ಜ.5ರಂದು ದಾವಣಗೆರೆ ಖೋ ಖೋ ಪ್ರೀಮಿಯರ್ ಲೀಗ್

KannadaprabhaNewsNetwork |  
Published : Jan 03, 2025, 12:32 AM IST
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತೀರುವ ಚಿರರಂಜೀವಿ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಸಿ.ಹೆಚ್.ಶ್ರೀನಿವಾಸ್ | Kannada Prabha

ಸಾರಾಂಶ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜ.5ರಂದು ಪಟ್ಟಣದ ಚಿರಂಜೀವಿ ಕ್ರೀಡಾ ಸಂಸ್ಥೆ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ಜಿಲ್ಲಾ ಖೋ ಖೋ ಸಂಸ್ಥೆ ಆಶ್ರಯದಲ್ಲಿ ದಾವಣಗೆರೆ ಖೋ-ಖೋ ಪ್ರೀಮಿಯರ್ ಲೀಗ್ ನ ಹೊನಲು ಬೆಳಕಿನ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ 4 ತಂಡಗಳು ಭಾಗವಹಿಸಲಿವೆ ಎಂದು ಚಿರಂಜೀವಿ ಕ್ರೀಡಾ ಸಂಸ್ಥೆ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಚನ್ನಗಿರಿಯಲ್ಲಿ ಹೇಳಿದ್ದಾರೆ.

- ಚನ್ನಗಿರಿಯಲ್ಲಿ ಚಿರಂಜೀವಿ ಕ್ರೀಡಾ ಸಂಸ್ಥೆ ಮುಂದಾಳತ್ವದಲ್ಲಿ ಆಯೋಜನೆ: ಅಧ್ಯಕ್ಷ- - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜ.5ರಂದು ಪಟ್ಟಣದ ಚಿರಂಜೀವಿ ಕ್ರೀಡಾ ಸಂಸ್ಥೆ, ಕರ್ನಾಟಕ ರಾಜ್ಯ ಖೋ ಖೋ ಸಂಸ್ಥೆ, ಜಿಲ್ಲಾ ಖೋ ಖೋ ಸಂಸ್ಥೆ ಆಶ್ರಯದಲ್ಲಿ ದಾವಣಗೆರೆ ಖೋ-ಖೋ ಪ್ರೀಮಿಯರ್ ಲೀಗ್ ನ ಹೊನಲು ಬೆಳಕಿನ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ವಿವಿಧ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ 4 ತಂಡಗಳು ಭಾಗವಹಿಸಲಿವೆ ಎಂದು ಚಿರಂಜೀವಿ ಕ್ರೀಡಾ ಸಂಸ್ಥೆ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1980ರಲ್ಲಿ ಖೋ ಖೋ ಪರ್ವ ಪ್ರಾರಂಭವಾಗಿ ತಾಲೂಕಿನ ಆಸಕ್ತ ಕ್ರೀಡಾಭಿಮಾನಿಗಳು ಸೇರಿ ಚಿರಂಜೀವಿ ಕ್ರೀಡಾ ಸಂಸ್ಥೆ ಸ್ಥಾಪಿಸಲಾಗಿದೆ. ಅಂದಿನಿಂದ ಇಲ್ಲಿಯವರೆಗೆ ಖೋ ಖೋ ಕ್ರೀಡಾಕೂಟ ಮುನ್ನಡೆಸಿಕೊಂಡು ಬರಲಾಗುತ್ತಿದೆ ಎಂದರು.

ಸಂಸ್ಥೆಯಡಿ ಜಿಲ್ಲೆ, ವಿಭಾಗ, ರಾಜ್ಯಮಟ್ಟದ ಖೋ ಖೋ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತಿದೆ. ಇದರಿಂದ ರಾಜ್ಯ, ರಾಷ್ಟ್ರ, ಅಂತರ ರಾಷ್ಟ್ರೀಯ, ವಿದ್ಯಾಲಯ, ಅಂತರ ವಿಶ್ವವಿದ್ಯಾನಿಲಯಗಳ ಕ್ರೀಡಾಕೂಟಗಳಲ್ಲಿ ಪ್ರತಿನಿಧಿಸುವಂತಹ ಕ್ರೀಡಾಪಟುಗಳನ್ನು ತಯಾರು ಮಾಡಿ, ಸಮಾಜಕ್ಕೆ ಪ್ರತಿಭೆಗಳನ್ನು ಪರಿಚಯಿಸುವಲ್ಲಿ ಶ್ರಮಿಸುತ್ತಿದೆ ಎಂದರು.

ಜ.5ರಂದು ನಡೆಯುವ ಪಂದ್ಯಾವಳಿ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯವನ್ನು ಪಟ್ಟಣದ ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮೀಜಿ ವಹಿಸಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಚನ್ನಗಿರಿ ಕ್ಷೇತ್ರ ಶಾಸಕ ಬಸವರಾಜ ವಿ. ಶಿವಗಂಗಾ ನೆರವೇರಿಸುವರು. ಅಧ್ಯಕ್ಷತೆಯನ್ನು ಸಂಸ್ಥೆ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜ್ಯ ಖೋ ಖೋ ಸಂಸ್ಥೆ ಅಧ್ಯಕ್ಷ ಲೋಕೇಶ್ವರ, ಆರ್.ಮಲ್ಲಿಕಾರ್ಜುನಯ್ಯ, ಜಿ.ಎಸ್.ಡಿ. ಮೂರ್ತಿ, ಆರಕ್ಷಕ ವೃತ್ತ ನಿರೀಕ್ಷಕ ಬಾಲಚಂದ್ರ ನಾಯ್ಕ್, ತರಬೇತುದಾರ ಜೆ.ರಾಮಲಿಂಗಪ್ಪ, ಎಸ್.ಎ. ಸುಭಾನ್, ಕೆ.ಆರ್.ಗೋಪಿ, ಎಂ.ಯೋಗೀಶ್, ಎಂ.ಆರ್. ಶ್ರೀನಿವಾಸ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಸದಸ್ಯ ಸಿ.ಶಶಿಕುಮಾರ್, ಹಿರಿಯ ಕ್ರೀಡಾಪಟುಗಳಾದ ಎಂ.ಆರ್. ಶ್ರೀನಿವಾಸ್, ಜಿಯಾಉಲ್ಲಾ ಖಾನ್, ಇಮ್ರಾನ್ ಖಾನ್, ಕೆ.ಪಿ.ಎಂ. ಸ್ವಾಮಿ ಹಾಜರಿದ್ದರು.

- - - -2ಕೆಸಿಎನ್‌ಜಿ2.ಜೆಪಿಜಿ:

ಪತ್ರಿಕಾಗೋಷ್ಠಿಯಲ್ಲಿ ಚಿರಂಜೀವಿ ಕ್ರೀಡಾ ಸಂಸ್ಥೆ ಅಧ್ಯಕ್ಷ ಸಿ.ಎಚ್‌.ಶ್ರೀನಿವಾಸ್ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುದಾನಿತ ಪಿಯು ಕಾಲೇಜು ನಿವೃತ್ತರ ಗಳಿಕೆ ರಜೆಗೆ 30 ಕೋಟಿ ರು.
ಮೇಲ್ಮನೆಗೆ ಪತ್ರಕರ್ತರ ಕರೆತರಲು ಎಂಎಲ್‌ಸಿ ಆಫರ್‌!