ಹಿಂದೂ ದೇವರ ಚಿತ್ರದ ಪಟಾಕಿ ನಿಷೇಧಕ್ಕೆ ಒತ್ತಾಯ

KannadaprabhaNewsNetwork |  
Published : Oct 15, 2025, 02:07 AM IST
ಪೊಟೋ-ಹಿಂದೂ ದೇವರುಗಳ ಮತ್ತು ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿ ಮತ್ತು ಚೀನಾ ನಿರ್ಮಿತ ಪಟಾಕಿಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಹಿಂದೂ ಜನಜಾಗೃತಿಯವರು ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು. | Kannada Prabha

ಸಾರಾಂಶ

ಕೋಟ್ಯಂತರ ಹಿಂದೂಗಳ ಆರಾಧ್ಯ ದೇವತೆಗಳಾದ ಶ್ರೀಲಕ್ಷ್ಮಿ, ಶ್ರೀಕೃಷ್ಣ, ಶ್ರೀವಿಷ್ಣು, ಅಯ್ಯಪ್ಪಸ್ವಾಮಿ, ಶ್ರೀವೆಂಕಟೇಶ್ವರ ಇತ್ಯಾದಿ ಹಿಂದೂ ದೇವರ ಚಿತ್ರ ಮತ್ತು ನೇತಾಜಿ ಸುಭಾಷಚಂದ್ರ ಬೋಸ್, ಲೋಕಮಾನ್ಯ ತಿಲಕ ಮುಂತಾದ ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ.

ಲಕ್ಷ್ಮೇಶ್ವರ: ದೀಪಾವಳಿ ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಈಗಾಗಲೇ ಅನೇಕ ಹಿಂದೂ ದೇವರುಗಳ ಮುದ್ರಿತ ಪಟಾಕಿಗಳು ಮಾರಾಟ ಮಾಡುತ್ತಿದ್ದು, ಅವುಗಳನ್ನು ನಿಷೇಧಿಸಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯವರು ಮಂಗಳವಾರ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಅರ್ಪಿಸಿದರು.

ಮನವಿಯಲ್ಲಿ ಕೋಟ್ಯಂತರ ಹಿಂದೂಗಳ ಆರಾಧ್ಯ ದೇವತೆಗಳಾದ ಶ್ರೀಲಕ್ಷ್ಮಿ, ಶ್ರೀಕೃಷ್ಣ, ಶ್ರೀವಿಷ್ಣು, ಅಯ್ಯಪ್ಪಸ್ವಾಮಿ, ಶ್ರೀವೆಂಕಟೇಶ್ವರ ಇತ್ಯಾದಿ ಹಿಂದೂ ದೇವರ ಚಿತ್ರ ಮತ್ತು ನೇತಾಜಿ ಸುಭಾಷಚಂದ್ರ ಬೋಸ್, ಲೋಕಮಾನ್ಯ ತಿಲಕ ಮುಂತಾದ ರಾಷ್ಟ್ರ ಪುರುಷರ ಚಿತ್ರಗಳಿರುವ ಪಟಾಕಿಯನ್ನು ಬಹಿರಂಗವಾಗಿ ಮಾರಾಟ ಮಾಡುತ್ತಿದ್ದಾರೆ.

ಇಂತಹ ಪಟಾಕಿಗಳನ್ನು ಸಿಡಿಸಿದ ನಂತರ ಪ್ಯಾಕೆಟ್‌ಗಳ ಮೇಲಿನ ದೇವರುಗಳ ಹಾಗೂ ರಾಷ್ಟ್ರ ಪುರುಷರ ಚಿತ್ರವು ಛಿದ್ರವಾಗಿ ರಸ್ತೆಯ ತುಂಬಾ ಹರಡುತ್ತದೆ. ಜನರು ಕಾಲಿನಡಿಯಲ್ಲಿ ತುಳಿಯುವುದು, ವಾಹನದ ಅಡಿಯಲ್ಲಿ ಅಥವಾ ಕಸದ ಬುಟ್ಟಿ ಹಾಗೂ ಚರಂಡಿಯಲ್ಲಿ ಬೀಳುವುದು ಕಾಣುತ್ತದೆ.

ಇದು ಹಿಂದೂ ದೇವರ ಅಪಮಾನವಾಗಿದ್ದು ಮತ್ತು ರಾಷ್ಟ್ರ ಪುರುಷರ ಅಗೌರವವಾಗುತ್ತದೆ. ಇದು ಭಾರತೀಯ ದಂಡ ಸಂಹಿತೆ ೨೯೫ರ ಅನುಸಾರ ಧಾರ್ಮಿಕ ಭಾವನೆಗೆ ಘಾಸಿಗೊಳಿಸುವುದು ಎಂಬ ಗಂಭೀರ ಅಪರಾಧವೇ ಆಗಿದೆ. ಈಗಾಗಲೇ ಮಹಾರಾಷ್ಟ್ರದ ವಾಣಿಜ್ಯ ಮಂಡಳಿ ಪಟಾಕಿಯಲ್ಲಿ ದೇವರ ಚಿತ್ರ ಮುದ್ರಿಸುವುದನ್ನು ನಿಷೇಧಿಸಿದೆ. ಅದೇ ರೀತಿ ರಾಜ್ಯದಲ್ಲೂ ಇಂತಹ ಪಟಾಕಿಗಳ ಮೇಲೆ ನಿಷೇಧವನ್ನು ಹಾಕಬೇಕು ಮತ್ತು ಅದಕ್ಕೆ ಸಂಬಂಧಿಸಿದವರಿಗೆ ಸೂಚನೆ ನೀಡಬೇಕೆಂದು ಮನವಿ ಸಲ್ಲಿಸಲಾಯಿತು.

ಈ ವೇಳೆ ಈರಣ್ಣ ಪೂಜಾರ, ಯಲ್ಲಪ್ಪಗೌಡ ಪಾಟೀಲ, ದುಂಡಪ್ಪ ಸವಣೂರು, ಬಸವರಾಜ ಆಲೂರು, ಕಿರಣ ಗಾಣಗೇರ, ಎಂ.ಎನ್. ಬಾಡಗಿ, ಅಮಿತ ಗುಡಗೇರಿ, ಸೋಮು ನರೇಗಲ್, ಬಾಳಪ್ಪ ಗೋಸಾವಿ, ನಿಖಿಲ ಗೊಸಾವಿ, ನಾಗರಾಜ ಸೂರಣಗಿ, ರಾಜು ಗೋಸಾವಿ, ಗಣೇಶ ಗೋಸಾವಿ ಇತರರು ಇದ್ದರು.

ಚೌಡಯ್ಯನವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳ ಬಂಧಿಸಿ

ಗದಗ: ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ನಿಜಶರಣ ಅಂಬಿಗರ ಚೌಡಯ್ಯ ವಿವಿಧೋದ್ದೇಶಗಳ ಟ್ರಸ್ಟ್ ಹಾಗೂ ತಾಲೂಕು ಸಮಿತಿ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ಜೆ.ಬಿ. ಗಾರವಾಡ ಮಾತನಾಡಿ, ಕಲಬುರಗಿ ಜಿಲ್ಲೆಯ ಶಹಾಬಾದ ತಾಲೂಕಿನ ಮುತ್ತಗ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿಯನ್ನು ಭಗ್ನಗೊಳಿಸಿ ಅಟ್ಟಹಾಸವನ್ನು ಮೆರೆದ ಕಿಡಿಗೇಡಿಗಳ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಇದುವರೆಗೂ ಕಿಡಿಗೇಡಿಗಳ ಬಂಧನ ಆಗದೇ ಇರುವುದು ಸಂಶಯಕ್ಕೆ ಕಾರಣವಾಗಿದೆ. ಕಾರಣ ರಾಜ್ಯ ಸರ್ಕಾರ ಈ ಬಗ್ಗೆ ತೀವ್ರವಾಗಿ ತನಿಖೆ ನಡೆಸಿ ತಪ್ಪಿಸ್ಥರಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಡಾ. ಗಣೇಶ ಸುಲ್ತಾನಪೂರ ಮಾತನಾಡಿದರು. ಮಂಜುನಾಥ ಸುಣಗಾರ, ಶ್ರೀಧರ ಸುಲ್ತಾನಪುರ, ಸುಭಾಸ ಕದಡಿ, ಪ್ರಕಾಶ ಪೂಜಾರ, ಬಸವರಾಜ ಜಿಗಳೂರ, ಹನಮಂತಪ್ಪ ಮಾನ್ವಿ, ಗೋಪಾಲ ಲಕ್ಷ್ಮೇಶ್ವರ, ಕೃಷ್ಣಾ ಬಾರಕೇರ, ವಿನೋದ ಜಕನೂರ, ನೀಲಕಂಠ ಗುಡಿಸಾಗರ, ಕಿರಣ ಕದಡಿ, ಜಿ.ಬಿ. ನರಗುಂದ, ನಾಗರಾಜ ಗುಡಿಸಾಗರ ಸೇರಿದಂತೆ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಮುಂದಿನ ಸಿಎಂ ಯಾರು?’ ಎನ್ನುವ ಬಗ್ಗೆಯೂ ರಾಜ್ಯದಲ್ಲಿ ಬೆಟ್ಟಿಂಗ್‌ - ನಿಯಂತ್ರಿಸಿ'
ಕ್ರೈಂ ಹೆಚ್ಚಳಕ್ಕೆ ಸಿಬ್ಬಂದಿ ಕೊರತೆ ಕಾರಣ : ಡಾ.ಜಿ.ಪರಮೇಶ್ವರ್‌