ಎ, ಬಿ ಖಾತೆ ನೀಡುವಲ್ಲಿ ವಿಳಂಬ: ಕೆಆರ್‌ಎಸ್‌ ಪಕ್ಷದಿಂದ ಪ್ರತಿಭಟನೆ

KannadaprabhaNewsNetwork |  
Published : May 23, 2025, 11:51 PM ISTUpdated : May 23, 2025, 11:52 PM IST
ಖಾತೆ ನೀಡುವಲ್ಲಿ ವಿಳಂಬ ಕೆ ಆರ್ ಪಕ್ಷದಿಂದ ಪ್ರತಿಭಟನೆ | Kannada Prabha

ಸಾರಾಂಶ

ಕೊಳ್ಳೇಗಾಲ ನಗರಸಭೆ ಸಕಾಲದ್ಲಲಿ ಎ ಖಾತೆ, ಬಿ ಖಾತೆ ನೀಡುತ್ತಿಲ್ಲ ಎಂದು ಆರೋಪಿಸಿ ಕೆಆರ್‌ಎಸ್ ಪಕ್ಷದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಗರಸಭೆಯಲ್ಲಿ ಎ ಖಾತಾ ಮತ್ತು ಬಿ ಖಾತಾ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿರುವುದನ್ನು ಖಂಡಿಸಿ, ಕಚೇರಿ ಮುಂಭಾಗದಲ್ಲಿ ಕೆಆರ್‌ಎಸ್ ಪಕ್ಷದ ಮುಖಂಡರು ವಿಳಂಬ ನೀತಿಗೆ ಧಿಕ್ಕಾರ ಕೂಗುವ ಮೂಲಕ ಶುಕ್ರವಾರ ಕೆಲಕಾಲ ಪ್ರತಿಭಟಿಸಿ ಸ್ಥಳದಲ್ಲೆ ಭಾಗ್ಯ ಎಂಬುವರಿಗೆ ಇ-ಸ್ವತ್ತು ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟ ಘಟನೆ ಜರುಗಿತು.

ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ನಗರಸಭೆ ಸಕಾಲದಲ್ಲಿ ಖಾತೆ ನೀಡುತ್ತಿಲ್ಲ, ವಿಳಂಬ ನೀತಿ ಹಾಗೂ ಸತಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು

ಆಕ್ರೋಶ ಹೊರಹಾಕಿದರು. ಈ ವೇಳೆ ಮಾತನಾಡಿದ ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಣೇಶ್ , ಸಾರ್ವಜನಿಕರಿಗೆ ಖಾತೆಯನ್ನು ಮೂರು ತಿಂಗಳ ಅವಧಿಯೊಳಗೆ ಖಾತೆ ಮಾಡಬೇಕು ಎಂಬ ನಿಯಮವಿದ್ದರೂ ಕೂಡ, ಅಧಿಕಾರಿಗಳು ಸಾರ್ವಜನಿಕರಿಗೆ ಖಾತೆ ಮಾಡಿಕೊಡುವಲ್ಲಿ ವಿಳಂಬಿಸುತ್ತಿದ್ದಾರೆ. ಪ್ರತಿದಿನವೂ ಜನರು ನಗರಸಭೆಗೆ ಅಲೆದಾಡುತ್ತಿದ್ದು, ಇದರಿಂದಾಗಿ ಅಸಮಾಧಾನ ಹೆಚ್ಚಾಗಿದೆ. ಅಧಿಕಾರಿಗಳಿಗೆ ಈ ಸಂಬಂಧ ಸಮರ್ಪಕ ಮಾಹಿತಿ ಇಲ್ಲವೆಂಬುದೂ ಚಿಂತಾಜನಕ ವಿಷಯವಾಗಿದೆ, ಅಲ್ಲದೆ ಭಾಗ್ಯ ಎಂಬುವರನ್ನು ಇ-ಸ್ವತ್ತು ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿದರು.

ಅಧಿಕಾರಿಗಳು ಕೂಡಲೆ ಭಾಗ್ಯ ಎಂಬುವರು ಇ-ಸ್ವತ್ತಿಗೆ ಕಂದಾಯ ಪಾವತಿಸಿಕೊಂಡು ಸ್ಥಳದಲ್ಲೆ ಇ-ಸ್ವತ್ತು ನೀಡಿದ ಹಿನ್ನೆಲೆ ಪ್ರತಿಭಟನೆ ಕೈಬಿಟ್ಟರು. ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ ನವೀನ್, ಜಿಲ್ಲಾ ಕಾರ್ಯದರ್ಶಿ ಮಧು ನಾಯಕ್, ಜಿಲ್ಲಾ ಕಾರ್ಯದರ್ಶಿ ಜಯಶಂಕರ್, ಶಿವಶಂಕರ್, ತಾಲೂಕು ಕಾರ್ಯದರ್ಶಿ ಕುಮಾರ್, ಚಂದ್ರಶೇಖರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀನಿವಾಸ್ ಇನ್ನಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅತಿಕ್ರಮಣ ಮಾಡಿಕೊಂಡಿದ್ದ ಸರ್ಕಾರಿ ಆಸ್ತಿಗೆ ಬೀಗ
ಸ್ಥಳೀಯ ರೈಲ್ವೆ ಪೊಲೀಸ್ ಸಿಬ್ಬಂದಿಯ ಕಾರ್ಯವೈಖರಿ ಪರಿಶೀಲಿಸಿದ ಡಿಐಜಿ ರಶ್ಮಿ