ಜನವಿರೋಧಿ ಕಾನೂನು ರೂಪಿಸುತ್ತಿರುವ ಬಿಜೆಪಿ ಸೋಲಿಸಿ: ಕಾಂ.ಮೀನಾಕ್ಷಿ ಸುಂದರಂ

KannadaprabhaNewsNetwork | Published : Apr 14, 2024 1:49 AM

ಸಾರಾಂಶ

ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ, ಪ್ರಜಾಸತ್ತೆ, ಉಳಿಸಲು ಮತ್ತು ಸಮಾನತೆ -ಸಹಬಾಳ್ವೆ ಬೆಳಸಲು, ರೈತ, ಕಾರ್ಮಿಕರ , ಜನಸಾಮಾನ್ಯರ ಹಿತಕಾಯದೆ ಕಾಪೋರೇಟ್ ಲಾಭಕ್ಕೆ ಮಾರಾಟವಾದ ಮತ್ತು ದೇಶದ ಬಹುಪಾಲು ಕಾನೂನುಗಳನ್ನು ಜನ ವಿರೋಧಿಯಾಗಿ ತಿದ್ದುಪಡಿ ಮಾಡುತ್ತಿರುವ ಬಿಜೆಪಿ ಮತ್ತು ಅವರ ಮಿತ್ರ ಮಂಡಳಿಯನ್ನು ಸೋಲಿಸಲು ಮುಂದಾಗುವಂತೆ ಸಿಪಿಐ (ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ.ಮಿನಾಕ್ಷಿ ಸುಂದರಂ ಅವರು ಜನತೆಗೆ ಕರೆ ನೀಡಿದ್ದಾರೆ.

ದುಡಿವ ಜನರ ರಾಜಕೀಯ ಸಮಾವೇಶ ಕನ್ನಡಪ್ರಭ ವಾರ್ತೆ ತುಮಕೂರುಲೋಕಸಭಾ ಚುನಾವಣೆಯಲ್ಲಿ ಸಂವಿಧಾನ, ಪ್ರಜಾಸತ್ತೆ, ಉಳಿಸಲು ಮತ್ತು ಸಮಾನತೆ -ಸಹಬಾಳ್ವೆ ಬೆಳಸಲು, ರೈತ, ಕಾರ್ಮಿಕರ , ಜನಸಾಮಾನ್ಯರ ಹಿತಕಾಯದೆ ಕಾಪೋರೇಟ್ ಲಾಭಕ್ಕೆ ಮಾರಾಟವಾದ ಮತ್ತು ದೇಶದ ಬಹುಪಾಲು ಕಾನೂನುಗಳನ್ನು ಜನ ವಿರೋಧಿಯಾಗಿ ತಿದ್ದುಪಡಿ ಮಾಡುತ್ತಿರುವ ಬಿಜೆಪಿ ಮತ್ತು ಅವರ ಮಿತ್ರ ಮಂಡಳಿಯನ್ನು ಸೋಲಿಸಲು ಮುಂದಾಗುವಂತೆ ಸಿಪಿಐ (ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕಾಂ.ಮಿನಾಕ್ಷಿ ಸುಂದರಂ ಅವರು ಜನತೆಗೆ ಕರೆ ನೀಡಿದರು. ಅವರು ಸಿಪಿಐ(ಎಂ) ಪಕ್ಷ ಜನ ಚಳುವಳಿ ಕೇಂದ್ರದಲ್ಲಿ ಅಯೋಜಿಸಿದ್ದ ದುಡಿವ ಜನರ ರಾಜಕೀಯ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ಬಿಜೆಪಿ ನಾಯಕಿ 10 ವರ್ಷ ದೇಶದ ಅರ್ಥಿಕ ಸಚಿವರಾಗಿದ್ದ ನಿರ್ಮಲ ಸೀತಾರಾಮ್ ಅವರು ನಾನು ಹಣ ಇಲ್ಲದ ಕಾರಣ ಚುನಾವಣೆಗೆ ಸ್ವರ್ಧೆ ಮಾಡಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ವಿಶ್ವಗುರು ಮೋದಿ ಅವರು ಹೇಗೆ ಸ್ಪರ್ಧೆ ಮಾಡ್ತಾರೆ..? ಅವರ ಬಳಿ ಹಣ ಇದೆ ಅಂತನಾ ಅಥವಾ ಹಣ ಇಲ್ಲ ಅಂತನಾ, ನಾವೆಲ್ಲಯೋಚನೆ ಮಾಡಬೇಕು ಎಂದು ಕುಟುಕಿದರು. ಇದು ಪ್ರಜಾಸತ್ತೆಗೆ ಮಾಡುವ ಅವಮಾನ, ಹಣವಂತರಷ್ಟೆ ಶಾಸನ ಸಭೆಗಳಲ್ಲಿ ಸ್ವರ್ಧಿಸಬೇಕಂಬ ಅಲಿಖಿತ ಶಾಸನಗಳನ್ನು ಮುರಿದು ದುಡಿವ ಜನ ರಾಜಕೀಯ ತಿಳುವಳಿಕೆ ಪಡೆದು ನೀತಿಗಳ ಅಧಾರದಲ್ಲಿ ಚುನಾವಣೆಗಳಲ್ಲಿ ಮತಚಲಾಯಿಸುವಂತೆ ಜನತೆಗೆ ಕರೆ ನೀಡಿದರು.

ಈ ಮತದಾನದ ಹಕ್ಕು ತಾನಾಗೆ ತಾನು ಬಂದಿದ್ದಲ್ಲ, ಒಂದು ಕಾಲದಲ್ಲಿ ಮಹಿಳೆಯರಿಗೆ ಮತದಾನ ಮಾಡುವ ಹಕ್ಕು ಇರಲಿಲ್ಲ. ನಮ್ಮ ದೇಶದಲ್ಲೇ ಮಾತ್ರ ಇರಲಿಲ್ಲ ಅಂತ ಅಲ್ಲ. ಭಾರಿ ಮೊದಲೇ ಪ್ರಜಾಪ್ರಭುತ್ವ ಹೊಂದಿದ್ದ ಯುರೋಪ್, ಅಮೆರಿಕ , ಬ್ರಿಟನ್ ನಂತಹ ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಮತದಾನ ಮಾಡಲು ಅವಕಾಶ ಇರಲಿಲ್ಲ. ನಮ್ಮ ದೇಶದಲ್ಲಿ ಬಹಳಷ್ಟು ದಿನ ಮಹಿಳೆಯರಿಗೆ ಮತದಾನ ಮಾಡಲು ಅವಕಾಶ ಲೋಕಸಭಾ ಚುನಾವಣೆ ಹಾಗೂ ನಮ್ಮ ಸಂವಿಧಾನದಲ್ಲಿ ಡಾ.ಬಾಬಾಸಾಹೇಬರು ನೀಡಿದ್ದು ಎಂದರುಬಾ.ಹಾ.ರಮಕುಮಾರಿ ಮಾತನಾಡಿ, ಮಹಿಳಾ ಪರ ಚಿಂತನೆಗಳು ಇಲ್ಲದೆ, ದೌಜನ್ಯ- ದಬ್ಬಾಳಿಕೆಗಳನ್ನು ನಡೆಸಿದವರನ್ನು ಜನತೆ ಬೆಂಬಲಿಸಬಾರದು. ಕೇಂದ್ರದಲ್ಲಿ ಅಳ್ವಿಕೆ ಮಾಡಿದ ಬಿಜೆಪಿ ಕನ್ನಡ ವಿರೋಧಿತನವನ್ನು ಜನತೆ ಅರಿತು ಮತಚಲಾಯಿಸುವಂತೆ ಮನವಿ ಮಾಡಿದರು.ಸಿ,ಯತಿರಾಜು ಮತನಾಡಿ ಸುಳ್ಳುಗಳನ್ನು ಸತ್ಯವೆಂದು ನಂಬಿಸುವ ಕಾರ್ಖಾನೆಗಳಿವೆ. ಜನತೆ ಚುನಾವಣೆಯ ಸಮಯದಲ್ಲಿ ತಾವು ಅಧಿಕಾರಕ್ಕೆ ಹಿಡಿಯಲು ಸಾವಿರಾರು ಸುಳ್ಳುಗಳನ್ನು ನಿರ್ಲಜ್ಜೆಯಿಂದ , ಅಳುಕಿಲ್ಲದೆ ಸತ್ಯದ ಬಾಯಿ ಮುಚ್ಚಿಸುವಂತೆ ಸಮಾಜದ ಹರಡುವ ಕಾರ್ಖಾನೆಗಳನ್ನು ಬಲಪಂಥಿಯ ರಾಜಕಿಯ ಶಕ್ತಿಗಳು ಮಾಡುತ್ತಿವೆ. ಇದನ್ನು ಸಂಯಮ ಮತ್ತು ವಿವೇಕದಿಂದ ವಿಮರ್ಶಿಸಿ ಮತ ನೀಡುವುದು ಅಗತ್ಯ. ಕಾಪೋರೇಟ್ ಗುಲಾಮ ಸರ್ಕಾರಗಳನ್ನು ನಾವು ಅರಿಸಬೇಕಾಗಿಲ್ಲ, ಪರ್ಯಾಯ ರಾಜಕಿಯ ನೀತಿಗಳತ್ತ ಜನತೆ ಚಿಂತನೆ ಮತ್ತು ಬೆಂಬಲ ಅಗತ್ಯ ಎಂದರು

ಸಿಪಿಐ ಎಂ ಜಿಲ್ಲಾಕಾರ್ಯದರ್ಶಿ ಎನ್ ಕೆ. ಸುಬ್ರಮಣ್ಯಅವರು ಮಾತನಾಡಿ, ಹೊರಗಿಂದ ಬಂದು ದುಡ್ಡಿನ ಹೊಳೆ ಹರಿಸಿ ಮತ ಕೊಳ್ಳಲು ಹವಣಿಸುತ್ತಿರುವವರನ್ನು, ತೆಂಗಿನ ದಾರಣೇ ಸೇರಿದಂತೆ ಕೃಷಿ ಉತ್ಪನ್ನಗಳ ದರ ಇಳಿಕೆಗೆ ಕಾರಣವಾಗಿರುವ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಲು ಕರೆ ನೀಡಿದರುಅಧ್ಯಕ್ಷತೆಯನ್ನು ಸೈಯದ್ ಮುಜೀಬ್ ವಹಿಸಿದ್ದರು. ವೇದಿಕೆಯಲ್ಲಿ ಸಿಪಿಐ ಎಂ ಮುಂಖಡರಾದಅರ್.ಎಸ್. ಚನ್ನ ಬಸಣ್ಣ, ಅಜ್ಜಪ್ಪ, ರೈತ ಮುಖಂಡರಾದ ದೊಡ್ಡ ನಂಜಪ್ಪ. ಮಹಿಳಾ ನಾಯಕಿ ರಾಜಮ್ಮ, ಮತ್ತಿತರು ಇದ್ದರು. ಪಂಡಿತ್ ಜವಾಹರ್, ಸುಬ್ರಮಣ್ಯ, ಇನ್ಸಾಪ್ ರಫೀಕ್, ಅಪ್ಸರ್ ಕಾನ್, ಕೆ.ಪಿ.ಆರ್.ಎಸ್ ನ ಬಸವರಾಜು, ಜೆ.ಎಂ.ಎಸ್.ನ ಕಲ್ಪನಾ,ಟೈಲರ್ ಸಂಘದ ಅಧ್ಯಕ್ಷ ಮಂಜುಳ,ಕಟ್ಟಡ ಕಾರ್ಮಿಕ ಸಂಘಟನೆಯ ಖಲೀಲ್, ಆಟೋಚಾಲಕ ಸಂಘಧ ಇಂತಿಯಾಜ್, ಪುಟ್ ಪಾತ್ ಸಂಘದ ವಸೀಂ,ವಕೀಲ ಕಿಶೋರ್ ಮುಂತಾದವರು ಭಾಗವಹಿಸಿದ್ದರು. ಶಿವಕುಮಾರ ಸ್ವಾಮಿ ಸ್ವಾಗತಿಸಿ,. ರಂಗಧಾಮಯ್ಯ ವಂದಿಸಿದರು.

Share this article