ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿ ತಂಬಾಕು ವಿರೋಧಿ ದಿನದ ಅಂಗವಾಗಿ ಭಾರತ್ ಕ್ಯಾನ್ಸರ್ ಆಸ್ಪತ್ರೆಯು ಶನಿವಾರ ಆಯೋಜಿಸಿದ್ದ ಸೈಕ್ಲೋಥಾನ್- ತಂಬಾಕು ವಿರೋಧಿ ಸೈಕಲ್ ರ್ಯಾಲಿಯಲ್ಲಿ ಅವರು ಮಾತನಾಡಿದರು.
ಯುವಕರು ಆರೋಗ್ಯವಂತರಾಗಿಲ್ಲದಿದ್ದರೆ ಸಮಾಜವು ಆರೋಗ್ಯವಾಗಿರುವುದನ್ನು ನಿರೀಕ್ಷಿಸಲು ಹೇಗೆ ಸಾಧ್ಯ?. ಸಮಾಜ ಮತ್ತು ದೇಶದ ಹಿತದೃಷ್ಟಿಯಿಂದ ಉತ್ತಮ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದರು.ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಮಾತನಾಡಿ, ತಂಬಾಕಿನಿಂದಾಗಿ ನಾನು ನನ್ನ ತಂದೆಯನ್ನು ಕಳೆದುಕೊಂಡಿದ್ದೇನೆ. ಆದ್ದರಿಂದ ಯುವಕರು ಸೇರಿದಂತೆ ಎಲ್ಲರೂ ಆರೋಗ್ಯಕರ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಯಾವುದೇ ತಂಬಾಕು ಸಂಬಂಧಿತ ಉತ್ಪನ್ನಗಳಿಗೆ ದಸರಾಗಬಾರದು ಎಂದು ಮನವಿ ಮಾಡಿದರು.
ಆಸ್ಪತ್ರೆಯ ಹಿರಿಯ ಸಲಹೆಗಾರ ವೈದ್ಯಕೀಯ ಆಂಕೊಲಾಜಿಸ್ಟ್ ಡಾ.ಕೆ.ಜಿ. ಶ್ರೀನಿವಾಸ್, ಡಾ. ಸೌಮ್ಯ, ಡಾ.ಎಂ. ವಿಜಯ್ ಕುಮಾರ್, ಗೌತಮ್ ಧಮೇರ್ಲಾ, ಡಾ. ಅಗ್ನಿಕಾ ಅಜಯ್ ಕುಮಾರ್, ಆನಂದ್, ವಸಂತಕುಮಾರ್ ಇದ್ದರು.