ಮೃತ ರೈತನ ಮನೆಗೆ ಡೀಸಿ ಲತಾಕುಮಾರಿ ಭೇಟಿ

KannadaprabhaNewsNetwork |  
Published : Jun 22, 2025, 11:47 PM IST
22ಎಚ್ಎಸ್ಎನ್17 : ರಾಮನಾಥಪುರ ಹೋಬಳಿ ಮಲ್ಲಾಪುರ ಗ್ರಾಮದ ಸಾಲ ಭಾದೆಯಿಂದ ನಿಧನರಾದ ಮಂಜೇಗೌಡರ ಮನೆಗೆ  ಜಿಲ್ಲಾಧಿಕಾರಿಗಳು ಭೇಟಿ  ನೀಡಿದರು.  | Kannada Prabha

ಸಾರಾಂಶ

ಮಲ್ಲಾಪುರ ಗ್ರಾಮದ ನಿವಾಸಿ ಮಂಜೇಗೌಡ (45) ಸಾಲಬಾಧೆಯಿಂದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮೃತರ ಮನೆಗೆ ಹಾಸನ ಜಿಲ್ಲಾಧಿಕಾರಿಗಳಾದ ಲತಾಕುಮಾರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸ್ಥಳದಲ್ಲಿದ್ದ ತಾಲೂಕು ತಹಸೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಕೆ. ಸಿ. ಸೌಮ್ಯರವರಿಗೆ ಈ ಕೂಡಲೇ ಮೃತದಾರರ ಕುಟುಂಬದವರಿಗೆ ಸರ್ಕಾರದಿಂದ ಸಿಗುವ 5 ಲಕ್ಷ ರು. ಪರಿಹಾರವನ್ನು ಒಂದು ವಾರದೊಳಗೆ ಹಾಗೂ ರೈತ ಆತ್ಮಹತ್ಯೆಯ ಪಿಂಚಣಿ ಯೋಜನೆ 2000 ಮಾಸಿಕ ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಪರಿಹಾರಗಳನ್ನು ವಿತರಿಸಲು ಸೂಚಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಹೋಬಳಿಯ ಮಲ್ಲಾಪುರ ಗ್ರಾಮದ ನಿವಾಸಿ ಮಂಜೇಗೌಡ (45) ಸಾಲಬಾಧೆಯಿಂದ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಮೃತರ ಮನೆಗೆ ಹಾಸನ ಜಿಲ್ಲಾಧಿಕಾರಿಗಳಾದ ಲತಾಕುಮಾರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿದ ಜಿಲ್ಲಾಧಿಕಾರಿಗಳು, ಸ್ಥಳದಲ್ಲಿದ್ದ ತಾಲೂಕು ತಹಸೀಲ್ದಾರ್ ಹಾಗೂ ದಂಡಾಧಿಕಾರಿಗಳಾದ ಕೆ. ಸಿ. ಸೌಮ್ಯರವರಿಗೆ ಈ ಕೂಡಲೇ ಮೃತದಾರರ ಕುಟುಂಬದವರಿಗೆ ಸರ್ಕಾರದಿಂದ ಸಿಗುವ 5 ಲಕ್ಷ ರು. ಪರಿಹಾರವನ್ನು ಒಂದು ವಾರದೊಳಗೆ ಹಾಗೂ ರೈತ ಆತ್ಮಹತ್ಯೆಯ ಪಿಂಚಣಿ ಯೋಜನೆ 2000 ಮಾಸಿಕ ಹಾಗೂ ರಾಷ್ಟ್ರೀಯ ಕುಟುಂಬ ನೆರವು ಯೋಜನೆಯ ಪರಿಹಾರಗಳನ್ನು ನಾಳೆಯೊಳಗೆ ವಿತರಿಸಬೇಕು ಹಾಗೂ ರಾಷ್ಟ್ರೀಯ ಪ್ರಕೃತಿ ವಿಕೋಪ ಯೋಜನೆ ಅಡಿ ವಾಸಿಸಲು ಮನೆ ಹಾಗೂ ಪಶು ಇಲಾಖೆಯಿಂದ ಪಶು ಭಾಗ್ಯ ಹಾಗೂ ಇತರೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ನೀಡಬೇಕು ಎಂಬುದಾಗಿ ಸ್ಥಳದಲ್ಲಿಯೇ ಜಿಲ್ಲಾಧಿಕಾರಿಗಳು ಸೂಚಿಸಿದರು.

ನಂತರ ರಾಮನಾಥಪುರ ಪಕ್ಕದಲ್ಲಿರುವ ಶಿರಧನಹಳ್ಳಿ ಗ್ರಾಮದ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ರಾಮನಾಥಪುರದ ನಾಡಕಚೇರಿಯನ್ನು ವೀಕ್ಷಣೆ ಮಾಡಿ ಅಲ್ಲಿನ ನೌಕರರ ಹಾಜರಾತಿ ಪರಿಶೀಲಿಸಿ ನಂತರ ನಾಡಕಚೇರಿಯಲ್ಲಿ ಸಾರ್ವಜನಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ದೊಡ್ಡಮಗ್ಗೆ ಹೋಬಳಿಯಲ್ಲಿರುವ ಮೊರಾರ್ಜಿ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳ ವಿದ್ಯಾಭ್ಯಾಸ ಹಾಗೂ ಕುಶಲೋಪರಿ ವಿಚಾರಿಸಿದರು. ನಂತರ ಸಕಲೇಶಪುರ ಉಪ ವಿಭಾಗದ ಉಪ ವಿಭಾಗ ಅಧಿಕಾರಿಗಳಾದ ಶೃತಿ ಮೃತರ ಮನೆಗೆ ಭೇಟಿ ನೀಡಿ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಕೊಡಿಸುವಲ್ಲಿ ಮೇಲಧಿಕಾರಿಗಳಿಗೆ ಈ ಕೂಡಲೇ ವರದಿ ಸಲ್ಲಿಸಲಾಗುವುದು ಹಾಗೂ ಮತದಾರರ ಕುಟುಂಬಕ್ಕೆ ಪರಿಹಾರವನ್ನು ತುರ್ತಾಗಿ ನೀಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಗ್ರೇಡ್ 2 ತಹಸೀಲ್ದಾರ್ ಸಿ. ಸ್ವಾಮಿ, ರಾಜಸ್ವ ನಿರೀಕ್ಷಕ ಭಾಸ್ಕರ್, ಗ್ರಾಮ ಆಡಳಿತ ಅಧಿಕಾರಿ ಪ್ರದೀಪ್ ಕಾಂಬಳೆ, ಕಿರಣ್, ಮಧು, ಕುಮಾರ್ ಹಾಗೂ ತಾಲೂಕು ಕಚೇರಿಯ ವಿಷಯ ನಿರ್ವಾಹಕ ಉಜ್ವಲ್ ಕುಮಾರ್ ಹಾಗೂ ಗ್ರಾಮಸ್ಥರು ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ