ಭೀಮ ಕೋರೆಗಾಂವ್ ಯುದ್ಧವು ಒಂದು ಐತಿಹಾಸಿಕ ಹೋರಾಟವಾಗಿದ್ದು, ಕಡಿಮೆ ಸಂಖ್ಯೆಯ ತಳ ಸಮುದಾಯವು ತಮ್ಮ ಹಕ್ಕುಗಳಿಗಾಗಿ ದೊಡ್ಡ ಸಂಖ್ಯೆಯ ಬಲಿಷ್ಠ ಶಕ್ತಿಗಳ ವಿರುದ್ಧ ಹೋರಾಡಿ ಜಯ ಸಾಧಿಸಿದ ದಿನವೆಂದು ವಿವರಿಸಿದರು. ಇಂತಹ ಐತಿಹಾಸಿಕ ಹೋರಾಟದ ವಿಜಯವನ್ನು ಸ್ಮರಿಸುವ ಕಾರ್ಯಕ್ರಮಗಳು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು. ಈ ಮಹತ್ವದ ಕಾರ್ಯಕ್ರಮದ ಆಯೋಜನೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಹಾಸನ
ಜನವರಿ ೨೦ರಂದು ನಗರದಲ್ಲಿ ನಡೆಯುವ ಭೀಮ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ದಲಿತ ವಿಜಯೋತ್ಸವ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಳ್ಳಲಾಗಿದ್ದ ಬೈಕ್ ರ್ಯಾಲಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಬುಧವಾರ ನೀಲಿ ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.ಇದೇ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಜ.೨೦ರಂದು ಹಾಸನ ನಗರದಲ್ಲಿ ನಡೆಯಲಿರುವ ಭೀಮ ಕೋರೆಗಾಂವ್ ವಿಜಯೋತ್ಸವದ ಅಂಗವಾಗಿ ದಲಿತ ವಿಜಯೋತ್ಸವ ಸಮಿತಿ ವತಿಯಿಂದ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿತ್ತು. ಈ ರ್ಯಾಲಿಗೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರು ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಕೃತವಾಗಿ ಚಾಲನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಗೊಂಡ ಜನವರಿ ೨೦ರ ಮಂಗಳವಾರದಂದು ನಗರದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ಸಮಿತಿ ಮುಂದಾಗಿರುವುದು ಸಂತಸದ ವಿಚಾರ. ಇದೇ ಮೊದಲ ಬಾರಿಗೆ ಹಾಸನ ನಗರಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಮೊಮ್ಮಗ ಭೀಮ್ ರಾವ್ ಅಂಬೇಡ್ಕರ್ ಅವರು ಆಗಮಿಸಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ವಿಶೇಷತೆ ಎಂದರು. ಭೀಮ ಕೋರೆಗಾಂವ್ ಯುದ್ಧವು ಒಂದು ಐತಿಹಾಸಿಕ ಹೋರಾಟವಾಗಿದ್ದು, ಕಡಿಮೆ ಸಂಖ್ಯೆಯ ತಳ ಸಮುದಾಯವು ತಮ್ಮ ಹಕ್ಕುಗಳಿಗಾಗಿ ದೊಡ್ಡ ಸಂಖ್ಯೆಯ ಬಲಿಷ್ಠ ಶಕ್ತಿಗಳ ವಿರುದ್ಧ ಹೋರಾಡಿ ಜಯ ಸಾಧಿಸಿದ ದಿನವೆಂದು ವಿವರಿಸಿದರು. ಇಂತಹ ಐತಿಹಾಸಿಕ ಹೋರಾಟದ ವಿಜಯವನ್ನು ಸ್ಮರಿಸುವ ಕಾರ್ಯಕ್ರಮಗಳು ಸಮಾಜದಲ್ಲಿ ಸಮಾನತೆ, ನ್ಯಾಯ ಮತ್ತು ಸಂವಿಧಾನದ ಮೌಲ್ಯಗಳನ್ನು ಬಲಪಡಿಸುತ್ತವೆ ಎಂದು ಅವರು ಹೇಳಿದರು. ಈ ಮಹತ್ವದ ಕಾರ್ಯಕ್ರಮದ ಆಯೋಜನೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಹಾಗೂ ಧನ್ಯವಾದಗಳನ್ನು ಸಲ್ಲಿಸಿದರು.
ಇದೇ ವೇಳೆ ಬೈಕ್ ರಾಲಿಗೂ ಮೊದಲು ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಲಾಯಿತು. ಜಿಲ್ಲಾಧಿಕಾರಿಗಳು ಕೂಡ ಜೈಭೀಮ್ ಎಂದು ಘೋಷಣೆ ಕೂಗಿದರು. ಬೈಕ್ ಮೆರವಣಿಗೆ ಜಾಥಾದಲ್ಲಿ ನೂರಾರು ಸಂಖ್ಯೆಯ ಸಮುದಾಯದ ಮುಖಂಡರು, ಯುವಕರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಬೈಕ್ ರ್ಯಾಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಜನರ ಗಮನ ಸೆಳೆಯಿತು. ಶಿಸ್ತುಬದ್ಧವಾಗಿ ಸಾಗಿದ ಜಾಥಾದಲ್ಲಿ ಭೀಮ ಕೋರೆಗಾಂವ್ ವಿಜಯೋತ್ಸವದ ಮಹತ್ವವನ್ನು ಸಾರುವ ಘೋಷಣೆಗಳು ಕೇಳಿಬಂದವು.
ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಎಚ್.ಕೆ. ಸಂದೇಶ್, ಮಣಿಕಂಠ, ಗುಡ್ಡೇನಹಳ್ಳಿ ರಂಗಸ್ವಾಮಿ, ಚೌಡಹಳ್ಳಿ ಜಗದೀಶ್, ಗೋವಿಂದರಾಜು, ಹರೀಶ್ ಉಡುವಾರೆ, ಹಿರಿಯ ಪತ್ರಕರ್ತೆ ಲೀಲಾವತಿ, ಹೆತ್ತೂರ್ ನಾಗರಾಜು, ಲಕ್ಷ್ಮಣ್, ಶಿವಮ್ಮ, ಜೈಭೀಮ್ ಬ್ರಿಗೇಡ್ ರಾಜೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.