ಯೋಜನಾ ಪ್ರದೇಶದ ಸಮಗ್ರ ಮಾಸ್ಟರ್‌ ಪ್ಲಾನ್‌ ರಚಿಸಲು ನಿರ್ಧಾರ: ಆದಂ

KannadaprabhaNewsNetwork |  
Published : Nov 09, 2026, 02:30 AM IST
ತ್ವರಿತವಾಗಿ  | Kannada Prabha

ಸಾರಾಂಶ

ಸ್ಥಳೀಯ ಯೋಜನಾ ಪ್ರದೇಶದ ಸಮಗ್ರ ಯೋಜನೆ(ಮಾಸ್ಟರ್ ಪ್ಲಾನ್)ರಚಿಸಲು ಸರ್ಕಾರ ಯೋಜಿಸಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಂ ಮನವಿ ಮಾಡಿದರು.

ಸೋಮವಾರಪೇಟೆ : ಸ್ಥಳೀಯ ಯೋಜನಾ ಪ್ರದೇಶದ ಸಮಗ್ರ ಯೋಜನೆ(ಮಾಸ್ಟರ್ ಪ್ಲಾನ್)ರಚಿಸಲು ಸರ್ಕಾರ ಯೋಜಿಸಿದ್ದು ಸಾರ್ವಜನಿಕರು ಸಹಕರಿಸಬೇಕು ಎಂದು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎ. ಆದಂ ಮನವಿ ಮಾಡಿದರು.ಶನಿವಾರ ಪ್ರಾಧಿಕಾರದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಎರಡು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಸೋಮವಾರಪೇಟೆ ಯೋಜನಾ ಪ್ರಾಧಿಕಾರ ಈ ವರೆಗೆ ಸುಮಾರು 150 ಕಡತಗಳನ್ನು ವಿಲೇವಾರಿ ಮಾಡಲಾಗಿದೆ. ಸೋಮವಾರಪೇಟೆ ಯೋಜನಾ ಪ್ರದೇಶ ಹೊರತು ಪಡಿಸಿ ತಾಲೂಕಿನ ಇತರೆ ಪ್ರದೇಶದವರು ಮಡಿಕೇರಿಗೆ ತೆರಳಬೇಕಾಗಿತ್ತು. ಇದನ್ನು ಮನಗಂಡ ಶಾಸಕ ಮಂತರ್ ಗೌಡ ರವರು ಸರ್ಕಾರದ ಗಮನಕ್ಕೆ ತಂದು ಇದೀಗ ತಾಲೂಕಿನ ಎಲ್ಲ ಪ್ರದೇಶದವರು ನಮ್ಮಲ್ಲಿಯೇ ಸಂಬಂಧಿಸಿದ ಕೆಲಸಗಳನ್ನು ವಿಲೇವಾರಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.ಇದೀಗ ಸಾರ್ವಜನಿಕರ ಲೇಔಟ್, ಕನ್ವರ್ಷನ್, ನಕಾಶೆ ಅನುಮೋದನೆ ಕಾರ್ಯಗಳನ್ನು ತ್ವರಿತವಾಗಿ ಮಾಡಿಕೊಡಲಾಗುತ್ತಿದೆ. ಸೋಮವಾರಪೇಟೆ ಪ್ರಾಧಿಕಾರ ವ್ಯಾಪ್ತಿಯ ಮಾಸ್ಟರ್ ಪ್ಲಾನ್ ಇಲ್ಲದೆ ಇರುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಮಾಸ್ಟರ್ ಪ್ಲಾನ್ ಇದ್ದರೆ ಗೃಹ, ವಾಣಿಜ್ಯ ಹಾಗೂ ಇನ್ನಿತರೆ ಆಸ್ತಿಗಳ ಮಾಹಿತಿ ದಾಖಲಾಗುವುದರಿಂದ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಆ ಹಿನ್ನಲೆಯಲ್ಲಿ ಸರ್ಕಾರ ಕರ್ನಾಟಕ ನಗರ ಹಾಗೂ ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಕಾಲಂ 10 (1) ಅನ್ವಯ ಮಾಸ್ಟರ್ ಪ್ಲಾನ್ ರಚಿಸಲು ಸಾರ್ವಜನಿಕರಿಂದ ಸಲಹೆ ಸೂಚನೆ ಕೋರಿದ್ದಾರೆ. ಸಾರ್ವಜನಿಕರು ನ. 19ರೊಳಗೆ ಲಿಖಿತ ಸಲಹೆ ನೀಡಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಸಮಿತಿ ಸದಸ್ಯರಾದ ಬಸವರಾಜು, ಲೋಹಿತಾಶ್ವ, ದರ್ಶನ್, ಮುಖ್ಯಾಧಿಕಾರಿ ಮಹೇಶ್ ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಸುನೀಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟನ್ ಕಬ್ಬಿಗೆ ₹1,000 ಹೆಚ್ಚುವರಿ ದರ ನಿಗದಿಗೆ ಪಟ್ಟು
ಸಾಯಿಪ್ರಿಯಾ ಸಕ್ಕರೆ ಕಾರ್ಖಾನೆ ತಕ್ಷಣ ಆರಂಭಿಸಿ