ಸಹಕಾರ ಸಂಘವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಗದಗ ಜಿಲ್ಲೆಗೆ ಸಲ್ಲುತ್ತದೆ. ಅದರಲ್ಲೂ ಏಷ್ಯಾ ಖಂಡದಲ್ಲಿಯೇ ಪ್ರ-ಪ್ರಥಮ ಬಾರಿಗೆ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸ್ಥಾಪನೆ ಮಾಡಿ ಇತಿಹಾಸ ನಿರ್ಮಿಸಲಾಗಿದ್ದು, ಇಂತಹ ಐತಿಹಾಸಿಕ ಜಿಲ್ಲೆಗೆ ಡಿ.ಸಿ.ಸಿ ಬ್ಯಾಂಕ್ ಸ್ಥಾಪನೆಯಾಗಬೇಕು ಎನ್ನುವುದು ದೇಶದ ರೈತರ ಆಸೆಯಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಆಗ್ರಹಿಸಿದರು.
ಗದಗ: ಸಹಕಾರ ಸಂಘವನ್ನು ಇಡೀ ಜಗತ್ತಿಗೆ ಪರಿಚಯಿಸಿದ ಕೀರ್ತಿ ಗದಗ ಜಿಲ್ಲೆಗೆ ಸಲ್ಲುತ್ತದೆ. ಅದರಲ್ಲೂ ಏಷ್ಯಾ ಖಂಡದಲ್ಲಿಯೇ ಪ್ರ-ಪ್ರಥಮ ಬಾರಿಗೆ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಸ್ಥಾಪನೆ ಮಾಡಿ ಇತಿಹಾಸ ನಿರ್ಮಿಸಲಾಗಿದ್ದು, ಇಂತಹ ಐತಿಹಾಸಿಕ ಜಿಲ್ಲೆಗೆ ಡಿ.ಸಿ.ಸಿ ಬ್ಯಾಂಕ್ ಸ್ಥಾಪನೆಯಾಗಬೇಕು ಎನ್ನುವುದು ದೇಶದ ರೈತರ ಆಸೆಯಾಗಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಹನುಮಂತಪ್ಪ ಅಬ್ಬಿಗೇರಿ ಆಗ್ರಹಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಆಗಮಸಿದ್ದ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ, ಅವರು ಮಾತನಾಡಿದರು.ಸುಮಾರು 27 ವರ್ಷಗಳಿಂದ ಡಿ.ಸಿ.ಸಿ ಬ್ಯಾಂಕ್‌ನಿಂದ ಗದಗ ಜಿಲ್ಲೆ ವಂಚಿತವಾಗಿದೆ. ಗದಗ ಜಿಲ್ಲೆಯ ಜನತೆ ಇಂದಿಗೂ ದೂರದ ಧಾರವಾಡಕ್ಕೆ ಹೋಗುವ ದುಸ್ಥಿತಿಯಲ್ಲಿ ಗದಗ ಜನರದ್ದಾಗಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ನಮ್ಮ ಮನವಿಯನ್ನು ಸ್ವೀಕರಿಸಿ ಗದಗ ಜಿಲ್ಲೆಗೆ ನೂತನವಾಗಿ ಡಿ.ಸಿ.ಸಿ ಬ್ಯಾಂಕ್‌ನ್ನು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.ಗದಗ ಜಿಲ್ಲೆ ಕೃಷಿಯನ್ನೇ ಅವಲಂಬಿಸಿದೆ. ಇಲ್ಲಿ ಸಾಕಷ್ಟು ಹಾಲು ಉತ್ಪಾದನೆ ಆಗುತ್ತಿದೆ. ಹಾಲು ಉತ್ಪಾದಿಸಿದರೂ ಕೂಡ ಸರಿಯಾದ ಒಕ್ಕೂಟ ಇಲ್ಲದೆ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಹಾಗಾಗಿ ಹಾಲು ಒಕ್ಕೂಟದ ಸಮಿತಿಯಿಂದ ಗದಗ ಜಿಲ್ಲೆಗೆ ಪ್ರತ್ಯೇಕವಾಗಿ ಹಾಲು ಒಕ್ಕೂಟ ಸ್ಥಾಪನೆ ಆಗಬೇಕು. ಇಂದಿಗೂ ಧಾರವಾಡ ಹಾಲು ಒಕ್ಕೂಟದಲ್ಲಿ ಗದಗ ಜಿಲ್ಲೆಯನ್ನು ಸೇರಿಸಿದ್ದಾರೆ. ಅದಕ್ಕಾಗಿ ಗದಗ ಜಿಲ್ಲಾ ಹಾಲು ಒಕ್ಕೂಟವನ್ನು ಪ್ರತ್ಯೇಕವಾಗಿ ಸ್ಥಾಪನೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಈ ವೇಳೆ ನಿಂಗನಗೌಡ ಮಾಲಿಪಾಟೀಲ, ಮುತ್ತಣ್ಣ ಚೌಡಣ್ಣನವರ, ತೌಶೀಪ್ ಡಾಲಾಯತ್, ವಿನಾಯಕ ಬದಿ, ಸೀರಾಜ್ ಹೊಸಮನಿ, ದಾವಲ್ ತಹಶೀಲ್ದಾರ್, ರಾಹುಲ್ ತೇರದಾಳ, ಮಂಜುನಾಥ ಮಾಳಾವಿ, ಕುಮಾರ ರೇವಣ್ಣವರ, ನಬೀಸಾಬ ಕಿಲ್ಲೆದಾರ್, ಶಿವಕುಮಾರ ಮಠದ, ವಿಜಯ ಬಡಿಗೇರ, ಮೆಹಬೂಬಲಿ ಡಾಲಾಯತ್ ಸೇರಿದಂತೆ ಕರವೇ ಸದಸ್ಯರು, ಪದಾಧಿಕಾರಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.