ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ

KannadaprabhaNewsNetwork |  
Published : Nov 22, 2025, 02:00 AM IST
ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆಯಿಂದ ಸಿಎಂಗೆ ಮನವಿ | Kannada Prabha

ಸಾರಾಂಶ

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆಯಿಂದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಶಾಖೆಯಿಂದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಲಾಯಿತು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಮುಖ್ಯಮಂತ್ರಿ ಮನವಿ ಸಲ್ಲಿಸಿದ್ದು, ಹನೂರು ತಾಲೂಕಿನ ರಾಮಾಪುರ ಪಂಚಾಯಿತಿ, ಎಲ್ಲೇಮಾಳ ಪಂಚಾಯಿತಿ, ದೊಡ್ಡ ಅಲತ್ತೂರು ಪಂಚಾಯಿತಿ, ಹೂಗ್ಯಂ ಪಂಚಾಯಿತಿ, ಮಾರ್ಟಳ್ಳಿ ಪಂಚಾಯಿತಿ, ಶೆಟ್ಟಳ್ಳಿ ಪಂಚಾಯಿತಿ, ಸೂಳೇರಿಪಾಳ್ಯ ಪಂಚಾಯಿತಿ, ಕುರಟ್ಟಿ ಹೊಸೂರು ಪಂಚಾಯಿತಿ, ಅಜ್ಜೀಪುರ ಪಂಚಾಯಿತಿ ವ್ಯಾಪ್ತಿಗಳಲ್ಲಿ ಸರಿಯಾದ ಮಳೆ ಇಲ್ಲದೆ ಅಂತರ್ಜಲ ಮಟ್ಟ 1300 ಆಡಿಗೆ ದಾಟಿದೆ. ದಂಟಳ್ಳಿ ಮಾರ್ಗವಾಗಿ ಶೆಟ್ಟಳ್ಳಿ, ಮಾರ್ಟಳ್ಳಿ, ಕುರಟ್ಟಿ ಹೊಸೂರು ಪಂಚಾಯಿತಿಯ ವ್ಯಾಪ್ತಿಯ ಹಳ್ಳಕೊಳ್ಳ ಹಾಗೂ ಹಾಲೇರಿಕೆರೆ, ಕಿರೇಪಾತಿ ಇನ್ನಿತರ ಕೆರೆಗಳಿಗೆ ನೀರು ತುಂಬಿಸಲು ದಂಟ್ನಳ್ಳಿ ಪಕ್ಕದಲ್ಲಿರುವ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ಒದಗಿಸುವಂತೆ ಮನವಿ ಮಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಬಗರ್‌ ಹುಕುಂ, ಸಾಗುವಳಿ ಮಾಡುತ್ತಿರುವ ರೈತರಿಗೆ ಪಹಣಿ ಹೊಂದಿರುವ ರೈತರಿಗೆ ಸರ್ಕಾರ ನೀಡುವ ಎಲ್ಲಾ ಸವಲತ್ತುಗಳನ್ನು ಬಗರ್ ಹುಕ್ಕು ಸಾಗುವಳಿ ಮಾಡುತ್ತಿರುವ ರೈತರಿಗೂ ಸವಲತ್ತುಗಳನ್ನು ನೀಡಬೇಕು. ಹಾಗೂ ಕಾಡುಪ್ರಾಣಿಗಳಿಂದ ಬೆಳೆ ನಷ್ಟ ಆದರೆ ಸಂಪೂರ್ಣ ನಷ್ಟವನ್ನು ಭರಿಸಲು ಕ್ರಮವಹಿಸಬೇಕು.

ಕೊಳ್ಳೇಗಾಲ ತಾಲೂಕಿನ ಕೋಟೆಕೆರೆಗೆ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ನೀರು ತುಂಬಿಸುವುದು, ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಆಲಂಬಾಡಿ. ಮಾರಿಕೊಟ್ಟೆ, ಜಂಬುಪಟ್ಟಿ, ಅಪ್ಪಕಂಪಟ್ಟಿ, ಪೊಂಗಂ ಆತ್ತೂರು, ಪುದುಕಾಡು, ತೆಂಗಯ್ಯಕೊಂಡು ಗ್ರಾಮಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿ ಪಾರಂಪಾರಿಕ ಅರಣ್ಯ ಹಕ್ಕು ಕಾಯ್ದೆಯಡಿ ಸಾಗುವಳಿ ಚೀಟಿ ನೀಡುವಂತೆ ಮನವಿ ಮಾಡಿದರು.

ರೈತರು ತಮ್ಮ ಜಮೀನುಗಳಲ್ಲಿ ಬೆಳೆದಿರುವ ಸಾಗುವಾನಿ ಮರಗಳನ್ನು ಕಟಾವು ಮಾಡಲು ಅನುಮತಿಯನ್ನು ಸರಳೀಕರಣ ಮಾಡಬೇಕು ಹಾಗೂ ಸರ್ಕಾರಿ ಡಿಪೋಗಳಲ್ಲಿ ಮಾರಾಟ ಮಾಡಿದಾಗ ರೈತರಿಂದ ಮಾರಾಟ ಮೌಲ್ಯದಲ್ಲಿ ಶೇ. 10ರಷ್ಟು ಮೊತ್ತವನ್ನು ಅರಣ್ಯ ಇಲಾಖೆ ಕಡಿತಗೊಳಿಸಿ. ರೈತರಿಗೆ ವಿಳಂಬ ಪಾವತಿ ಮಾಡುತ್ತಿದ್ದು, ಇದು ಕೃಷಿ ಉತ್ಪನ್ನ ಮಾರಾಟ ನಿಯಮಗಳಿಗೆ ವಿರುದ್ಧವಾಗಿದೆ. ರೈತರಿಂದ ಮಾರಾಟವಾದ ಮೊತ್ತದಲ್ಲಿ ಯಾವುದೇ ಕಡಿತಗೊಳಿಸದೇ, ಪೂರ್ಣ ಮಾರಾಟದ ಮೌಲ್ಯವನ್ನು ರೈತರಿಗೆ ಶೀಘ್ರವಾಗಿ ಪಾವತಿಸುವಂತೆ ಅಗತ್ಯ ಕ್ರಮವಹಿಸುವುದು. ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಹೆಗ್ಗವಾಡಿ ಮಹೇಶ್ ಕುಮಾರ್, ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್ ಪ್ರಭು, ವಿಭಾಗೀಯ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಭಾಸ್ಕರ್, ಚಿನ್ನಸ್ವಾಮಿ ಗೌಂಡರ್, ಅರಸ್ ಇತರರು ಹಾಜರಿದ್ದರು.

PREV

Recommended Stories

ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದಾರೆ
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗಲಿ: ರಮೇಶ ಬಂಡಿಸಿದ್ದೇಗೌಡ