ಕನ್ನಡಪ್ರಭ ವಾರ್ತೆ ವಿಜಯಪುರ
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಯತ್ನಾಳಗೆ ಲಾಯರ್ ನೋಟಿಸ್ ಕೊಟ್ಟು ₹5 ಕೋಟಿ ಮೊತ್ತದ ಮಾನಹಾನಿ ಕೇಸ್ ಹಾಕಿದ್ದೇನೆ. ನಾನು ಎಲ್ಲಿ ಆಸ್ತಿ ತಿಂದಿದ್ದೇನೆ? ಅದರ ಸರ್ವೇ ನಂಬರ್ ಸಮೇತ ದಾಖಲೆ ಕೊಡಬೇಕು. ಆಡಿದ ಮಾತಿಗೆ ತಪ್ಪಾಗಿದೆ ಎಂದು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಮಾನನಷ್ಟ ಪ್ರಕರಣ ಎದುರಿಸಲು ಸಿದ್ಧವಾಗಿ ಎಂದು ಎಚ್ಚರಿಸಿದರು. ಹೀಗೆ ಮಾಡಿದ್ದಕ್ಕೆ ಈ ಹಿಂದೆ ಅನ್ವರ ಮಾನಿಪ್ಪಾಡಿ ಮೇಲೂ ಕೇಸ್ ಹಾಕಿದ್ದೆ. ಅವನು ಕೋರ್ಟ್‌ಗೆ ಬರಲಿಲ್ಲ ಎಂದರು. ಯತ್ನಾಳ ಕೂಡಿಸುವ ಕೆಲಸ ಮಾಡಲಿ:
ಬಸವಣ್ಣನ ಜನ್ಮಭೂಮಿಯಲ್ಲಿ ಹುಟ್ಟಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕೂಡಿಸುವ ಕೆಲಸ ಮಾಡಬೇಕು. ಒಡೆಯುವ ಕೆಲಸ ಮಾಡಬಾರದು. ಹಾಗೆ ಮಾಡಿದರೆ ಬಸವಣ್ಣನಿಗೆ ಮಾಡಿದ ದೊಡ್ಡ ಅವಮಾನ. ಇಂದು ಪರಸ್ಪರ ಸಮಾಜಗಳ ಮಧ್ಯದಲ್ಲಿ ಜಗಳ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಸಾಹಿತಿ ಎಂ.ಎಂ.ಕಲಬುರಗಿ ಹಾಗೂ ಚಿಂತಕಿ ಗೌರಿ ಲಂಕೇಶ ಅವರನ್ನು ಕೊಂದವರು ಯಾರು?, ಯತ್ನಾಳ ಇದನ್ನು ಹೇಳ್ತಾರಾ? ಯತ್ನಾಳ ಯಾರ ಸೃಷ್ಟಿ?, ಯತ್ನಾಳನನ್ನು ಸೃಷ್ಟಿ ಮಾಡಿದವರು ಯಾರು? ಇದನ್ನು ಹೇಳ್ತಾರಾ? ಯತ್ನಾಳ ಅವರೇ ಜಾತಿ ಆಧಾರದ ಮೇಲೆ ವಿಷಯ ಬಿಟ್ಟು, ಜನತೆ ಸಮಸ್ಯೆಗಳ ಆಧಾರದ ಮೇಲೆ ಹೋರಾಟ ಮಾಡಿ ಎಂದು ಸಲಹೆ ನೀಡಿದರು.ಜಗತ್ತಿನಲ್ಲಿಯೇ ಮೊಟ್ಟ ಮೊದಬಾರಿಗೆ 1400 ವರ್ಷಗಳ ಹಿಂದೆ ಉಮರ ಫಾರೂಕ್ ಎಂಬಾತ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದಿದ್ದಾರೆ. ಯಾವುದೇ ನಿರುಪಯುಕ್ತ ಭೂಮಿಯಲ್ಲಿ ಪೈರು ಬೆಳೆಯುವವನೇ ಒಡೆಯ ಎಂದು ಆಗಲೇ ಅವರು ಹೇಳಿದ್ದರು ಎಂದರು.ಈ ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇದ್ದಾಗ 242 ರೈತರಿಗೆ ನೋಟಿಸ್ ಕೊಟ್ಟಿದ್ದರು. ಇವರು ಅದನ್ನೇ ಮುಂದುವರಿಸಿದ್ದಾರೆ. ನಾನು ಕೋಡಿಹಳ್ಳಿ ಚಂದ್ರಶೇಖರ ಸೇರಿ ಈ ಭಾಗಕ್ಕೆ ಇನ್ನೊಮ್ಮೆ ಪ್ರವಾಸಕ್ಕೆ ಬರಲಿದ್ದೇವೆ. ರೈತರ ಭೂಮಿ ಯಾರೂ ಕಸಿಯಲು ಸಾಧ್ಯವಿಲ್ಲ. ರೈತರು ತಮ್ಮ ತಮ್ಮ ಭೂಮಿಯಲ್ಲಿ ಆರಾಮಾಗಿ ಜೀವನೋಪಾಯ ಮಾಡಿಕೊಂಡಿರಬೇಕು ಎಂದು ಧೈರ್ಯ ತುಂಬಿದರು.ವಾಪಸ್ ಪಡೆಯುವ ಬದಲು ಸರಿಪಡಿಸಬೇಕಿತ್ತು:
ರಾಜರು ಆಸ್ತಿ ಕೊಟ್ಟಿದ್ದಾರೆ: ವಕ್ಫ್‌ಗೆ ಮುಸ್ಲಿಮರು ಸೇರಿದಂತೆ ಮೈಸೂರಿನ ಶ್ರೀಕೃಷ್ಣರಾಜ ಒಡೆಯರು ಸೇರಿದಂತೆ ಅನೇಕ ಕಡೆ ಹಿಂದೂ ಮಹಾರಾಜರು ಆಸ್ತಿಗಳನ್ನು ಕೊಟ್ಟಿದ್ದಾರೆ ಎಂದ ಅವರು, ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದೆ. ಎಚ್.ಡಿ.ದೇವೇಗೌಡರು ನನಗೆ 86 ವರ್ಷ ಎಂದು ಹೇಳಿ ಚನ್ನಪಟ್ಟಣದಲ್ಲಿ ಹೋಗಿ ಕಣ್ಣೀರಿಡುತ್ತಿದ್ದಾರೆ. ಯಾಕೆ ಅಳುತ್ತೀರಿ? ನಿಮಗೆ ನಿಲ್ಲು ಎಂದವರು ಯಾರು ಎಂದು ಪ್ರಶ್ನಿಸಿದರು? ರಾಮನಗರ ಆಯ್ತು, ಮಂಡ್ಯ ಆಯ್ತು, ಯೋಗಿಶ್ವರನಿಗೆ ಮನೆನೆ ಖಾಲಿ ಮಾಡಿಸಿದರು ಎಂದು ವ್ಯಂಗ್ಯವಾಡಿದರು.ಕರ್ನಾಟಕದಲ್ಲಿ ಮೂರನೇ ಶಕ್ತಿಯಂತೆ ಶಿವನ ಕಣ್ಣು ತೆರೆಯಬೇಕಿದೆ. ನಾನು ಕೋಡಿಹಳ್ಳಿ ಚಂದ್ರಶೇಖರ ಒಳಗೊಂಡು ಹಲವರೆಲ್ಲ ಸೇರಿ ಈಗಾಗಲೇ ಮೂರುಸಭೆ ಮಾಡಲಾಗಿದೆ. ಮುಂದೇನು ಮಾಡಬೇಕು ಎಂದು ಗೋಪಿ ಅವರ ಅಧ್ಯಕ್ಷತೆಯಲ್ಲಿ ನಿರ್ಧಾರ ಮಾಡಲಾಗುವುದು. ರಾಜ್ಯಕ್ಕೆ ಮೂರನೇ ಶಕ್ತಿ ಅವಶ್ಯಕತೆ ಇದೆ. ಇದು ಹೆಚ್ಚುಕಮ್ಮಿ ಡಿಸೆಂಬರ್‌ನಲ್ಲಿ ಅನೌನ್ಸ್ ಆಗಲಿದೆ ಎನ್ನುವ ಮೂಲಕ ಹೊಸಪಕ್ಷದ ಸೂಚನೆ ನೀಡಿದರು.ಗೋಷ್ಠಿಯಲ್ಲಿ ಮುಖಂಡರಾದ ಎಲ್.ಎಲ್.ಉಸ್ತಾದ, ಬಡೇಪೀರ ಜುನೇದಿ, ಬಿ.ಹೆಚ್.ಮಹಾಬರಿ, ಇಸ್ಮಾಯಲ್, ಯುನೂಸ್ ಖಾನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.