ಅಡಕೆ, ಭದ್ರಾ ನೀರು ರೈತರಿಗಾಗಿ ದಾವಣಗೆರೆ ಬಂದ್‌ ಇಂದು

KannadaprabhaNewsNetwork |  
Published : Sep 01, 2026, 01:45 AM IST
31ಕೆಡಿವಿಜಿ20, 21-ದಾವಣಗೆರೆಯಲ್ಲಿ ಸೆ.1ರಂದು ದಾವಣಗೆರೆ ಬಂದ್ ಹಿನ್ನೆಲೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಸೋಮವಾರ ಬೈಕ್ ರ್ಯಾಲಿ ನಡೆಸಿ, ಬಂದ್‌ಗೆ ಸಹಕರಿಸುವಂತೆ ಜನತೆಗೆ ಮನವಿ ಮಾಡುತ್ತಿರುವುದು. | Kannada Prabha

ಸಾರಾಂಶ

ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದು ಹಾಗೂ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ ವಿರೋಧಿಸಿ ಸೆ.1ರಂದು ಕರೆ ನೀಡಿರುವ ದಾವಣಗೆರೆ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಬೈಕ್ ರ್ಯಾಲಿ ನಡೆಸಿ, ಬಂದ್‌ಗೆ ಕೈ ಜೋಡಿಸುವಂತೆ ಜನತೆಗೆ ಮನವಿ ಮಾಡಲಾಯಿತು.

- ಎಲ್ಲರೂ ಸಹಕರಿಸಲು ಮಾಜಿ ಸಚಿವ ರೇಣುಕಾಚಾರ್ಯ ನೇತೃತ್ವದ ಬೈಕ್ ರ್ಯಾಲಿ

- - -

ದಾವಣಗೆರೆ: ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸುವುದು ಹಾಗೂ ಗುಟ್ಕಾ ಮತ್ತು ಪಾನ್ ಮಸಾಲ ನಿಷೇಧ ವಿರೋಧಿಸಿ ಸೆ.1ರಂದು ಕರೆ ನೀಡಿರುವ ದಾವಣಗೆರೆ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸೋಮವಾರ ಬೈಕ್ ರ್ಯಾಲಿ ನಡೆಸಿ, ಬಂದ್‌ಗೆ ಕೈ ಜೋಡಿಸುವಂತೆ ಜನತೆಗೆ ಮನವಿ ಮಾಡಲಾಯಿತು.

ನಗರದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಬಾಬಾ ಸಾಹೇಬ್‌ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಜಿಲ್ಲಾ ಕೇಂದ್ರದ ಪ್ರಮುಖ ವೃತ್ತ, ರಸ್ತೆಗಳು, ಮಾರುಕಟ್ಟೆ ಪ್ರದೇಶದಲ್ಲಿ ಸಂಚರಿಸಿ ರೈತಪರ, ಜನಪರ ಬಂದ್‌ಗೆ ವ್ಯಾಪಾರಸ್ಥರು, ಸಂಘ-ಸಂಸ್ಥೆಗಳು, ಶಾಲಾ-ಕಾಲೇಜು ಆಡಳಿತ ಮಂಡಳಿಗಳು ಸ್ವಯಂಪ್ರೇರಣೆಯಿಂದ ಸ್ಪಂದಿಸಿ, ಹೋರಾಟ ಯಶಸ್ವಿಗೊಳಿಸುವಂತೆ ಕೋರಲಾಯಿತು.

ಎಂ.ಪಿ.ರೇಣುಕಾಚಾರ್ಯ ಈ ಸಂದರ್ಭ ಮಾತನಾಡಿ, ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ ರಾತ್ರೋರಾತ್ರಿ 3 ಟಿಎಂಸಿ ನೀರು ಹರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಪಾಲಿಗೆ ಮರಣ ಶಾಸನವಾಗಿದೆ. ಇದು ಬರೀ ಅಚ್ಚುಕಟ್ಟು ರೈತರಿಗಷ್ಟೇ ಅಲ್ಲ, ಭದ್ರಾ ಡ್ಯಾಂ ಅವಲಂಬಿತ ದಾವಣಗೆರೆ ನಗರ, ಜಿಲ್ಲೆಯ ಊರುಗಳ ಜನರ ಪಾಲಿಗೂ ಸಂಕಷ್ಟ ತಂದೊಡ್ಡುವ ಆದೇಶವಾಗಿದೆ. ಗುಟ್ಕಾ, ಪಾನ್ ಮಸಾಲಾ ನಿಷೇಧಿಸುವ ಮೂಲಕ ಅಡಕೆ ಬೆಳೆಗಾರರ ಅನ್ನಕ್ಕೂ ಕಲ್ಲು ಹಾಕುವ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ತಕ್ಷಣವೇ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ 3 ಟಿಎಂಸಿ ನೀರು ಹರಿಸುವ ಆದೇಶವನ್ನು ಹಿಂಪಡೆಯಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಮೆಳ್ಳೆಕಟ್ಟೆ ಎ.ಇ.ನಾಗರಾಜ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾ ಅಡಕೆ ಬೆಳೆಗಾರರ ಒಕ್ಕೂಟ ಹಾಗೂ ಬಿಜೆಪಿ ಮುಖಂಡರಾದ ಲೋಕಿಕೆರೆ ನಾಗರಾಜ, ಬಿ.ಎಸ್. ಜಗದೀಶ, ಚಂದ್ರಶೇಖರ ಪೂಜಾರ, ಬಿ.ಜಿ. ಅಜಯಕುಮಾರ, ಆರ್.ಲಕ್ಷ್ಮಣ, ಧನಂಜಯ ಕಡ್ಲೇಬಾಳು, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ತಾರೇಶ ನಾಯ್ಕ, ಸಂತೋಷ ಪೈಲ್ವಾನ್, ಶಾಮನೂರು ಹರೀಶ ಇತರರು ಇದ್ದರು.

- - -

(ಟಾಪ್ ಕೋಟ್‌) ಭದ್ರಾ ಮೇಲ್ದಂಡೆ ಯೋಜನೆಗೆ ನೀರು ಹರಿಸಲು ನಮ್ಮ ಅಭ್ಯಂತರವಿಲ್ಲ. ಮೊದಲು ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.41 ಟಿಎಂಸಿ ನೀರು ತುಂಬಿಸಿ, ಆ ನಂತರ ಭದ್ರಾ ಮೇಲ್ದಂಡೆಗೆ ನೀರನ್ನು ಒಯ್ಯಲಿ. ತರೀಕೆರೆ ತಾ. ಮುತ್ತಿನಕೊಪ್ಪದ ಬಳಿ ಬಾಕಿ ಇರುವ ಕಾಮಗಾರಿಗೆ ಅಗತ್ಯವಾದ ₹30 ಕೋಟಿಯನ್ನು ತುರ್ತಾಗಿ ಬಿಡುಗಡೆ ಮಾಡಿ, ತುಂಗಾದಿಂದ ಭದ್ರಾಗೆ ನೀರು ಹರಿಸುವ ಕಾಮಗಾರಿ ಪೂರ್ಣಗೊಳಿಸಲಿ.

- ಎಂ.ಪಿ.ರೇಣುಕಾಚಾರ್ಯ, ಮಾಜಿ ಸಚಿವ.

- - -

-31ಕೆಡಿವಿಜಿ20, 21:

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆಗಳು ಜೀವನ ಮೌಲ್ಯಗಳನ್ನು ಕಲಿಸುವ ಪಾಠಶಾಲೆ
ಅಣ್ಣಾಭಾವು ಸಾಠೆ ಸಾಹಿತ್ಯವು ಸಾಮಾಜಿಕ ನ್ಯಾಯದ ಹಾದಿ: ಸೂರ್ಯಕಾಂತ