ಕನ್ನಡಪ್ರಭ ವಾರ್ತೆ ಭಾರತೀನಗರ
ಕರವೇ ಚಿಕ್ಕರಸಿನಕೆರೆ ಹೋಬಳಿ ಘಟಕದ ಅಧ್ಯಕ್ಷ ಬಿ.ರಾಮಚಂದ್ರೇಗೌಡ ಮಾತನಾಡಿ, ಸರ್ಕಾರ ನಾಮ ಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಭಾಷೆ ಬಳಸುವಂತೆ ಫೆ.28 ವರೆಗೆ ಗಡುವು ನೀಡಿ ಆದೇಶ ಹೊರಡಿಸಿದೆ. ಆದರೆ, ಇಲ್ಲಿ ಶೇ.10 ರಷ್ಟು ಕನ್ನಡ ಭಾಷೆ ಬಳಸದ ನಾಮಫಲಕಗಳಿವೆ ಎಂದು ಆರೋಪಿಸಿದರು.
ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಈ ಕೂಡಲೇ ಕನ್ನಡ ನಿರ್ಲಕ್ಷಿಸಿರುವ ನಾಮಫಲಕಗಳನ್ನು ಈ ಕೂಡಲೇ ತೆರವುಗೊಳಿಸಬೇಕು. ಇಲ್ಲದಿದ್ದರೆ ನಾವೇ ನಾಮಫಲಕಗಳನ್ನು ತೆರವುಗೊಳಿಸಬೇಕಾಗುತ್ತದೆ ಎಚ್ಚರಿಕೆ ನೀಡಿದರು.ಕರವೇ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ, ಮದ್ದೂರು ತಾಲೂಕು ಮಹಿಳಾ ಅಧ್ಯಕ್ಷೆ ಪ್ರಭಾವತಿ ಬೋರೇಗೌಡ, ಮುಖಂಡರಾದ ಲೀಲಾ ರಾಮೇಗೌಡ, ರಘು ವೆಂಕಟೇಗೌಡ, ಅರೆಚಾಕನಹಳ್ಳಿ ಕೃಷ್ಣ, ಗುಡಿಗೆರೆ ಕಾಂತರಾಜು, ಕರಡಕೆರೆ ಯೋಗೇಶ್, ಹೊನ್ನಾಯಕನಹಳ್ಳಿ ರಮೇಶ್, ಬಿದರಹೊಸಹಳ್ಳಿ ಹೇಮಾಬೋರೇಗೌಡ, ಮಾದರಹಳ್ಳಿ ಚೌಡೇಗೌಡ, ಕಳ್ಳಿಮೆಳೆದೊಡ್ಡಿ ನಾಗೇಶ್, ಸೇರಿದಂತೆ ಹಲವರಿದ್ದರು.