ಕಡಿಮೆಯಾಗಲಿದೆ ಬೆಂಗಳೂರು - ದಾವಣರೆ ಮಧ್ಯೆ ಅಂತರ : ಎರಡೂ ಗಂಟೆ ಪ್ರಯಾಣ ಸಮಯ ಉಳಿತಾಯ

Published : Feb 27, 2026, 08:35 AM IST
Railway Track

ಸಾರಾಂಶ

ರೈಲ್ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ₹58,000 ಕೋಟಿ ನೀಡಿದ್ದು, ಬೆಂಗಳೂರು- ತುಮಕೂರು- ಚಿತ್ರದುರ್ಗ-ದಾವಣಗೆರೆ, ದಾವಣಗೆರೆ- ರಾಯದುರ್ಗ, ರಾಯದುರ್ಗ- ತುಮಕೂರು, ತಾಳಗುಪ್ಪ ರೈಲ್ವೆ ಮಾರ್ಗಗಗಳ ಅಭಿವೃದ್ದಿಗೆ ₹7800 ಕೋಟಿ ನೀಡಿರುವುದಾಗಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು

 ದಾವಣಗೆರೆ :  ರೈಲ್ವೇ ಯೋಜನೆಗಳಿಗೆ ಕೇಂದ್ರ ಸರ್ಕಾರ ₹58,000 ಕೋಟಿ ನೀಡಿದ್ದು, ಬೆಂಗಳೂರು- ತುಮಕೂರು- ಚಿತ್ರದುರ್ಗ-ದಾವಣಗೆರೆ, ದಾವಣಗೆರೆ- ರಾಯದುರ್ಗ, ರಾಯದುರ್ಗ- ತುಮಕೂರು, ತಾಳಗುಪ್ಪ ರೈಲ್ವೆ ಮಾರ್ಗಗಗಳ ಅಭಿವೃದ್ದಿಗೆ ₹7800 ಕೋಟಿ ನೀಡಿರುವುದಾಗಿ ಕೇಂದ್ರ ರೈಲ್ವೇ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದರು.

ದಾವಣಗೆರೆ-ತೋಣಹುಣಸೆ-ಆನಗೋಡು ರೈಲ್ವೇ ಮಾರ್ಗ ಪರಿಶೀಲಿಸಿದ ವಿ.ಸೋಮಣ್ಣ

ತಾಲೂಕಿನ ತೋಳಹುಣಸೆ, ಅನಗೋಡು ಗ್ರಾಮಗಳಲ್ಲಿ ಗುರುವಾರ ದಾವಣಗೆರೆ-ತೋಣಹುಣಸೆ-ಆನಗೋಡು ರೈಲ್ವೇ ಮಾರ್ಗ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಮಕೂರು- ಚಿತ್ರದುರ್ಗ- ದಾವಣಗೆರೆ ನೇರ ರೈಲ್ವೆ ಮಾರ್ಗ, ಬೆಂಗಳೂರು- ತುಮಕೂರು ಮಾರ್ಗ, ರಾಯದುರ್ಗ- ತುಮಕೂರು ಮಾರ್ಗ, ತಾಳಗುಪ್ಪ ರೈಲ್ವೆ ಮಾರ್ಗಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದೇವೆ. ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲ್ವೇ ಮಾರ್ಗದಲ್ಲಿ 2 ಸಾವಿರ ಎಕರೆಗೂ ಅಧಿಕ ಜಾಗದಲ್ಲಿ 246 ಎಕರೆ ಹೊರತುಪಡಿಸಿದರೆ, ಉಳಿದಿದ್ದು ಸಮಸ್ಯೆ ಇಲ್ಲ ಎಂದರು.

2-3 ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸುತ್ತೇವೆ

211 ಎಕರೆ ಒಂದೇ ಕಡೆ ಇದ್ದು, 11 ಎಕರೆ ಚಿತ್ರದುರ್ಗದಲ್ಲಿ, ಉಳಿದ ಜಾಗ ಬೇರೆ ಬೇರೆ ಕಡೆ ಇದೆ. ಇನ್ನು 2-3 ತಿಂಗಳಲ್ಲೇ ಎಲ್ಲಾ ಪ್ರಕ್ರಿಯೆ ಮುಗಿಸುತ್ತೇವೆ ಎಂದು ಅವರು ಹೇಳಿದರು.

ಕಳೆದ 3 ದಿನದ ರಾಜ್ಯದ ಹಳೆ ರೈಲ್ವೇ ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇನೆ. ದಾವಣಗೆರೆ-ಚಿತ್ರದುರ್ಗ-ತುಮಕೂರು ಒಂದೇ ನಾಣ್ಯದ ಮುಖಗಳಾಗಿದ್ದು, ಎಲ್ಲವೂ ಅಭಿವೃದ್ಧಿಯಾಗಬೇಕು.

 ನೇರ ಮಾರ್ಗದಿಂದ ಜನರ ಅಮೂಲ್ಯವಾದ ಎರಡೂ ಗಂಟೆ ಉಳಿತಾಯವಾಗುತ್ತದೆ. ಬೆಂಗಳೂರು-ದಾವಣರೆ ಮಧ್ಯೆ ಅಂತರ ಕಡಿಮೆಯಾಗುತ್ತದೆ. ಉತ್ತರ ಕರ್ನಾಟಕ-ಬೆಂಗಳೂರು ಮಧ್ಯೆ ಇರುವ ಅಂತರ ಸಹ ಕಡಿಮೆಯಾದಂತಾಗುತ್ತದೆ. ದಾವಣಗೆರೆಯಿಂದ ಪರಿಶೀಲನೆ ನಡೆಸಿದ್ದೇವೆ. ಚಿತ್ರದುರ್ಗ, ಶಿರಾದಲ್ಲಿ ಇವತ್ತೇ ಸಭೆ ಮಾಡುತ್ತಿದ್ದೇನೆ ಎಂದು ಅ‍ವರು ತಿಳಿಸಿದರು.

PREV
Get the latest news and reports from Davanagere (ದಾವಣಗೆರೆ ಸುದ್ದಿ) — covering district-wide developments, civic issues, local governance, agriculture and industry, education, events, culture, crime, tourism, and community stories of Davanagere on Kannada Prabha.
Read more Articles on

Recommended Stories

ದಾವಣಗೆರೆ ಗಾಜಿನ ಮನೆ ಫಲಪುಷ್ಪ ಪ್ರದರ್ಶನದಲ್ಲಿ ‘ಸಿರಿಧಾನ್ಯ ಹಬ್ಬ’
ಜಿಲ್ಲೆಯ ರೈಲ್ವೆ, ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ವಿ,ಸೋಮಣ್ಣ