ಅನನ್ಯ ಪರಿಸರ ಸಂಘದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಶನಿವಾರ ದೀಪಾವಳಿ ಹಬ್ಬದ ಪ್ರಯುಕ್ತ ‘ಹಸಿರು ದೀಪಾವಳಿ’ ಆಚರಿಸಲಾಯಿತು.
ಸೋಮವಾರಪೇಟೆ : ಅನನ್ಯ ಪರಿಸರ ಸಂಘದ ವತಿಯಿಂದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಶನಿವಾರ ದೀಪಾವಳಿ ಹಬ್ಬದ ಪ್ರಯುಕ್ತ ‘ಹಸಿರು ದೀಪಾವಳಿ’ ಆಚರಿಸಲಾಯಿತು.
ದೀಪ ಬೆಳಗಿಸಿ ಪರಿಸರ ಉಳಿಸಿ ಎಂಬ ಶೀರ್ಷಿಕೆಯಡಿ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ಶಿಕ್ಷಕ ವಿಜಯಕುಮಾರ್ ನೀಡಿದರು. ಪಟಾಕಿಯನ್ನು ನಮ್ಮ ಮನರಂಜನೆಗೆ ಬಳಸುವುದರಿಂದ ಪ್ರಾಣಿಪಕ್ಷಿಗಳ ಮೇಲೆ ತೀವ್ರ ಪರಿಣಾಮ ಬೀರುವುದು. ಶಬ್ಧ ಮಾಲಿನ್ಯದೊಂದಿಗೆ ಪರಿಸರಕ್ಕೂ ಹಾನಿಯಾಗುವುದು ಎಂದು ತಿಳಿಸಿದ ಅವರು, ಪಟಾಕಿಗಳನ್ನು ಹೇಗೆ ಬಳಸಬೇಕು ಎಂಬುದರ ಬಗ್ಗೆ ತಿಳಿಸಿಕೊಟ್ಟರುಶಿಕ್ಷಕಿ ರಾಜರತ್ನ ಸಮಾಜ ವಿಜ್ಞಾನ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಸಿರು ದೀಪಾವಳಿ ಮಹತ್ವವನ್ನು ತಿಳಿಸುತ್ತಾ. ಕೇವಲ ಒಂದು ಒಂದೆರಡು ದಿನಗಳ ಮಟ್ಟಿಗೆ ಪಟಾಕಿ ಬಳಸುವುದರಿಂದ ಪರಿಸರದ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುವುದು. ಆದುದ್ದರಿಂದ ಎಲ್ಲರೂ ಪರಿಸರಕ್ಕೆ ಅಲ್ಪ ಪೂರಕವಾದ ಹಸಿರು ಪಟಾಕಿಯನ್ನೇ ಬಳಸಬೇಕೆಂದರು. ಪ್ರಾಂಶುಪಾಲ ಎಸ್. ಹೇಮಲತಾ, ಶಿಕ್ಷಕರಾದ ಬಸವರಾಜ್, ಶಶಿಧರ್, ಧನ್ಯ, ಚಂದ್ರಕಲಾ, ಋತ್ವಿಕಾ ಅವರು ಹಾಗೂ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.