ಕೊಪ್ಪಳ: ಆ.3ರಂದು ನಗರದ ಬಹದ್ದೂರ ಬಂಡಿ ರಸ್ತೆಯಲ್ಲಿ ಕೊಲೆಯಾದ ಗವಿಸಿದ್ದಪ್ಪ ಹಾಗೂ ಅವರ ಕುಟುಂಬಸ್ಥರು ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಸಹಕರಿಸಿರುವ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಸೂಕ್ತ ಕಾನೂನೂ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಪಿಡಾ. ರಾಮ್ ಎಲ್.ಅರಸಿದ್ದಿ ಮೂಲಕ ಗೃಹ ಸಚಿವರು, ಪೊಲೀಸ್ ಮಹಾನಿರ್ದೇಶಕರು ಹಾಗೂ ಮಹಾನೀರಿಕ್ಷಕರಿಗೆ ಮುಖಂಡರು ಮನವಿ ಸಲ್ಲಿಸಿದರು.
ಈ ಸಂದರ್ಭ ಬಸವರಾಜ ಶೀಲವಂತರ್. ಎಸ್.ಎ.ಗಫಾರ್. ಮಹಾಂತೇಶ್ ಕೊತಬಾಳ, ಚನ್ನಬಸಪ್ಪ ಅಪ್ಪಣವರ್, ಶಿವಪ್ಪ ಹಡಪದ್, ಇಮಾಮ್ ಸಾಬ್ ಕಡೆಮನಿ, ಮುನೀರ್ ಅಹ್ಮದ್ ಸಿದ್ದೀಕಿ, ಜಾಕೀರ್ ಹುಸೇನ್ ಅರಗಂಜಿ, ಸೈಯ್ಯದ್ ಅಬ್ದುಲ್ ಖಾದರ್ ಪೀರಝಾದೆ, ಕೊಳಚೆ ನಿರ್ಮೂಲನಾ ವೇದಿಕೆ ಸಂಚಾಲಕ ಗೌಸ್ ನೀಲಿ, ಮುಜಮೀಲ್, ಕಮಲ್ ಪಾಷಾ ಬೆಳಗಟ್ಟಿ, ಸೈಯ್ಯದ್ ಫಝಲ್ ಹುಸೇನಿ, ಮೊಹಮ್ಮದ್ ಕಿರ್ಮಾನಿ ಖಾಝಿ ಮುಂತಾದವರಿದ್ದರು.