ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ದೇವರದಾಸಿಮಯ್ಯನವರ ಬರೆದ ವಚನಗಳು ಹಾಗೂ ಅವರ ಆದರ್ಶ ಬದುಕು ಮನುಕುಲಕ್ಕೆ ದಾರಿದೀಪವಾಗಿವೆ ಎಂದು ಮೈಂದರಗಿ ಗುರು ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದೇವರು ನುಡಿದರು.ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ನಡೆದ ದೇವರ ದಾಸಿಮಯ್ಯನವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ದೇವರ ದಾಸಿಮಯ್ಯನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ದೇವರ ದಾಸಿಮಯ್ಯನವರು ತಮ್ಮ ವಚನಗಳ ಸಾಹಿತಿಕ ಗುಣ ಹಾಗೂ ಮೌಲ್ಯಗಳಿಂದ ಬಸವ ಪೂರ್ವದ ಶ್ರೇಷ್ಠ ವಚನಕಾರರಾಗಿದ್ದು, ಹೊಸ ಸಾಹಿತ್ಯ ಪ್ರಕಾರಕ್ಕೆ ಹೊಸ ಆಯಾಮಗಳನ್ನು ತೋರಿಸಿದ್ದಾರೆ ಎಂದರು.ಬ್ರಹ್ಮ ವಿದ್ಯಾಶ್ರಮ ಸಿದ್ದರೂಢ ಮಠದ ಸಹಜಾನಂದ ಸ್ವಾಮೀಜಿ ಮಾತನಾಡಿ, ದೇವರ ದಾಸಿಮಯ್ಯನವರು ಜಗತ್ತಿನ ಪ್ರಥಮ ವಚನಕಾರವೆಂದು ಗುರುತಿಸಲ್ಪಟ್ಟಿದ್ದು, ನೇಕಾರ ಸಮುದಾಯದ ಸೂರ್ಯನಿದ್ದಂತೆ. ಅವರ ಬೆಳಕು ಸಮುದಾಯದ ಮೇಲೆ ನಿರಂತರ ಬೀಳುತ್ತಿರಬೇಕು ಎಂದರು.ಮರೆಗುದ್ದಿಯ ಡಾ.ನಿರುಪಾಧಿಶ್ವರ ಮಹಾಸ್ವಾಮಿಗಳು ಮೂರ್ತಿಗೆ ಪ್ರಾಣ ಪ್ರತಿಷ್ಠಾನ ನೆರವೇರಿಸಿ ಮಾತನಾಡಿ, ದಾಸಿಮಯ್ಯನವರ ಭಾಷೆಯಲ್ಲಿ ಸರಳತೆ ಕಂಡುಬಂದರೂ ಭಾವದಲ್ಲಿ ಶ್ರೀಮಂತಿಕೆ ಎದ್ದು ಕಾಣುತ್ತದೆ ಎಂದು ಬಣ್ಣಿಸಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಯಲ್ಲಣ್ಣಗೌಡ ಪಾಟೀಲ, ಸಜ್ಜನಸಾಬ ಪೆಂಡಾರಿ, ನಾರಾಯಣ ಕಿರಗಿ, ಶ್ರೀಶೈಲಪ್ಪ ಬಾಡನವರ, ಮಲ್ಲಪ್ಪ ಭಾವಿಕಟ್ಟಿ, ಡಾ.ಬಿ.ಡಿ.ಸೋರಗಾಂವಿ, ಬಿ.ವಿ.ಕೆರೂರ, ಹಣಮಂತ ಬಡಿಗೇರ, ರಾಜು ಚಮಕೇರಿ, ಶಿವಲಿಂಗ ಟಿರ್ಕಿ, ಮಹಾಲಿಂಗ ದಡೂತಿ, ರಾಜೇಶ ಭಾವಿಕಟ್ಟಿ, ಬಿ.ಸಿ.ಪೂಜಾರಿ, ಮಲ್ಲಪ್ಪ ಸೋರಗಾಂವಿ, ಶಂಕೆರೆಪ್ಪ ಹಣಗಂಡಿ, ಶ್ರೀಶೈಲ ಬಾಳಿಗಿಡದ, ಚಂದ್ರು ಕಾಗಿ, ಶ್ರೀಶೈಲ ಕಿರಗಟಗಿ, ಪ್ರಭು ಬೆಳಗಲಿ, ಮಹಾಲಿಂಗಪ್ಪ ದಡುತಿ, ಶಂಕರ ಹಿಕಡಿ, ಲಕ್ಕಪ್ಪ ಚಮಕೇರಿ, ಶಿವಾನಂದ ಕಿತ್ತೂರ, ಶಂಕರ ಯಾದವಾಡ, ಮಹಾದೇವ ಚೆಮಕೇರಿ, ಅಲ್ಲಪ್ಪ ಹುನ್ನೂರ, ಮಹಾಲಿಂಗ ಬುದ್ನಿ ಸೇರಿದಂತೆ ಹಲವರು ಇದ್ದರು. ಗುರುಪಾದ ಅಂಬಿ ನಿರೂಪಿಸಿ, ವಂದಿಸಿದರು.
ನಿರ್ಮಲ ಮನಸಿನಿಂದ ದೇವಿ ಪೂಜಿಸಿ: ಅನ್ನದಾನಿ ಮಹಾಸ್ವಾಮಿಗಳುಮಹಾಲಿಂಗಪುರ: ದುಷ್ಟರನ್ನು ಶಿಕ್ಷಸಿ ಶಿಷ್ಟರನ್ನು ರಕ್ಷಿಸಲು ದೇವಿ ಒಂಬತ್ತು ಅವತಾರ ತಾಳಿ ತನ್ನ ಭಕ್ತರನ್ನು ರಕ್ಷಿಸುತ್ತಾಳೆ. ಯಾರು ನಿರ್ಮಲ ಮನಸಿನಿಂದ ಪೂಜಿಸಿ ಭಕ್ತಿಯಿಂದ ದೇವಿಯ ಪುರಾಣ ಕೇಳುತ್ತಾರೋ ಅವರಿಗೆ ದೇವಿ ಸಕಲ ಸೌಭಾಗ್ಯ ಕೊಟ್ಟು ಕಾಪಾಡುತ್ತಾಳೆ ಎಂದು ಬೆಂಗಳೂರಿನ ಅನ್ನದಾನಿ ಮಹಾಸ್ವಾಮಿಗಳು ನುಡಿದರು.ಸ್ಥಳೀಯ ಬನಶಂಕರಿ ದೇವಸ್ಥಾನದಲ್ಲಿ ಬನಶಂಕರಿದೇವಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸಾಂಸ್ಕೃತಿಕ ಉತ್ಸವ ಸಂಘದ ಆಶ್ರಯದಲ್ಲಿ ಶ್ರೀದೇವಿ ಪುರಾಣ ಮತ್ತು ದಸರಾ ಸಾಂಸ್ಕೃತಿಕ ನವರಾತ್ರಿ ಉತ್ಸವದಲ್ಲಿ ಮುಖ್ಯ ಪ್ರವಚನಕಾರರಾಗಿ ಭಾಗವಹಿಸಿ ಮೊದಲ ದಿನದ ದೇವಿ ಪುರಾಣದಲ್ಲಿ ನವದುರ್ಗಿಯ ಮೊದಲ ಅವತಾರ ಕುರಿತು ಪ್ರವಚನದಲ್ಲಿ ಮಾತನಾಡಿ, ಯಾರು ದೇವಿ ಗ್ರಂಥವನ್ನು ಪೂಜಿಸಿ ಓದುತ್ತಾರೆ ಅವರಿಗೆ ಈ ಗ್ರಂಥವು ಕಾಮದೇನು ಕಲ್ಪವೃಕ್ಷ, ಸಕಲವನ್ನು ಕರುಣಿಸುವ ಚಿಂತಾಮಣಿ ಎಂದರು.
ಶಿರೋಳದ ಹಣಮಂತ ಅಂಕದ ತಬಲಾ ವಾದ್ಯ ನುಡಿಸಿದರು. ಇಟ್ನಾಳದ ಶ್ರೀಕಾಂತ ನಾಯಿಕ ಹಾರ್ಮೋನಿಯಂ ಸಾಥ್ ನೀಡಿದರು.
ಈ ಸಂಧರ್ಭದಲ್ಲಿ ಸೊಲ್ಲಾಪುರ ಮೈಂದರಗಿಯ ಗುರು ಹಿರೇಮಠದ ಅಭಿನವ ರೇವಣಸಿದ್ಧ ಪಟ್ಟದದೇವರು, ಸಿದ್ದಾರೂಢ ಬ್ರಹ್ಮ ಆಶ್ರಮದ ಸಹಜಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿ ಮಾತನಾಡಿದರು.ದಾಸಿಮಯ್ಯನವರ, ಚಾಮುಂಡೇಶ್ವರಿ ದೇವಿ ಮೂರ್ತಿಗಳ ಭವ್ಯ ಮೆರವಣಿಗೆಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಗಲಕೋಟೆ ಸಹಕಾರದೊಂದಿಗೆ ಆದ್ಯ ವಚನಕಾರ ವಚನಬ್ರಹ್ಮ ದೇವರ ದಾಸಿಮಯ್ಯನವರ ನೂತನ ಮೂರ್ತಿ ಹಾಗೂ ಚಾಮುಂಡೇಶ್ವರಿ ದೇವಿಯ ಮೂರ್ತಿಗಳನ್ನು ಬ್ರಹ್ಮ ವಿದ್ಯಾಶ್ರಮ ಸಿದ್ದಾರೂಢ ಮಠದಿಂದ ಎರಡು ಮೂರ್ತಿಗಳನ್ನು ಸಕಲ ಮಂಗಲ ವಾದ್ಯಗಳೊಂದಿಗೆ ಸುಮಾರು 500 ಮುತ್ತೈದೆಯರು ಕುಂಭಮೇಳ ಮತ್ತು ನೂರಾರು ಮುತ್ತೈದೆಯರ ಆರತಿಯೊಂದಿಗೆ ಸಾಗಿದ ಮೆರವಣಿಗೆ ಚನ್ನಮ್ಮ ಸರ್ಕಲ್, ಗಾಂಧಿ ವೃತ್ತ, ಜವಳಿ ಬಜಾರ, ನಡುಚೌಕಿ, ಮಹಾಲಿಂಗೇಶ್ವರ ದೇವಸ್ಥಾನ ಮಾರ್ಗವಾಗಿ ತಂದು ಬೆಳಗ್ಗೆ 11.30ಕ್ಕೆ ದಾಸಿಮಯ್ಯನವರ ಮೂರ್ತಿ ನೂತನ ಮಂದಿರದಲ್ಲಿ ಮತ್ತು ದೇವಿ ಮೂರ್ತಿಯನ್ನು ಮುಖ್ಯ ಮಂಟಪದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಸಂಜೆ ನಡೆದ ದೇವಿಪುರಾಣ ಕಾರ್ಯಕ್ರಮವನ್ನು ನಗರದ ಹಾಲಮತ ಸಮುದಾಯದವರು ಹಾಗೂ ಜಂಗಮ ಸಮುದಾಯದವರು, ಆದಿ ಬಣಜಿಗ ಸಮುದಾಯದವರು ಮತ್ತು ರಡ್ಡಿ ಸಮಾಜದ ಮುಖಂಡರು ದೇವಿಗೆ ಮತ್ತು ವೇದಿಕೆಯ ಮೇಲೆ ಉಪಸ್ಥಿತರಿದ್ದ ಎಲ್ಲ ಸ್ವಾಮೀಜಿಗಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ದೇವಿ ಪುರಾಣ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಈ ಸಂಧರ್ಭದಲ್ಲಿ ಮುಖಂಡರಾದ ಮಹಾಂತೇಶ ಹಿಟ್ಟಿನಮಠ, ಮಹಾಲಿಂಗಪ್ಪ ಜಕ್ಕಣ್ಣವರ, ಸತ್ಯಪ್ಪ ಹುದ್ದಾರ, ಈರಪ್ಪ ಜಕ್ಕಣ್ಣವರ, ಪರಸಪ್ಪ ಕೊಣ್ಣೂರ, ಚನ್ನಪ್ಪ ಬ.ಪಟ್ಟಣಶೆಟ್ಟಿ, ವೆಂಕಣ್ಣ ಸಂಶಿ, ಚನ್ನಯ್ಯ ಚಟ್ಟಿಮಠ, ಬಿ.ವಿ.ಕೆರೂರ, ಅಶೋಕ ಅಂಗಡಿ, ಸಾಗರ ಮಠದ, ಜೊತೆಪ್ಪ ಕಪರಟ್ಟಿ, ಮಲ್ಲಪ್ಪ ಭಾವಿಕಟ್ಟಿ, ಲಕ್ಕಪ್ಪ ಚಮಕೇರಿ, ಚನ್ನಪ್ಪ ರಾಮೋಜಿ, ಚನ್ನಪ್ಪ ಹುನ್ನೂರ, ಶ್ರೀಶೈಲ ನುಚ್ಚಿ, ಶ್ರೀಶೈಲ ಕಿರಗಟಗಿ, ಕರೆಪ್ಪ ಮೇಟಿ, ಸುಭಾಸ ಭಾವಿಕಟ್ಟಿ, ಮಾನಿಂಗ ನುಚ್ಚಿ, ಶಂಕರ ಅಂಬಿ, ನಾರಾಯಣ ಕಿರಗಿ, ಡಾ.ಬಿ.ಡಿ.ಸೋರಗಾಂವಿ, ಸಿದ್ದಗಿರೆಪ್ಪ ಕಾಗಿ, ಪ್ರಭು ಬೆಳಗಲಿ, ಜಿ.ಎಸ್.ಗೊಂಬಿ, ರಾಜೇಶ ಭಾವಿಕಟ್ಟಿ, ಸುನಿಲ್ ಜಮಖಂಡಿ, ಕುಮಾರ ಮಣ್ಣಯ್ಯನವರಮಠ, ರಮೇಶ ಭಾವಿಕಟ್ಟಿ, ಮಹೇಶ ಇಟಕನ್ನವರ, ಲಕ್ಷ್ಮಣ ಕಿಶೋರ, ರಾಮಣ್ಣ ಬಂಡಿ, ಕಲ್ಲಪ್ಪ ಚಿಂಚಲಿ, ಎಸ್.ಕೆ.ಗಿಂಡೆ, ಸಿದ್ದು ದಡುತಿ, ಶಿವಾನಂದ ಕಿತ್ತೂರ, ಈಶ್ವರ ವಂದಾಲ, ಶ್ರೀಶೈಲ ಬಾಡನವರ ಸೇರಿದಂತೆ ಹಲವರು ಭಾಗವಹಿಸಿದರು. ಬಿ.ಸಿ.ಪೂಜಾರಿ ನಿರೂಪಿಸಿದರು. ಕೊನೆಯಲ್ಲಿ ಗುರುಪಾದ ಅಂಬಿ ವಂದಿಸಿದರು. ಸ್ಥಳೀಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ರಾಧಾ ಕೃಷ್ಣ ಶಾಲೆ, ಬಸವಾನಂದ ಶಾಲೆ, ಸಿ.ಕೆ.ಚಿಂಚಲಿ ಶಾಲೆ ಹಾಗೂ ಜೆ.ಸಿ.ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರ ಮನ ಸುರೆಗೊಂಡಿತು. ಇಂದಿನ ಮಹಾ ಪ್ರಸಾದವನ್ನು ಮಹಾಲಿಂಗಪ್ಪ ಬೀಳಗಿ ಮತ್ತು ಸಂಜು ಶಿರೋಳ ಬಂಧುಗಳು ಮಾಡಿಸಿದ್ದರು.