ದಾವಣಗೆರೆ: ತಾಲೂಕು 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲು ತಾಲೂಕಿನ ಹೆಬ್ಬಾಳಿನ ಶ್ರೀಮಠದಲ್ಲಿ ಶ್ರೀ ಮಹಂತರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿತ್ತು.
ಸಭೆಯಲ್ಲಿ ಪೂಜ್ಯರೊಂದಿಗೆ ಚರ್ಚಿಸಿ ಇದೇ ಫೆ.27ರಂದು ನಡೆಸಲು ದಿನಾಂಕ ನಿಗದಿ ಮಾಡಿ ಮಠದ ವಿಶಾಲವಾದ ಕಲ್ಯಾಣ ಮಂಟಪದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಜಿಲ್ಲಾ ಕಸಾಪ ಸಂಘಟನಾ ಕಾರ್ಯದರ್ಶಿ ಸಿ.ಜಿ.ಜಗದೀಶ್ ಕೂಲಂಬಿ ಸಮ್ಮೇಳನದ ಮಹತ್ವ ಹಾಗೂ ಒಂದು ದಿನದ ಸಮ್ಮೇಳನದ ಕಾರ್ಯಕ್ರಮಗಳ ರೂಪರೇಷೆಗಳನ್ನು, ಸಿದ್ಧತೆ ಕುರಿತು ಮತ್ತು ಖರ್ಚಿನ ಮಾಹಿತಿ ಸಭೆಯ ಗಮನಕ್ಕೆ ತಂದರು.
ಸಭೆಯಲ್ಲಿ ಕಸಾಪ ದಾವಣಗೆರೆ ತಾಲ್ಲೂಕು ಅಧ್ಯಕ್ಷೆ ಸುಮತಿ ಜಯಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ, ತಾಲ್ಲೂಕು ಕಾರ್ಯದರ್ಶಿ ದಾಗಿನಕಟ್ಟೆ ಪರಮೇಶಪ್ಪ, ಕೋಶಾಧ್ಯಕ್ಷ ಪಾಲಾಕ್ಷಪ್ಪ ಗೋಪಾನಾಳು, ನಿರ್ದೇಶಕರಾದ ಎಂ.ಷಡಕ್ಷರಪ್ಪ ಬೇತೂರು, ಸೌಭಾಗ್ಯಮ್ಮ, ಪಂಕಜಾ ಬಕ್ಕೇಶ್, ಶಿವಕುಮಾರ, ಹಾಗೂ ಹೆಬ್ಬಾಳ್ ಗ್ರಾಪಂ ಸದಸ್ಯರಾದ ಮಹಾರುದ್ರಯ್ಯ, ಬಸಮ್ಮ ಬಸವರಾಜಪ್ಪ, ಮಹಾಂತೇಶ, ನರೇಂದ್ರಬಾಬು, ರುದ್ರೇಶ್, ಮಹೇಂದ್ರ, ಟಿ.ಸಿ.ರುದ್ರೇಶ್, ಶಿವಕುಮಾರ, ಶಿಕ್ಷಕ ತಿಪ್ಪೇಸ್ವಾಮಿ, ಎಚ್.ಆರ್.ಮಂಜುನಾಥ, ಪಿಡಿಒ ಹಿಮಂತ್ ರಾಜ್ ಮತ್ತಿತರರಿದ್ದರು.