ಚಿತ್ರರಂಗದ ವಿರುದ್ಧ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್‌ ನಟ್ಟು ಬೋಲ್ಟು ಫೈಟು !

KannadaprabhaNewsNetwork | Updated : Mar 03 2025, 07:42 AM IST

ಸಾರಾಂಶ

ಚಿತ್ರರಂಗದ ವಿರುದ್ಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ನಟ್ಟು ಬೋಲ್ಟು ಟೈಟು ಮಾಡುವ ಹೇಳಿಕೆಯು ಭಾರಿ ಸಂಚಲನ ಸೃಷ್ಟಿಸಿದೆ. ಡಿಸಿಎಂ ಹೇಳಿಕೆಗೆ ಪರ ವಿರೋಧ ದನಿಗಳು ಕೇಳಿಬಂದಿವೆ.

ಚಿತ್ರರಂಗದ ಡಿಸಿಎಂ ಟೀಕೆಯಿಂದ ಭಾರಿ ಕಂಪನ 

‘ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ಇಂಥವರ ನಟ್ಟು ಬೋಲ್ಟು ಟೈಟ್‌ ಮಾಡೋದು ನನಗೆ ಗೊತ್ತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ ಹೇಳಿಕೆ ರಾಜಕೀಯ ವಾಕ್ಸಮರಕ್ಕೆ ಕಾರಣವಾವಾಗಿದೆ. ‘ಜನ ಮತ ಹಾಕಿರೋದು ಜನಸೇವೆ ಮಾಡಲು, ನಟ್ಟು ಬೋಲ್ಟು ಟೈಟ್‌ ಮಾಡೋಕಲ್ಲ’ ಎಂದು ವಿಪಕ್ಷಗಳ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಡಿಕೆಶಿ ಹೇಳಿಕೆಗೆ ಖುದ್ದು ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬೇಸರಿಸಿದೆ. ಆದರೆ ಡಿಕೆಶಿ ತಮ್ಮ ಮಾತನ್ನು ಸಮರ್ಥಿಸಿಕೊಂಡಿದ್ದು, ‘ನಾನು ಸತ್ಯ ಹೇಳಿದ್ದೇನೆ. ಬೇಕಿದ್ದರೆ ಪ್ರತಿಭಟಿಸಿ’ ಎಂದು ಸವಾಲು ಹಾಕಿದ್ದಾರೆ. 

ನಟ್ಟು ಬೋಲ್ಟು ಕೋಟ್‌

ಅಧಿಕಾರ ನೀಡಿದ್ದು ನಟ್ಟುಬೋಲ್ಟು ಟೈಟ್‌ಗಲ್ಲ

ಜನರು ಅಧಿಕಾರ ನೀಡಿರುವುದು ಜನರ ಸೇವೆಗೇ ಹೊರತು ನಟ್-ಬೋಲ್ಟ್ ಟೈಟ್ ಮಾಡಲಲ್ಲ. ರಾಜ್ಯದ ಜನರು 138 ಸ್ಥಾನ ನೀಡಿರುವುದೇಕೆ ಎಂಬುದನ್ನು ಅವರು ಅರ್ಥ ಮಾಡಿಕೊಳ್ಳಬೇಕು.

- ಎಚ್‌.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

 ನಟ್ಟು-ಬೋಲ್ಟು ಟೈಟ್‌

ಆಟ ನಡೆಯೋದಿಲ್ಲರಾಜ್ಯದಲ್ಲಿ ಸರ್ವಾಧಿಕಾರಿ ಧೋರಣೆ, ಧಮ್ಕಿ ರಾಜಕೀಯ, ನಟ್ಟು- ಬೋಲ್ಟು ಟೈಟ್ ಮಾಡುವ ಆಟ ನಡೆಯುವುದಿಲ್ಲ. ದರ್ಪ ನಿಲ್ಲಿಸಿ, ನಿಮ್ಮ ನಟ್ಟು-ಬೋಲ್ಟು ಟೈಟ್‌ ಮಾಡುವ ಸಮಯ ಬಂದಿದೆ.- ಪ್ರಹ್ಲಾದ ಜೋಶಿ, ಕೇಂದ್ರ ಸಚಿವ

ಚಿತ್ರರಂಗಕ್ಕೆ ಬೋಲ್ಟೇಇಲ್ಲ, ಟೈಟ್‌ ಹೇಗಾಗುತ್ತೆ?

ಸಾವಿನ ಅಂಚಿನಲ್ಲಿರುವ ಚಿತ್ರರಂಗಕ್ಕೆ ಬೋಲ್ಟ್‌ ಇಲ್ಲ, ಇನ್ನು ಟೈಟ್ ಮಾಡಿ ಏನು ಪ್ರಯೋಜನ? ಕಲಾವಿದರ ಸಂಘ ನಿಷ್ಕ್ರಿಯಗೊಂಡಿದೆ. ಎಲೆಕ್ಷನ್‌ ಮಾಡಿ, ಕಲಾವಿದರನ್ನು ಒಗ್ಗೂಡಿಸಿ.- ಜಗ್ಗೇಶ್‌, ನಟ/ ಬಿಜೆಪಿ ಸಂಸದ

 ಸಿನೆಮಾ ನಟರಿಗೆ ಬೆದರಿಕೆ ಸರಿಯಿಲ್ಲ

ಹೋರಾಟಕ್ಕೆ ಬರಬೇಕೋ ಬೇಡವೋ ಎನ್ನುವುದು ಸಿನೆಮಾ ನಟರಿಗೆ ಬಿಟ್ಟ ವಿಚಾರ. ನಟರು ಹೋರಾಟಕ್ಕೆ ಬರದೇ ಇದ್ದಲ್ಲಿ ಜನರೇ ತೀರ್ಮಾನಿಸುತ್ತಾರೆ. ಬೆದರಿಕೆ ಹಾಕುವುದು ಸರಿಯಲ್ಲ.

- ಜಗದೀಶ ಶೆಟ್ಟರ್‌, ಮಾಜಿ ಸಿಎಂ--

ಕಾಂಗ್ರೆಸ್‌ನವರ ನಟ್ಟು

ಬೋಲ್ಟು ಟೈಟ್‌ ಮಾಡಿಡಿಕೆಶಿ ಸಿನಿಮಾ ಕಲಾವಿದರ ನೆಟ್ ಬೋಲ್ಟ್ ಟೈಟ್ ಮಾಡುತ್ತೇನೆ ಎಂದಿದ್ದಾರೆ. ಮೊದಲು ಸಚಿವ ರಾಜಣ್ಣ ಸೇರಿದಂತೆ ಇವರಿಗೆ ವಿರೋಧ ಮಾಡುತ್ತಿರುವವರಿಗೆ ನೆಟ್ ಬೋಲ್ಟ್ ಸರಿ ಮಾಡಲಿ.

- ಆರ್‌. ಅಶೋಕ್‌, ವಿಪಕ್ಷ ನಾಯಕ 

ಉದ್ವೇಗದಲ್ಲಿ ಡಿಕೆಶಿ

ಆಡಬಾರದ ಮಾತುಡಿಸಿಎಂ ಅವರು ಯಾವುದೋ ನೋವಿನಲ್ಲಿ ಆ ಮಾತು ಆಡಿದ್ದಾರೆ. ಉದ್ವೇಗದಲ್ಲಿ ಕೆಲವು ಆಡಬಾರದ ಮಾತು ಬಂದಿವೆ. ಅದನ್ನು ಮತ್ತಷ್ಟು ಎಳೆಯೋದು ಸರಿ ಅಲ್ಲ.- ಎಂ. ನರಸಿಂಹಲು, ಫಿಲಂ ಚೇಂಬರ್ ಅಧ್ಯಕ್ಷ

--ನಟ್ಟು ಬೋಲ್ಟ್‌ ಇಂದೇ

ಟೈಟ್ ಮಾಡಬೇಕುಕನ್ನಡಿಗರಿಂದಲೇ ಇವರೆಲ್ಲ ಸ್ಟಾರ್ ಆಗಿರೋದು. ನಿಮಗೆ ಸಬ್ಸಿಡಿ ಬೇಕು ಅಂದಾಗ ಬರ್ತೀರಾ? ಕನ್ನಡದ ನೆಲ, ಜಲ, ಭಾಷೆ ಬೇಡ್ವಾ? ನಟ್ಟು, ಬೋಲ್ಟು ಇವತ್ತೇ ಟೈಟ್ ಮಾಡ್ಬೇಕು.- ರವಿಕುಮಾರ್ ಗಣಿಗ, ಕಾಂಗ್ರೆಸ್ ಶಾಸಕ

 ನಟ್ಟು ಬೋಲ್ಟ್‌ ಇವತ್ತೇ ಟೈಟ್ ಮಾಡ್ಬೇಕು: ಎಂಎಲ್‌ಎ ಗಣಿಗ 

ಮೈಸೂರುಕನ್ನಡಿಗರಿಂದಲೇ ಇವರೆಲ್ಲ ಸ್ಟಾರ್ ಆಗಿರೋದು. ನಿಮಗೆ ಸಬ್ಸಿಡಿ ಬೇಕು ಅಂದಾಗ ಬರ್ತೀರಾ? ಕನ್ನಡದ ನೆಲ, ಜಲ, ಭಾಷೆ ಬೇಡ್ವಾ? ನಟ್ಟು, ಬೋಲ್ಟು ಇವತ್ತೇ ಟೈಟ್ ಮಾಡ್ಬೇಕು ಎಂದು ಮಂಡ್ಯದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಣಿಗ ತಿಳಿಸಿದರು.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹೇಳಿರುವುದರಲ್ಲಿ ಏನೂ ತಪ್ಪಿಲ್ಲ. ಆಂಧ್ರದಲ್ಲಿ ರೇವಂತ್ ರೆಡ್ಡಿ ರೀತಿ ನಾವು ಮಾಡಬೇಕು. ಕನ್ನಡದ ಕಾರ್ಯಕ್ರಮ ಅಂದರೆ ಕನ್ನಡದ ನಟರಿಗೆ ಯಾಕೆ ಅಸಡ್ಡೆ ಎಂದು ಕಿಡಿಕಾರಿದರು. ವಿಧಾನಸೌಧದ ಮುಂದೆ ನಿಮಗಾಗಿ ಕಾರ್ಯಕ್ರಮ ಮಾಡಿದ್ದೇವೆ. ಮರ್ಯಾದೆಯಿಂದ ಆಹ್ವಾನ ಕಳುಹಿಸಿದ್ದರೂ ಯಾಕೆ ಬರೋದಿಲ್ಲ? ಕ್ಯಾನ್ಸರ್ ಶಸ್ತ್ರಚಿಕಿತ್ಸೆ ಆಗಿದ್ದರೂ ಶಿವರಾಜ್‌ ಕುಮಾರ್ ಬಂದಿದ್ದಾರೆ. ಇನ್ನುಳಿದವರಿಗೆ ಏನಾಗಿದೆ? ನಮ್ಮ ಸರ್ಕಾರ ಪ್ರಶಸ್ತಿ ಕೊಟ್ಟರೆ ಬೇಡ ಅಂತೀರಿ. ಅದೇ ಹಿಂದಿಯವರು ಪ್ರಶಸ್ತಿ ಕೊಟ್ರೇ ಓಡಿ ಹೋಗಿ ತಗೋತೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಡಿಕೆಶಿ ಮೊನ್ನೆ ಹೇಳಿದ್ದೇನು?

ಸಿನಿಮಾ ರಂಗದವರ ನಟ್ಟು ಬೋಲ್ಟು ಟೈಟ್‌ ಮಾಡುವೆ 

ನಮ್ಮ ಸಿನಿಮಾ ರಂಗದವರ ಬಗ್ಗೆ ನನಗೆ ಬಹಳ ಸಿಟ್ಟಿದೆ. ಕೆಲಸ ಇದ್ದಾಗ ನಮ್ಮ ಬಳಿ ಬರುತ್ತಾರೆ. ನಂತರ ಬಳಸಿ ಬಿಸಾಡುತ್ತಾರೆ. ನಮ್ಮ ಪಕ್ಷದಿಂದ ಕುಡಿಯುವ ನೀರಿಗಾಗಿ ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದ್ದೆವು. ಈ ವೇಳೆ ಚಿತ್ರರಂಗದ ಕೆಲವರು ಮಾತ್ರ ಬಂದರು. ಬಹುತೇಕರು ಬರಲೇ ಇಲ್ಲ. ಈ ರೀತಿ ಮಾಡುವವರ ನಟ್, ಬೋಲ್ಟ್ ಟೈಟ್ ಮಾಡುವುದು ಹೇಗೆಂಬುದು ನನಗೆ ಗೊತ್ತು. ನಾನು ಚಿತ್ರರಂಗದಿದಲೇ ಬಂದವನು. ಸಿನಿಮಾ ನಿರ್ಮಾಣಕ್ಕೆ ಶೂಟಿಂಗ್ ಅನುಮತಿ ಸೇರಿ ಅನೇಕ ಕೆಲಸಗಳಿಗೆ ನಮ್ಮ ಬಳಿ ಬರಬೇಕಾಗುತ್ತದೆ. ನಾನು ಏನು ಮಾಡಬೇಕೋ ಮಾಡುತ್ತೇನೆ. ಇದನ್ನು ಎಚ್ಚರಿಕೆ ಅಂತಲೋ ಅಥವಾ ಕೋರಿಕೆ ಅಂತಲೋ ಭಾವಿಸಬಹುದು.

- ಡಿ.ಕೆ. ಶಿವಕುಮಾರ್, ಡಿಸಿಎಂ (ಶನಿವಾರ ಹೇಳಿದ್ದು)

Share this article