ಶ್ರೀ ಸೇವಾಲಾಲ್, ಮರಿಯಮ್ಮ ದೇಗುಲ ಉದ್ಘಾಟನೆಇಲ್ಲಿಗೆ ಸಮೀಪದ ಯಲವಟ್ಟಿ ಗ್ರಾಮದಲ್ಲಿ ೫೦ ವರ್ಷದ ಹಳೆಯ ಶ್ರೀ ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯವನ್ನು ಪುನರ್ ನಿರ್ಮಾಣ ಮಾಡಲಾಗಿದೆ. ಏ.೨೯ರಿಂದ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿ ದೇವಸ್ಥಾನ ಲೋಕಾರ್ಪಣೆ, ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ಕಳಸಾರೋಹಣ ಕಾರ್ಯಕ್ರಮಗಳು ನಡೆಯಲಿವೆ ಎಂದು ಸೇವಾಲಾಲ್ ಮತ್ತು ಮರಿಯಮ್ಮ ದೇವಾಲಯ ಸಮಿತಿ ಗೌರವಾಧ್ಯಕ್ಷ ಅನಂತ್ ನಾಯ್ಕ್ ಹೇಳಿದ್ದಾರೆ.