;Resize=(412,232))
ದಾವಣಗೆರೆ : ಮಹಾಶಿವರಾತ್ರಿ ಮಾರನೇ ದಿನ ಸೋಮವಾರ ರಾಮಲಿಂಗೇಶ್ವರರ 50ನೇ ವರ್ಷದ ಮುಳ್ಳುಗದ್ದುಗೆ ಉತ್ಸವದ ಐತಿಹಾಸಿಕ ಜಾತ್ರೆ ಶ್ರದ್ಧಾಭಕ್ತಿಯಿಂದ ನೆರವೇರಿತು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಕೆಂಗಾಪುರ ಗ್ರಾಮದಲ್ಲಿ ಪ್ರತಿ ವರ್ಷ ರಾಮಲಿಂಗೇಶ್ವರ ಮಠದ ರಾಮಲಿಂಗೇಶ್ವರ ಸ್ವಾಮೀಜಿ ಅವರು ಮುಳ್ಳುಗದ್ದುಗೆ ಪಲ್ಲಕ್ಕಿ ಮೇಲೆ ಕುಳಿತು, ವಿಭಿನ್ನವಾಗಿ ನರ್ತಿಸುತ್ತಾರೆ. ಸ್ವಾಮೀಜಿ ಸಲ್ಲಿಸುವ ಇಂತಹ ಮೈನವಿರೇಳಿಸುವ ಭಕ್ತಿಯ ಪರಾಕಾಷ್ಠೆಯಿಂದಲೇ ಜನಮಾನಸದಲ್ಲಿ ಕೆಂಗಾಪುರ ಜಾತ್ರೆ ಗಮನ ಸೆಳೆಯುತ್ತದೆ.
ಮುಳ್ಳುಗದ್ದುಗೆ ಮೇಲೆ ಆಸೀನರಾಗಿ ಕಾರ್ಣೀಕ ನುಡಿದ ರಾಮಲಿಂಗೇಶ್ವ ಸ್ವಾಮೀಜಿ, ‘ಕಾರ್ಮೋಡ ಕವಿದೀತು, ಅಂತರಂಗದ ಪಕ್ಷಿ ಹಾರೀತು, ಕೆರೆ ಕಟ್ಟೆಗಳು ತುಂಬಿ ಹರಿದಾವು ಪರಾಕ್’ ಎಂಬುದಾಗಿ ರಾಮಲಿಂಗೇಶ್ವ ಸ್ವಾಮೀಜಿ 2026ನೇ ಸಾಲಿನ ಮುಳ್ಳುಗದ್ದುಗೆ ಉತ್ಸವದ ಶುಭ, ಸಮೃದ್ಧಿ ಜೊತೆಗೆ ಜನರನ್ನು ಎಚ್ಚರಿಸುವ ಕಾರ್ಣಿಕ ನುಡಿದರು.
ಈ ಸಲ ಉತ್ತಮ ಮಳೆಯಾಗಿ, ಕೆರೆ-ಕಟ್ಟೆ ತುಂಬಿ ತುಳುಕುತ್ತವೆ. ಉತ್ತಮ ಬೆಳೆಯೂ ಬರಲಿದೆ. ಜನರಿಗೆ ಪ್ರಯಾಣದಲ್ಲಿ ಸಾಕಷ್ಟು ದುರಂತ ಸಂಭವಿಸಿ, ಸಾವು-ನೋವು ಸಂಭವಿಸುವ ಸಾಧ್ಯತೆಯೂ ಇದೆ. ಪ್ರಯಾಣದಲ್ಲಿ ನಿಧಾನ ಸೂಕ್ತ, ಎಲ್ಲರಿಗೂ ಇದು ಅನ್ವಯ ಎಂದು ಕಾರ್ಣಿಕ ನುಡಿ ವಿಶ್ಲೇಷಿಸಿದರು.