ರಂದು ಸಂಜೆ 6.30ಕ್ಕೆ ಗೀತಪ್ರಿಯ ಸಂಸ್ಕೃತಿ ನೃತ್ಯ ಶಾಲೆಯ ತಂಡದಿಂದ ಭರತನಾಟ್ಯ ಕಾರ್ಯಕ್ರಮ. ಅ. 13ರಂದು ಧಾರವಾಡದ ರಾಘವ್ ಕಮ್ಮಾರ್ ಅವರಿಂದ ಕನ್ನಡ ಗಜಲ್ ಕಾರ್ಯಕ್ರಮ ಮತ್ತು ಹೊಸಪೇಟೆಯ ಅಪೂರ್ವಾ ಮತ್ತು ತಂಡದಿಂದ ಭರತನಾಟ್ಯ ಕಾರ್ಯಕ್ರಮ. ಅ. 14ರಂದು ಬೆಂಗಳೂರಿನ ಶೇಷಗಿರಿ ದಾಸ್ ಅವರಿಂದ ದಾಸವಾಣಿ ಕಾರ್ಯಕ್ರಮ. ಅ. 15ರಂದು ಅನ್ನದಾನೇಶ್ವರ ಮಠ ಕುಕನೂರಿನ ಪೀಠಾಧಿಪತಿ ಡಾ. ಮಹಾದೇವ ಮಹಾಸ್ವಾಮಿಗಳಿಂದ ಆಶೀರ್ವಚನ, ಪುತ್ತೂರು ನರಸಿಂಹ ನಾಯಕ್ ಹಾಗೂ ಅವರ ಬಳಗದಿಂದ ಸಂಗೀತ ಕಾರ್ಯಕ್ರಮ. ಅ. 16ರಂದು ಧಮನಿ ಸಂಜೀವ್ ತೋಟಗಂಟಿ ಅವರಿಂದ ಭರತನಾಟ್ಯ, ಮುನಿರಾಜು ಮತ್ತು ತಂಡದಿಂದ ಜನಪದ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಅ. 17ರಂದು ಸಾಹಿತ್ಯ ಗೊಂಡಬಾಳ ಅವರಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಯಲ್ಲನಗೌಡ ಬಳ್ಳಾರಿ ಅವರಿಂದ ಜನಪದ ತತ್ವಪದಗಳು. ಅ. 18ರಂದು ಹೊಸಪೇಟೆಯ ರೀನಾ ನಂದನ್ ಅವರಿಂದ ವಚನ ಸಾಹಿತ್ಯ ಮತ್ತು ಬೂದುಗುಂಪ ಅವರಿಂದ ಭಕ್ತ ಪ್ರಹ್ಲಾದ ಕಥಾ ಪ್ರಸಂಗ ಬಯಲಾಟ ಕಾರ್ಯಕ್ರಮ ನಡೆಯಲಿದೆ. ಅ. 19ರಂದು ಕೊಪ್ಪಳದ ಗವಿಸಿದ್ಧೇಶ್ವರ ಸ್ವರ ಸಂಚಾರ ಕಲಾತಂಡದಿಂದ ಭಕ್ತಿ ಸಂಗೀತ ಕಾರ್ಯಕ್ರಮ, ಹುಲಿಗಿಯ ಭೂಮಿಕ ಕಲಾಸಂಘದಿಂದ ನಾಟಕ ಪ್ರದರ್ಶನ ನಡೆಯಲಿದೆ. ಅ. 20ರಂದು ವಿಜಯದಶಮಿ ಪ್ರಯುಕ್ತ ಮಧ್ಯಾಹ್ನ 2.55ರಿಂದ ಶ್ರೀದೇವಿಯವರ ದಶಮಿ ದಿಂಡಿನ ಉತ್ಸವ ಮೂರ್ತಿ ದೇವಸ್ಥಾನದಿಂದ ಭವ್ಯ ಮೆರವಣಿಗೆಯಲ್ಲಿ ಶಿವಪುರ ರಸ್ತೆಯಲ್ಲಿರುವ ಶಮಿ ವೃಕ್ಷಕ್ಕೆ ತೆರಳಿ, ಶಮಿ ವೃಕ್ಷಕ್ಕೆ ಪೂಜೆ ಸಲ್ಲಿಸಲಾಗುವುದು. ಆನಂತರ ದೇವಸ್ಥಾನದಲ್ಲಿ ತೊಟ್ಟಿಲು ಸೇವೆ, ಮಹಾಮಂಗಳಾರತಿ, ಮಂತ್ರಪುಷ್ಪಗಳೊಂದಿಗೆ ದಸರಾ ಮಹೋತ್ಸವದ ಕಾರ್ಯಕ್ರಮಗಳ ಮುಕ್ತಾಯವಾಗುವುದು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬು ಬೆಳೆಗಾರರಿಗೆ ಎಸ್‌ಎಪಿ ನಿಗದಿಪಡಿಸುವಂತೆ ಆಗ್ರಹ
ಜಿಪಂ-ತಾಪಂ ಚುನಾವಣೆ ಮೀಸಲಾತಿ ಪ್ರಕಟ, ಆಕಾಂಕ್ಷಿಗಳಲ್ಲಿ ಹುರುಪು