ಮತದಾರರ ಜಾಗೃತಿ, ಆದಿವಾಸಿ ಪ್ರಣಾಳಿಕೆ ಕುರಿತು ಚರ್ಚೆ

KannadaprabhaNewsNetwork |  
Published : Apr 17, 2024, 01:20 AM IST
72 | Kannada Prabha

ಸಾರಾಂಶ

ಜೇನು ಕುರುಬರ ಅಭಿವೃದ್ದಿ ಸಂಘ, ಬೆಟ್ಟ ಕುರುಬರ ಪಾರಂಪರಿಕ ಹಿತರಕ್ಷಣಾ ಸಂಘ, ಆದಿವಾಸಿ ಮಹಿಳಾ ಸಂಘ, ಆದಿವಾಸಿ ಜನತಾ ಪಾರ್ಲಿಮೆಂಟ್ ಹಾಗೂ ಬುಡಕಟ್ಟು ಕೃಷಿಕರ ಸಂಘ ಇವುಗಳ ಕಾರ್ಯವೈಖರಿ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಕಾನೂನು ಬದ್ಧ ಸಂಘಟನೆಯೊಂದನ್ನು ನೊಂದಾಯಿಸಿಕೊಳ್ಳುವ ತೀರ್ಮಾನವು ಈ ಸಂಘಟನೆಗಳು ತೆಗೆದುಕೊಂಡಿವೆ

ಕನ್ನಡಪ್ರಭ ವಾರ್ತೆ ಹುಣಸೂರು

ಪಟ್ಟಣದ ಡೀಡ್‌ ತರಬೇತಿ ಕೇಂದ್ರದಲ್ಲಿ ಬುಡಕಟ್ಟು ಕೃಷಿಕರ ಸಂಘದ ಮುಂದಾಳತ್ವದಲ್ಲಿ ಮತದಾರರ ಜಾಗೃತಿ ಹಾಗೂ ಆದಿವಾಸಿ ಪ್ರಣಾಳಿಕೆ ಕುರಿತು ಒಂದು ದಿನದ ಚರ್ಚೆ ನಡೆಯಿತು.

ಜೇನು ಕುರುಬರ ಅಭಿವೃದ್ದಿ ಸಂಘ, ಬೆಟ್ಟ ಕುರುಬರ ಪಾರಂಪರಿಕ ಹಿತರಕ್ಷಣಾ ಸಂಘ, ಆದಿವಾಸಿ ಮಹಿಳಾ ಸಂಘ, ಆದಿವಾಸಿ ಜನತಾ ಪಾರ್ಲಿಮೆಂಟ್ ಹಾಗೂ ಬುಡಕಟ್ಟು ಕೃಷಿಕರ ಸಂಘ ಇವುಗಳ ಕಾರ್ಯವೈಖರಿ ಬಗ್ಗೆ ವಿಸ್ತೃತವಾಗಿ ಚರ್ಚಿಸಿ ಕಾನೂನು ಬದ್ಧ ಸಂಘಟನೆಯೊಂದನ್ನು ನೊಂದಾಯಿಸಿಕೊಳ್ಳುವ ತೀರ್ಮಾನವು ಈ ಸಂಘಟನೆಗಳು ತೆಗೆದುಕೊಂಡಿವೆ ಎಂದು ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ. ರಾಮು ತಿಳಿಸಿದರು.

ಆದಿವಾಸಿಗಳು ರೂಪಿಸಿರುವ ಜನತಾ ಪ್ರಣಾಳಿಕೆಯ ಮುಖ್ಯ ಅಂಶಗಳನ್ನು ಸಭೆಯ ಗಮನಕ್ಕೆ ತಂದು ಮತದಾರರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವಂತೆ ರಾಜಕೀಯ ಪಕ್ಷಗಳ ಸ್ಪರ್ಧಾಳುಗಳಿಗೆ ಆದಿವಾಸಿ ಸಮುದಾಯಗಳ ಸಂಕಷ್ಟಗಳ ಕುರಿತು ಅರಿವು ಮೂಡಿಸುವುದು ಕೂಡ ಅಷ್ಟೆ ಮುಖ್ಯ. ಈ ಕಾರಣಕ್ಕಾಗಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆದಿವಾಸಿಗಳ ಜನತಾ ಪ್ರಣಾಳಿಕೆಯನ್ನು ಹೊರತಂದು ವಿವಿಧ ಪಕ್ಷಗಳ ಅಭ್ಯರ್ಥಿಗಳಿಗೆ ಹಾಗೂ ಪಕ್ಷದ ವರಿಷ್ಠರಿಗೆ ಕಳುಹಿಸಿ ಗಮನ ಸೆಳೆಯಲಾಗಿದೆ ಎಂದು ಸಂಘದ ಕಾರ್ಯದರ್ಶಿ ಕೊಳವಿಗೆ ಜಯಪ್ಪ ಹೇಳಿದರು.

ಮತದಾರರ ಜಾಗೃತಿ ಕಾರ್ಯಕ್ರಮದಲ್ಲಿ ಆಮ್‌ಆದ್ಮಿ ಪಾರ್ಟಿಯ ಅಧ್ಯಕ್ಷ ಮೊಹಿದ್ದೀನ್, ದಲಿತ ಚಳವಳಿ ನವ ನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ, ಸದೃಢ ಚಾರಿಟಬಲ್ ಟ್ರಸ್ಟ್‌ನ ಮಂಜುನಾಥ್, ಸ್ಟೇಟ್ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರತಿನಿಧಿ ಗೋವಿಂದರಾಜು, ಜೇನುಕುರುಬ ಅಭಿವೃದ್ದಿ ಸಂಘದ ಶಿವಣ್ಣ, ಬೆಟ್ಟಕುರುಬರ ಪಾರಂಪರಿಕ ಸಂಘದ ವಿಠಲ್, ಆದಿವಾಸಿ ಮಹಿಳಾ ಸಂಘದ ಬೊಮ್ಮಿ, ಆದಿವಾಸಿ ಪಾರ್ಲಿಮೆಂಟ್ ಸಮಿತಿಯ ಹರ್ಷ ಮತದಾನದ ಮಹತ್ವವನ್ನು ವಿವರಿಸಿ ಮಾತನಾಡಿದರು.

ಬಾಬ ಸಾಹೇಬ್‌ ಅಂಬೇಡ್ಕರ್‌ ಅವರ ಪ್ರಜಾಪ್ರಭುತ್ವ ಚಿಂತನೆಗಳ ಕುರಿತು ಡೀಡ್ ನಿರ್ದೇಶಕ ಡಾ.ಎಸ್. ಶ್ರೀಕಾಂತ್ ಮಾತನಾಡಿದರು.

ಮಹೇಶ್‌ ಅರಸ್, ಮಂಜುನಾಥ್ ಹಾಗೂ ಲೋಕೇಶ್‌ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ